ಶಿವಂ ದುಬೆ, ರಚಿನ್ ರವೀಂದ್ರ ಬೊಂಬಾಟ್ ಬ್ಯಾಟಿಂಗ್ – ಧೋನಿ ತಂತ್ರಗಾರಿಕೆ ವರ್ಕೌಟ್ ಆಗಿದ್ದು ಹೇಗೆ?
ಚೈನ್ನೈನಲ್ಲಿ ಅಕ್ಷರಶಃ ಸುನಾಮಿಗೆ ಸಿಕ್ಕಂತಾಗಿತ್ತು ಗುಜರಾತ್ ಟೈಟನ್ಸ್.. ಅಷ್ಟೊಂದು ಹೀನಾಯವಾಗಿ ಮಾಜಿ ಚಾಂಪಿಯನ್ ಸೋಲುತ್ತೆ ಅಂತ ಖುದ್ದು ಸಿಎಸ್‌ಕೆ ಕೂಡ ಅಂದುಕೊಂಡಿರಲಿಲ್ಲವೇನೋ.. ಹಾಗಿದ್ದರೂ ಈ ಪಂದ್ಯದ ಮೂಲಕ ಭಾರತಕ್ಕೆ ಮತ್ತೊಬ್ಬ ಯುವರಾಜ್ ಸಿಂಗ್ ಸಿಗೋದು ಪಕ್ಕಾ ಆದಂತಿದೆ.. ಇನ್ನು ಧೋನಿ ತಂತ್ರಗಾರಿಕೆ ಸರಿಯಾಗಿಯೇ ವರ್ಕ್ ಆಗ್ತಿದ್ದು, ಸಿಎಸ್‌ಕೆ ಗೆಲುವಿನ ಟ್ರ್ಯಾಕ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಕೊಹ್ಲಿ ಮತ್ತು ಕಾರ್ತಿಕ್ ಸೇರಿದ್ರೆ ಈ ಬಾರಿ ಕಪ್ ನಮ್ದೇ – KK ಇದ್ದಲ್ಲಿ RCB ಗೆಲುವಿನ ಕೇಕೆ
ಶಿವಂ ದುಬೆಯ ಆಟ.. ಬ್ಯಾಟ್ ಹಿಡಿಯುವ ರೀತಿ.. ಬಾರಿಸುವ ಸಿಕ್ಸರ್.. ಬೀಸುವ ಬೌಂಡರಿ.. ಬಾಲ್ ಲೀವ್ ಮಾಡುವ ಸ್ವರೂಪ.. ಎಲ್ಲವೂ ಡಿಟ್ಟೋ ಕಾಪಿ ಪೇಸ್ಟ್ ಮಾಡಿದಂತಿದೆ.. ದುಬೆ ಬ್ಯಾಟಿಂಗ್ ಮಾಡ್ತಿದ್ದರೆ, ಅವರ ಮ್ಯಾನರಿಸಂ ನೋಡ್ತಿದ್ದರೆ, ನಿಜಕ್ಕೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯಾವತ್ತೂ ಮಿಸ್ ಮಾಡ್ಕೊಳ್ಳುವ ಯುವರಾಜ್ ಸಿಂಗ್ ಯೆಲ್ಲೋ ಜರ್ಸಿಯಲ್ಲಿ ಪ್ಯಾಡ್ ಕಟ್ಕೊಂಡು ಬ್ಯಾಟ್ ಹಿಡಿದಂತೆಯೇ ಭಾಸವಾಗುತ್ತದೆ.. ಆದ್ರೆ ಈಗ ಕೇವಲ ಸ್ಟೈಲ್‌ನಲ್ಲಿ ಮಾತ್ರವಲ್ಲ.. ಬ್ಯಾಟಿಂಗ್‌ನಲ್ಲೂ ಯುವಿಯಂತೆಯೇ ಕಾಣಿಸೋದಿಕ್ಕೆ ಶುರುವಾಗಿದ್ದಾರೆ ಶಿವಂ ದುಬೆ.. ಈ ಲೆಫ್ಟ್ ಹ್ಯಾಂಡರ್ ಗುಜರಾತ್ ಟೈಟನ್ಸ್ ವಿರುದ್ಧವಂತೂ ನಿಜಕ್ಕೂ ಮೈಮೇಲೆ ಯುವಿಯೇ ಆವರಿಸಿದಂತೆ ಬ್ಯಾಟ್ ಬೀಸಿದ್ದರು.. ಭರ್ಜರಿ ಐದು ಸಿಕ್ಸರ್ ಭಾರಿಸುವ ಮೂಲಕ ನಾನು ಕೂಡ ಯುವರಾಜ್ ಸಿಂಗ್ ರೀತಿಯಲ್ಲೇ ಅಬ್ಬರಿಸಬಲ್ಲೆ ಎಂದು ತೋರಿಸಿಕೊಟ್ಟಿದ್ದಾರೆ.. ದುಬೆ ಹೊಡೆದ ಒಂದೊಂದು ಶಾಟ್‌ನಲ್ಲೂ ಯುವರಾಜ್ ಸಿಂಗ್‌ಗೆ ಹೋಲಿಕೆಯಿತ್ತು.. ಒಂದೊಂದು ಹಿಟ್‌ನಲ್ಲೂ ಯುವಿ ಮೈದಾನಕ್ಕೆ ಕಾಲಿಟ್ಟಂತೆ ಭಾಸವಾಗುತ್ತಿತ್ತು..
