ಚಿನ್ನಕ್ಕಾಗಿ ಭಾರತ vs ಶ್ರೀಲಂಕಾ ಫೈಟ್ ! – ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ

2026 Asian Games ಮಹಿಳಾ ಟಿ20 ಕ್ರಿಕೆಟ್ನ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಜಪಾನ್ನ ನಿಶ್ಶಿನ್ನಲ್ಲಿರುವ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆಯುತ್ತಿರುವ ಚಿನ್ನದ ಪದಕದ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ತಂಡ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಬರೋಬ್ಬರಿ 114 ರನ್ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ಶಫಾಲಿ ವರ್ಮಾ ಐತಿಹಾಸಿಕ ಶತಕ ಸಿಡಿಸಿ ಮಿಂಚಿದ್ದರು. ಅವರು ಕೇವಲ 49 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿ, 9 ಸಿಕ್ಸರ್ಗಳೊಂದಿಗೆ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಭಾರತ 195 ರನ್ ಗಳಿಸಿದರೆ, ಬಾಂಗ್ಲಾದೇಶ ಕೇವಲ 81 ರನ್ಗಳಿಗೆ ಆಲೌಟ್ ಆಗಿತ್ತು.
ಇದನ್ನೂ ಓದಿ: ಟೀಂ ಇಂಡಿಯಾ 11 Vs ವರ್ಲ್ಡ್ XI – ಬಲಿಷ್ಠರು Vs ಶ್ರೇಷ್ಠರ ಕಾಳಗ ಹೇಗಿರುತ್ತೆ?
ಇತ್ತ ಶ್ರೀಲಂಕಾ ತಂಡ ಸೆಮಿಫೈನಲ್ನಲ್ಲಿ ಪಾಕಿಸ್ತಾನವನ್ನು 8 ವಿಕೆಟ್ಗಳಿಂದ ಮಣಿಸಿ ಫೈನಲ್ಗೆ ಬಂದಿದೆ. ನಾಯಕಿ ಚಮಾರಿ ಅಟ್ಟಪಟ್ಟು 50 ಎಸೆತಗಳಲ್ಲಿ ಅಜೇಯ 83 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹೀಗಾಗಿ ಏಷ್ಯನ್ ಗೇಮ್ಸ್ ಚಿನ್ನದ ಪದಕಕ್ಕಾಗಿ ನಡೆಯುತ್ತಿರುವ ಈ ಕಾದಾಟದಲ್ಲಿ ಉಭಯ ತಂಡಗಳ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಭಾರತ ಈಗಾಗಲೇ ಹಿಂದಿನ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಬಾರಿ ಕೂಡ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿದಿದೆ

ನೋಡಿರಿ


2 thoughts on “ಚಿನ್ನಕ್ಕಾಗಿ ಭಾರತ vs ಶ್ರೀಲಂಕಾ ಫೈಟ್ ! – ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ”