ಹಾಳೆ ತಟ್ಟೆ ಉದ್ಯಮಕ್ಕೆ ಬಿಗ್ ಶಾಕ್ – ಅಡಿಕೆ ತಟ್ಟೆಯಲ್ಲಿ ತಿಂದ್ರೆ ಕ್ಯಾನ್ಸರ್!
ರಾಜ್ಯದಲ್ಲಿ 3 ಸಾವಿರ ಘಟಕ ಸ್ಟಾಪ್?

ಮಲೆನಾಡು ಅಂದ್ರೆ ನನೆಪಾಗೋದು ಅಡಿಕೆ ಬೆಳೆಗಾರರು.. ಈಗ ಕೇವಲ ಅಡಿಕೆ ಮಲೆನಾಡಿಗೆ ಮಾತ್ರ ಸೀಮತವಾಗಿಲ್ಲ.. ರಾಜ್ಯದ ವಿವಿಧ ಜಿಲ್ಲೆಗಳಿಗೆ ಅಡಿಕೆ ವಿಸ್ತರಿಸಿಕೊಂಡಿದೆ.. ಅಡಿಕೆ ವಾಣಿಜ್ಯ ಬೆಳೆ ಆಗಿರೋದ್ರಿಂದ ಸಾಕಷ್ಟು ರೈತರು ಭತ್ತ ಬೆಳೆಯೋದ್ದನ್ನ ಬಿಟ್ಟು ಅಡಿಕೆ ತೋಟದ ಕಡೆ ಗಮನ ಹರಿಸುತ್ತಿದ್ದಾರೆ.. ಅಡಿಕೆ ವಾರ್ಷಿಕ ಬಳೆಯಾದ್ರೂ ಭರ್ಜರಿ ಆದಾಯ ನೀಡುತ್ತೆ.. ಖರ್ಚು ಕಡಿಮೆ ಅನ್ನೋ ಕಾರಣಕ್ಕೆ ರೈತರು ಹೆಚ್ಚಾಗಿ ಅಡಿಕೆಯನ್ನ ಬೆಳೆಯುತ್ತಾರೆ.. ಅಡಿಕೆಯಿಂದ ಮಾತ್ರ ಅಲ್ಲ ಅಡಿಕೆ ಹಾಳೆಯಿಂದ ಕೂಡ ಒಳ್ಳೆಯ ಆದಾಯ ಬರುತ್ತೆ.. ಸಾಕಷ್ಟು ಜನ ಹಾಳೆ ತಟ್ಟೆ ತಯಾರಿಕೆ ಕಂಪನಿಗಳನ್ನ ಶುರುಮಾಡಿಕೊಂಡು ಆದಾಯ ಗಳಿಸುತ್ತಿದ್ದಾರೆ.. ಆದ್ರೆ ಅಡಿಕೆ ಹಾಳೆ ತಟ್ಟೆಗೆ ಈಗ ಒಂದು ಕಳಂಕ ಬಂದಿದೆ. ಅಡಿಕೆ ತಟ್ಟೆಯಲ್ಲಿ ಆಹಾರ ಸೇವಿಸಿದ್ರೆ ಕ್ಯಾನ್ಸರ್ ಬರುತ್ತೆ ಅನ್ನೋ ಸುದ್ದಿ ಈಗ ಬರಸಿಡಿಲಿನಂತೆ ಅಪ್ಪಳಿಸಿದೆ.. ಇದ್ರಿಂದ ಅಡಿಕೆ ಬೆಳಗಾರರು.. ಅಡಿಕೆ ತಟ್ಟೆ ತಯಾರಕರು.. ಅದ್ದನ್ನ ನಂಬಿಕೊಂಡಿದ್ದ ಕಾರ್ಮಿಕರು ಕಂಗಾಲಾಗಿ ಹೋಗಿದ್ದಾರೆ..
ಕರ್ನಾಟದಕದಲ್ಲಿ.. ಅದರಲ್ಲೂ ಹೆಚ್ಚಾಗಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅಡಿಕೆಯನ್ನ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ.. ಇಲ್ಲಿ ಅಡಿಕೆ ಇಲ್ಲ ಅಂದ್ರೆ ಇವರ ಜೀವನವೇ ನಡೆಯಲ್ಲ. ಮೊದಲು ಕೇವಲ ಅಡಿಕೆಯಿಂದ ಮಾತ್ರ ಲಾಭ ನೋಡುತ್ತಿದ್ದವರಿಗೆ ಅಡಿಕೆ ಹಾಳೆಯಿಂದ ತಟ್ಟೆ ತಯಾರು ಮಾಡಿದ ಮೇಲೆ ಮತ್ತಷ್ಟು ಲಾಭ ಮಾಡೋಕೆ ಶುರುಮಾಡಿದ್ರು. ದಿನದಿಂದ ದಿನಕ್ಕೆ ಅಡಿಕೆ ತಟ್ಟೆ ಮತ್ತು ಬಾಲ್ ಸಿದ್ಧಪಡಿಸುತ್ತಿರುವ ಉದ್ಯಮ ಹೆಚ್ಚಾಗುತ್ತಿದೆ. ರೈತರು , ಉದ್ಯೋಮಿಗಳು ಕಾರ್ಮಿಕರು ಇದ್ದನ್ನ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಡುವೆ ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂಬ ವರದಿ ಈಗ ಬೆಳೆಗಾರರನ್ನು ಹಾಗೂ ಹಾಳೆ ತಟ್ಟೆ ಉದ್ಯಮವನ್ನೇ ನೆಚ್ಚಿಕೊಂಡಿದ್ದವರನ್ನು ಕಂಗಾಲಾಗಿಸಿದೆ.
ಅಡಿಕೆ ತಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆ!
ಈಗಾಗಲೇ ಅಡಿಕೆ ಬೆಳೆಗಾರರು ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ. ಅಡಿಕೆಯು ಆರೋಗ್ಯಕ್ಕೆ ಹಾನಿಕಾರ, ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವಿಚಾರ ಕಳೆದ 10 ವರ್ಷಗಳಿಂದ ಚರ್ಚೆಯಲ್ಲಿ. ಸಂಶೋಧನೆಗಳೂ ನಡೆಯುತ್ತಿವೆ. ಈಗಾಗಲೇ ಕೇಂದ್ರ ಸರಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರ ಎಂದು ಸುಪ್ರೀಂಕೊರ್ಟ್ಗೆ ವರದಿ ನೀಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈಗ ಅಡಿಕೆ ಹಾಳೆಯಿಂದ ಸಿದ್ಧಪಡಿಸುವ ತಟ್ಟೆಯಲ್ಲೂ ಆರೋಗ್ಯಕ್ಕೆ ಹಾನಿಕಾರವಾಗಿರುವ ಅಂಶ ಇದೆ ಎನ್ನುವ ಅಮೇರಿಕದ ಎಫ್ಡಿಎ ವರದಿ ಮತ್ತೆ ಅಡಿಕೆ ಬೆಳೆಗಾರರ ನಿದ್ದೆಗೆಡಿಸಿ
Vis flow..
ಅಮೆರಿಕ ಮೇ 8 ರಿಂದಲೇ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆಯನ್ನ ಬಳಸೋದ್ದನ್ನ ಕಾನೂನು ಬದ್ಧವಾಗಿ ಬ್ಯಾನ್ ಮಾಡಿದೆ. ಇದ್ದಕ್ಕೆ ಕಾರಣ FDA ಸಂಶೋಧನೆಯಲ್ಲಿ ಹಾಳೆ ತಟ್ಟೆಯಲ್ಲಿ ಕಂಡು ಬಂದಿರೋ ವಿಷಕಾರಿ ಅಂಶ.. ಈ ವರದಿ ಪ್ರಕಾರ ಅಡಿಕೆ ತಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಹಾಗೂ ಅಲ್ಕಲೈಡ್ ಅನ್ನೋ ವಿಷಕಾರಿ ಅಂಶ ಪತ್ತೆಯಾಗಿದೆ..
ಅಡಿಕೆ ಹಾಳೆಗಳಿಂದ ಮಾಡಿದ ತಟ್ಟೆ, ಲೋಟಗಳು ಕೆಲ ಟೈಂನಲ್ಲಿ ಅಂದ್ರೆ ಬಿಸಿ ಪದಾರ್ಥಗಳು ಹಾಕಿದಾಟ ಅಥವಾ ಕೆಲ ವಾತವರ್ಣದಲ್ಲಿ ವಿಷಕಾರಿ ರಾಸಾಯನಿಕಗಳು ಬಿಡುಗಡೆ ಮಾಡುತ್ತಂತೆ.. ಅವು ಆಹಾರ, ಪಾನೀಯದೊಂದಿಗೆ ಬೆರೆತು, ಜನರ ದೇಹ ಸೇರುತ್ತೆ.. ಇದ್ರಿಂದ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವುದು ವಿಜ್ಞಾನಿಗಳ ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಅಮೆರಿಕದಲ್ಲಿ ಹಾಳೆ ತಟ್ಟೆ ಮಾರಾಟ ಮಾಡೋಕೆ ಅವಕಾಶ ಇರುವುದಿಲ್ಲ ಎಂದು ಎಫ್ಡಿಎ ಪ್ರಕಟಿಸಿದೆ. ಈ ಅಂಶ ಪತ್ತೆಯಾಗಿರೋದ್ರಿಂದ ಅಮೆರಿಕ, ಅಡಿಕೆ ತಟ್ಟೆಯನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ. ಇದು ಉದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ.
ಬೀದಿಗೆ ಬರುತ್ತಾ ಅಡಿಕೆ ತಟ್ಟೆ ಉದ್ಯಮ?
ಅಮೆರಿಕ ಅಡಿಕೆ ಹಾಳೆ ತಟ್ಟೆ ಆಮದು ನಿಷೇಧ ಮಾಡಿರುವುದರಿಂದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಲ್ಲಿನ ಅಡಿಕೆ ಹಾಳೆ ತಯಾರಿಕಾ ಘಟಕಗಳಿಗೆ ಭಾರೀ ನಷ್ಟವುಂಟಾಗಲಿದೆ. ಅದ್ರಲ್ಲೂ ಕರ್ನಾಟದಲ್ಲಿ 3000 ಸಾವಿರ ಅಡಿಕೆ ತಯಾರಿಕಾ ಘಟಕಗಳಿವೆ.. 70 ಸಾವಿರಕ್ಕೂ ಹೆಚ್ಚು ಮಹಿಳೆಯರು ಇದ್ದನ್ನೇ ನಂಬಿಕೊಂಡಿದ್ದಾರೆ. ವರ್ಷಕ್ಕೆ 150 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.. ಆದ್ರೆಈಗ ಅಮೆರಿಕದ ವರದಿಯಿಂದ ಎಲ್ಲರಿಗೂ ಆತಂಕ ಎದುರಾಗಿದೆ.
ಸುಳ್ಳು ರಿಪೋರ್ಟ್ ನೀಡುತ್ತಾ ಅಮೆರಿಕ FDA?
ಅಮೆರಿಕಾದ ಎಫ್ಡಿಎ ಸಂಸ್ಥೆಯು ಈ ಹಿಂದೆ ಮಾವು, ಬೇವು, ಅರಿಷಿಣ, ಅಕ್ಕಿ ಹಾಗೂ ಶುಂಠಿಗೂ ಇಂತಹದ್ದೇ ಸಂಶೋಧನಾ ವರದಿಯನ್ನು ತೇಲಿ ಬಿಟ್ಟಿದ್ದವು. ಇದರಿಂದ ಭಾರತದ ರಫ್ತು ವಹಿವಾಟಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿತ್ತು. ಈಗ ಅಡಿಕೆ ಹಾಳೆಯ ಮೇಲೆ ಹೊಡೆತ ಕೊಟ್ಟಿದೆ. ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಇದೆ ಎನ್ನುವ ವರಿದಯನ್ನು ಮಲೆನಾಡಿನ ಅಡಿಕೆ ಬೆಳೆಗಾರರು ಮತ್ತು ಅಡಿಕೆ ತಯಾರಿಕೆ ಘಟಕದವರು ಒಪ್ಪುತ್ತಿಲ್ಲ. ಅಡಿಕೆ ಹಾಳೆ ತಟ್ಟೆ ಪೂರ್ಣವಾಗಿ ನೈಸರ್ಗಿಕವಾಗಿದೆ. ಬೇಕಂತಲೇ ಅಪಪ್ರಚಾರ ನಡೆಯುತ್ತಿದೆ ಎನ್ನುವುದು ಅಡಿಕೆ ಬೆಳೆಗಾರರು ಮತ್ತು ಅಡಕೆ ತಟ್ಟೆ ತಯಾರಿಕೆ ಘಟಕದ ಮಾಲೀಕರ ಮತ್ತು ಉದ್ಯೋಗಸ್ಥರ ವಾದವಾಗಿದೆ. ಒಟ್ನಲ್ಲಿ ಈ ಬಗ್ಗೆ ಬೇರೆ ಸಂಸ್ಥೆಗಳು ಮತ್ತೊಮ್ಮೆ ಸಂಶೋಧನೆ ಮಾಡಿ ನಿಜವಾದ ಸತ್ಯವನ್ನ ಹೊರ ತರಬೇಕಿದೆ..

ನೋಡಿರಿ

