ಸಖತ್‌ ಸೌಂಡ್‌ ಮಾಡುತ್ತಿದೆ ʼArticle 370ʼ ಟ್ರೇಲರ್‌! – ಸಿನಿಮಾದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪಾತ್ರ?

ಸಖತ್‌ ಸೌಂಡ್‌ ಮಾಡುತ್ತಿದೆ ʼArticle 370ʼ ಟ್ರೇಲರ್‌! – ಸಿನಿಮಾದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪಾತ್ರ?

ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌ ಸಿನಿಮಾದ ಬಳಿಕ ಮತ್ತೊಮ್ಮೆ ನಟಿ ಯಾಮಿ ಗೌತಮ್‌ ಅದೇ ಮಾದರಿಯ ಸಿನಿಮಾದೊಂದಿಗೆ ತೆರೆಯ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್‌ 370ಯನ್ನು ತೆಗೆದಿದ್ದರ ಕಥಾ ಹಂದರವನ್ನು ಹೊಂದಿರುವ ‘Article 370’ ಸಿನಿಮಾದಲ್ಲಿ ನಟಿ ಯಾವಿ ಗೌತಮಿ ನಟಿಸಿದ್ದಾರೆ. ಈ  ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

ಇದನ್ನೂ ಓದಿ: ಇಶಾನ್ ಕಿಶನ್‌ಗೆ ಹೊಟ್ಟೆಕಿಚ್ಚು ಯಾಕೆ? – ಕೋಚ್ ರಾಹುಲ್ ದ್ರಾವಿಡ್ ವಾರ್ನಿಂಗ್ ಮಾಡಿದ್ಯಾಕೆ?

ಗುರುವಾರ ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಸಿನಿಮಾದ ಟ್ರೇಲರ್‌ ಬಿಡುಗಡೆಯ ಮಾಹಿತಿ ನೀಡಿರುವ ತಂಡ, ‘ಪೂರಾ ಕಾ ಪೂರಾ ಕಾಶ್ಮೀರ್, ಭಾರತ್‌ ದೇಶ್‌ ಕಾ ಹಿಸ್ಸಾ ಥಾ, ಹೇ, ಔರ್‌ ರೆಹೇಗಾ..’ (ಕಾಶ್ಮೀರ ಎಲ್ಲಾ ಭಾಗಗಳು ಭಾರತದ ಭಾಗವಾಗಿತ್ತು, ಭಾಗವಾಗಿದೆ ಹಾಗೂ ಭಾಗವಾಗಿ ಇರಲಿದೆ) ಆರ್ಟಿಕಲ್‌ 370 ಟ್ರೇಲರ್‌ ಈಗ ಹೊರಬಿದ್ದಿದೆ’ ಫೆಬ್ರವರಿ  23 ರಂದು ಸಿನಿಮಾಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಸಿನಿಮಾ ತಂಡ ಬರೆದುಕೊಂಡಿದೆ.

ಕನ್ನಡತಿ ಪ್ರಿಯಾ ಮಣಿ ಹಾಗೂ ಬಾಲಿವುಡ್ ನಟಿ ಯಾಮಿನಿ ಗೌತಮ್ ಕಾಂಬಿನೇಷನ್ ನ ‘ಆರ್ಟಿಕಲ್ 370’ ಸಿನಿಮಾ ಟ್ರೈಲರ್ ಗೆ ಒಂದೇ ದಿನದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಟಿ ಯಾಮಿ ಗೌತಮ್‌ ಖಡಕ್‌ ಎನ್‌ಐಎ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಟ್ರೈಲರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾತ್ರಗಳಿವೆ. ಜಮ್ಮು ಕಾಶ್ಮೀರದ ವಿಶೇಷಾಧಿಕಾರವಾದ ಆರ್ಟಿಕಲ್ 370 ಅನ್ನು ತೆಗೆದು ಹಾಕಲಾದ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

Shwetha M