ಅದರಲ್ಲೂ ಕೇವಲ 23 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಮೂಲಕ 51 ರನ್ ಸಿಡಿಸಿ, ಟೂರ್ನಿಯಲ್ಲಿ ತಾನೊಬ್ಬ ಸೀರಿಯಸ್ ಪ್ಲೇಯರ್ ಎಂದು ದುಬೆ ತೋರಿಸಿಕೊಟ್ಟಿದ್ದಾರೆ.. ಹಾಗೆ ನೋಡಿದ್ರೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ದುಬೆ ಚೆನ್ನಾಗಿಯೇ ಬ್ಯಾಟ್ ಬೀಸಿದ್ದರು.. ಅಂದು ಬಹಳ ಆರಾಮಾಗಿ ಫೀಲ್ಡ್‌ನಲ್ಲಿ ಸೆಟ್ ಆಗಲು ಬಾಲ್ ತೆಗೆದುಕೊಂಡಿದ್ದರು.. ನಂತರ ವೇಗವಾಗಿ ಬ್ಯಾಟ್ ಬೀಸಿ, 28 ಎಸೆತಗಳಲ್ಲಿ 34 ರನ್ ಸೇರಿಸಿ ನಾಟೌಟ್ ಆಗಿ ಉಳಿದಿದ್ದರು.. ಆದ್ರೆ ಜಿಟಿ ವಿರುದ್ಧದ ಪಂದ್ಯದಲ್ಲಿ ಮಾತ್ರ ಫೀಲ್ಡಿಗೆ ಇಳಿಯುತ್ತಿದ್ದಂತೆ ಸ್ಪಿನ್ನರ್ ರಶೀದ್ ಖಾನ್‌ಗೆ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಮೂಲಕವೇ ಉತ್ತರಿಸಿ, ತಾನಿಂದು ಕಂಪ್ಲೀಟ್ ಡಿಫರೆಂಟ್ ಬ್ಯಾಟ್ಸ್‌ಮನ್ ಎಂದು ತೋರಿಸಿಕೊಟ್ಟಿದ್ದರು.. ಅಷ್ಟೇ ಅಲ್ಲ ಜಿಟಿ ವಿರುದ್ಧ 5 ಸಿಕ್ಸರ್ ಬಾರಿಸುವ ಮೂಲಕ 2022ರಿಂದ ದುಬೆ ಬಾರಿಸಿದ ಸಿಕ್ಸರ್‌ಗಳು 57ಕ್ಕೆ ಏರಿಕೆಯಾಗಿವೆ.. ಇದರೊಂದಿಗೆ ಇದೇ ಅವಧಿಯಲ್ಲಿ ಅತಿ ಹೆಚ್ಚು ಸಿಕ್ಸ್ ಬಾರಿಸಿದವರ ಸಾಲಿನಲ್ಲಿ ಆಂಡ್ರ್ಯೂ ರಸೆಲ್ ಹಾಗೂ ಲಿವಿಂಗ್ ಸ್ಟೋನ್ ಜೊತೆ ಎರಡನೇ ಸ್ಥಾನದಲ್ಲಿ ದುಬೆ ಸೇರಿಕೊಂಡಿದ್ದಾರೆ. ಈ ಮೂರುವರ್ಷಗಳ ಅವಧಿಯಲ್ಲಿ 59 ಸಿಕ್ಸರ್ ಸಿಡಿಸಿರುವ ಜೋಸ್ ಬಟ್ಲರ್ ಟಾಪ್ 1ನಲ್ಲಿದ್ದಾರೆ.. ಹೀಗೆ ಜಿಟಿ ವಿರುದ್ಧದ ಪಂದ್ಯದಲ್ಲಿ ಶಿವಂ ಮಯವಾಗಿದ್ದರೆ, ಸಿಎಸ್‌ಕೆಯ ಓಪನಿಂಗ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಅಬ್ಬರ ಏನೂ ಕಮ್ಮಿಯಿರಿಲಿಲ್ಲ.. ಕೇವಲ 20 ಎಸೆತ ಮಾತ್ರ ಎದುರಿಸಿದ್ದ ರಚಿನ್ ತಾನು ಬಂದಿದ್ದೇ ಹೊಡೆಯೋದಿಕ್ಕೆ ಎಂಬ ರೀತಿಯಲ್ಲೇ ಆಟವಾಡಿದ್ದರು. 