‘ಅನಿಮಲ್’ನಿರ್ಮಾಣ ಸಂಸ್ಥೆಯಿಂದಲೇ ಚಿತ್ರ ತಂಡದ ಮೇಲೆ ಕೇಸ್! – ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲ್ಲ?
ರಣಬೀರ್ ನಟನೆಯ ಅನಿಮನ್ ಸಿನಿಮಾ ಹಲ್ ಚಲ್ ದೃಶ್ಯಗಳಿಂದಲೇ ಭಾರಿ ಸದ್ದು ಮಾಡಿತ್ತು. ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಿಸ್ಸಿಂಗ್ ಸೀಸ್ ಭಾರಿ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲೂ ಭಾರಿ ಸದ್ದು ಮಾಡಿತ್ತು. ಚಿತ್ರ ತಂಡ ಒಟಿಟಿಯಲ್ಲೂ ಕೂಡ ರಿಲೀಸ್ ಮಾಡಲು ಭರ್ಜರಿ ಸಿದ್ದತೆ ನಡೆಸಿತ್ತು. ಜನವರಿ 26ರಂದು ನೆಟ್ಫ್ಲಿಕ್ಸ್ ಮೂಲಕ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತಿಳಿಸಿದ್ದರು. ಆದರೆ, ಈ ಚಿತ್ರಕ್ಕೆ ತೊಂದರೆ ಒಂದು ಎದುರಾಗಿದೆ. ಹೀಗಾಗಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗೋದು ಡೌಟ್ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಿಲಿಂಡರ್ ಗೆ ಬೈ ಬೈ.. ಒಲೆಯಲ್ಲೇ ಅಡುಗೆ! – ಮೋದಿ ಉಜ್ವಲ ಕನಸಿಗೆ ಕೊಳ್ಳಿ ಇಟ್ಟಿದ್ಯಾರು?
ಹೌದು, ಅನಿಮನ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಮಾಡಲು ತೊಡಕು ಉಂಟಾಗಿದೆ. ‘ಅನಿಮಲ್’ ಸಿನಿಮಾ ನಿರ್ಮಾಣ ಮಾಡಲು ಹಣ ಹೂಡಿದವರಲ್ಲಿ ‘ಸಿನಿ 1 ಸ್ಟುಡಿಯೋಸ್’ ಕೂಡ ಒಂದು ಎನ್ನಲಾಗಿದೆ. ಸಿನಿಮಾದಿಂದ ಬರುವ ಲಾಭ ಹಂಚಿಕೆಗೆ ಸಂಬಂಧಿಸಿ ಒಪ್ಪಂದ ಪತ್ರವೊಂದನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಟಿ-ಸೀರಿಸ್ ಇದನ್ನು ಪಾಲಿಸಿಲ್ಲ ಎನ್ನಲಾಗಿದೆ. ಹೀಗಾಗಿ ‘ಸಿನಿ 1 ಸ್ಟುಡಿಯೋ’ ಮಾಲೀಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ, ಕೋರ್ಟ್ನಲ್ಲಿ ಕೇಸ್ ಹಾಕಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ರಿಲೀಸ್ ಆಗುವುದಕ್ಕೆ ತಡೆ ನೀಡಬೇಕು ಹಾಗೂ ‘ಅನಿಮಲ್’ ಸಿನಿಮಾ ಸೀಕ್ವೆಲ್ನಲ್ಲಿ ತಮಗೂ ಹಕ್ಕು ನೀಡಬೇಕು ಎಂದು ಸಂಸ್ಥೆ ಕೋರ್ಟ್ನಲ್ಲಿ ಹೇಳಿದೆ.
ನ್ಯಾಯಮೂರ್ತಿ ಸಂಜೀವ್ ನರುಲಾ ಅವರನ್ನೊಳಗೊಂಡ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ಮಾಡಿದೆ. ‘ಅನಿಮಲ್ ಸಿನಿಮಾದಿಂದ ಬಂದ ಲಾಭ ಹಾಗೂ ಇತರ ಹಕ್ಕು ಮಾರಾಟದಿಂದ ಬಂದ ಹಣದಲ್ಲಿ ಒಂದೇ ಒಂದು ರೂಪಾಯಿ ಕೂಡ ಸಂಸ್ಥೆಗೆ ಸಿಕ್ಕಿಲ್ಲ. ಬಂದ ಲಾಭದಲ್ಲಿ ಶೇ.35 ನಮಗೆ ನೀಡಬೇಕಿತ್ತು’ ಎಂದು ‘ಸಿನಿ 1 ಸ್ಟುಡಿಯೋಸ್’ ವಕೀಲ ಸಂದೀಪ್ ಸೇಥಿ ಅವರು ಕೋರ್ಟ್ ಎದುರು ವಾದ ಮಂಡಿಸಿದ್ದಾರೆ. ಟಿ-ಸೀರಿಸ್ ವಕೀಲ ಅಮಿತ್ ಸಿಬಾ ಅವರು ತಮ್ಮ ವಾದ ಮುಂದಿಟ್ಟಿದ್ದಾರೆ. ‘ಸಿನಿ 1 ಯಾವುದೇ ಹೂಡಿಕೆ ಮಾಡಿಲ್ಲ’ ಎಂದು ಅವರು ವಾದಿಸಿದ್ದಾರೆ.
ಸದ್ಯ ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ. ಒಂದೊಮ್ಮೆ ಪ್ರಕರಣ ಇತ್ಯರ್ಥ ಆಗದೇ ಇದ್ದರೆ ಅದು ‘ಅನಿಮಲ್’ ಒಟಿಟಿ ರಿಲೀಸ್ ಆಗೋದು ಡೌಟ್ ಅಂತಾ ಹೇಳಲಾಗುತ್ತಿದೆ.