20 ಬಾಲ್‌ಗೆ 46 ರನ್ ಬಾರಿಸಿ ಕೇವಲ 4 ರನ್‌ಗಳಿಂದ ಅರ್ಧಶತಕ ಮಿಸ್ ಮಾಡ್ಕೊಂಡ್ರು.. ಅವರ ಜೊತೆಗೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಕೂಡ ತನ್ನ ಸಹಜ ಆಟದ ಮೂಲಕ ತಂಡಕ್ಕೆ ಆಸರೆಯಾದರು.. ಎರಡನೇ ಪಂದ್ಯದಲ್ಲೂ ಸಿಎಸ್‌ಕೆ ಪರವಾಗಿ ಬ್ಯಾಟಿಂಗ್ ಇಳಿಯಬೇಕಾದ ಅನಿವಾರ್ಯತೆ ಮಹೇಂದ್ರ ಸಿಂಗ್ ದೋನಿಗೆ ಸೃಷ್ಟಿಯಾಗಲೇ ಇಲ್ಲ.. ಕೇವಲ 6 ವಿಕೆಟ್ ಕಳೆದುಕೊಂಡು 206 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಗಿತ್ತು.. ಕಡೆಯ ಎರಡು ಓವರ್‌ಗಳು ಬಾಕಿಯಿದ್ದಾಗ ಶಿವಂ ದುಬೆ ಔಟಾಗುತ್ತಿದ್ದಂತೆ ದೋನಿ ಬ್ಯಾಟಿಂಗ್‌ಗೆ ಬರಬಹುದೇನೋ ಎಂದು ಅಭಿಮಾನಿಗಳು ಕಾಯ್ತಿದ್ದರು.. ಆದ್ರೆ ಅಲ್ಲಿ ರವೀಂದ್ರ ಜಡೇಜಾರನ್ನೂ ಕಳಿಸದೆ ರಿಜ್ವಿಯನ್ನು ಬ್ಯಾಟಿಂಗ್‌ಗೆ ಇಳಿಸಿ, ದೋನಿ ಹೊಸ ಗೇಮ್ ಪ್ಲಾನ್ ರೂಪಿಸಿದ್ದು ಸ್ಪಷ್ಟವಾಗಿತ್ತು.. ಕೇವಲ 6 ಎಸೆತಗಳಲ್ಲಿ 2 ಸಿಕ್ಸರ್ ಸಮೇತ 14 ರನ್ ಹೊಡೆದ ರಿಜ್ವಿ ತಾನು ಕೂಡ ಗೇಮ್ ಫಿನಿಷರ್ ಆಗಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.. ಇನ್ನು ಗುಜರಾತ್ ಟೈಟನ್ಸ್ ಬ್ಯಾಟಿಂಗ್‌ನಲ್ಲಿ ಯಾವುದೇ ರೀತಿಯ ಹೊಳಪು ಕಾಣಲೇ ಇಲ್ಲ.. ಗೆಲ್ಲುವ ಪ್ರಯತ್ನವನ್ನೇ ಕೈಬಿಟ್ಟವರಂತೆ ಜಿಟಿ ಬ್ಯಾಟಿಂಗ್ ಮಾಡಿತ್ತು.. ಅಲ್ಲದೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸಿಕ್ಕಾಪಟ್ಟೆ ಹೊಡೆಸಿಕೊಂಡಿದ್ದ ತುಷಾರ್ ದೇಶಪಾಂಡೆ, ಜಿಟಿ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ ಕೇವಲ 21 ರನ್ ನೀಡಿ 2 ವಿಕೆಟ್ ಗಳಿಸಿದ್ರು.. 5.25ರ ಎಕಾನಮಿಯಲ್ಲಿ ಬೌಲಿಂಗ್ ಮಾಡುವ ಮೂಲಕ ಧೋನಿ ತನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ತುಷಾರ್ ಉಳಿಸಿಕೊಂಡಿದ್ದಾರೆ.. ಯುವ ಆಟಗಾರರು ಒಂದು ಪಂದ್ಯದಲ್ಲಿ ವಿಫಲರಾದರೂ ಅವರನ್ನು ಮತ್ತೊಂದು ಪಂದ್ಯದಲ್ಲಿ ಆಡಿಸುವ ವಾಡಿಕೆಯನ್ನು ಸಿಎಸ್‌ಕೆ ಮುಂದುವರೆಸಿರೋದ್ರಲ್ಲಿ ಧೋನಿ ಪಾತ್ರ ದೊಡ್ಡದಿದೆ.. ಇದೇ ತುಷಾರ್ ದೇಶಪಾಂಡೆಯ ಮೇಲೆ ಕಳೆದ ಸೀಸನ್‌ನಲ್ಲೂ ಧೋನಿ ಸಿಕ್ಕಾಪಟ್ಟೆ ವಿಶ್ವಾಸವಿಟ್ಟು ಆಡಿಸಿದ್ದರು.. ಅದ್ರಿಂದಾಗಿ ಟೈಟಲ್ ಗೆಲ್ಲುವವರೆಗೂ ಸಿಎಸ್‌ಕೆ ಪರವಾಗಿ ತುಷಾರ್ ದೇಶಪಾಂಡೆ ಒಳ್ಳೆಯ ಕೊಡುಗೆ ನೀಡಿದ್ದರು.. ಈಗಲೂ ಅಂತದ್ದೇ ಭರವಸೆಯನ್ನು ಈ ಯುವ ಆಟಗಾರನ ಮೇಲೆ ಸಿಎಸ್‌ಕೆ ಇಟ್ಟಿದೆ.. ಅಂತೂ ದೊಡ್ಡ ಅಂತರದಲ್ಲಿ ಜಿಟಿ ವಿರುದ್ಧ ಗೆಲ್ಲುವ ಮೂಲಕ ನೆಟ್‌ರನ್ ರೇಟ್ ಹೆಚ್ಚಿಸಿಕೊಂಡಿರುವ ಸಿಎಸ್‌ಕೆ ಪಾಯಿಂಟ್ ಟೇಬಲ್‌ನಲ್ಲಿಅಗ್ರಸ್ಥಾನದಲ್ಲಿದೆ.. 2022ರ ಸೀಸನ್‌ನಲ್ಲಿ ಸಿಎಸ್‌ಕೆ ಕ್ಯಾಪ್ಟನ್ಸಿಯನ್ನು ರವೀಂದ್ರ ಜಡೇಜಾಗೆ ಕೊಟ್ಟಿತ್ತು.. ಆದ್ರೆ ಆಗ ಅತ್ಯಂತ ಕೆಟ್ಟದಾಗಿ ಸೋತ ಸಿಎಸ್‌ಕೆ ಕಡೆಗೆ ನಾಯಕನನ್ನು ಬದಿಲಿಸಿ ದೋನಿ ಕೈಗೆ ಜವಾಬ್ದಾರಿ ಮತ್ತೆ ನೀಡಿತ್ತು.. ಹಾಗಿದ್ದರೂ ಈ ಬಾರಿ ಹೊಸ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಮಾತ್ರ ಮೊದಲ ಎರಡು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸುವ ಮೂಲಕ, ಧೋನಿಯ ಉತ್ತಮ ಉತ್ತರಾಧಿಕಾರಿಯ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.