ವಿಂಡೀಸ್ ಬೇಟೆಯಾಡಿದ RCB ಹೀರೋ – 12 ಓವರ್.. 5 ವಿಕೆಟ್ ಕಿತ್ತ ಜೋಶ್

ವಿಂಡೀಸ್ ಬೇಟೆಯಾಡಿದ RCB ಹೀರೋ – 12 ಓವರ್.. 5 ವಿಕೆಟ್ ಕಿತ್ತ ಜೋಶ್

ಐಪಿಎಲ್ 2025 ರಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ  ಹೇಜಲ್‌ವುಡ್ ಈಗ ತಮ್ಮ ದೇಶದ ಪರವೂ ಮಿಂಚುತ್ತಿದ್ದಾರೆ. ತಮ್ಮ ಅದ್ಭುತ ಬೌಲಿಂಗ್ ಮೂಲಕ ತನ್ನ ತಂಡಕ್ಕೆ ಗೆಲುವಿನ ಕೊಡುಗೆಯನ್ನ ನೀಡಿದ್ದಾರೆ. ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ 159 ರನ್‌ಗಳಿಂದ ವೆಸ್ಟ್‌ ಇಂಡೀಸ್ ತಂಡವನ್ನ ಧೂಳಿ ಪಟ ಮಾಡಿದೆ. ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಸ್ಟಾರ್‌ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದು, ವೆಸ್ಟ್‌ ಇಂಡೀಸ್‌ ಅಂದುಕೊಂಡ ಜಯವನ್ನು ಸಾಧಿಸುವಲ್ಲಿ ಪ್ಲಾಫ್ ಆಗಿದೆ.

ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ತಂಡದ ಬ್ಯಾಟರ್‌ಗಳು ಅಟರ್ ಪ್ಲಾಫ್ ಶೋ ತೋರಿಸಿದ್ರು. ಶುಕ್ರವಾರ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 92 ರನ್‌ಗಳಿಂದ ಆಟ ಮುಂದುವರಿಸಿ 310 ರನ್‌ಗಳಿಸಿತ್ತು. ಈ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರದ ಟ್ರಾವಿಸ್ ಹೆಡ್ ಹಾಗೂ ಬ್ಯೂ ವೆಬ್ ಸ್ಟಾರ್ ಜೋಡಿ ತಂಡಕ್ಕೆ ಉತ್ತಮ ಜತೆಯಾಟದ ಕಾಣಿಕೆ ನೀಡಿದ್ರು. ಈ ವೇಳೆ 8 ಬೌಂಡರಿ ನೆರವಿನಿಂದ 61 ರನ್‌ ಬಾರಿಸಿದ್ದ ಟ್ರಾವಿಸ್‌ ಹೆಡ್‌ ಔಟ್ ಆದರು.   ಟ್ರಾವಿಸ್‌ ಹೆಡ್‌ ಔಟ್ ಆಗುತ್ತಿದ್ದಂತೆ ಬ್ಯೂ ವೆಬ್ ಸ್ಟಾರ್ ಸಹ ಇಲ್ಲದ ಹೊಡೆತಕ್ಕೆ ಮುಂದಾಗಿ 63 ರನ್‌ಗಳಿಗೆ ಔಟ್ ಆದರು. ಆಸ್ಟ್ರೇಲಿಯಾ ತಂಡದ ಭರವಸೆಯ ವಿಕೆಟ್‌ ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ತಮ್ಮ ನೈಜ ಆಟವನ್ನು ಆಡಿ ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಇವರು 7 ಬೌಂಡರಿ, 2 ಸಿಕ್ಸರ್ ಸಹಾಯದಿಂದ 65 ರನ್‌ ಬಾರಿಸಿ ಔಟ್ ಆದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಎಡವಿದರು.

ಗೇಮ್ ಚೇಂಜರ್ ಆದ ಜೋಶ್  

 ಇನ್ನು 300 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಅಲ್ಲದೆ ಟಾಪ್ ಆರ್ಡರ್ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ ತಂಡದ ಪರ ವೇಗದ ಬೌಲರ್‌ ಜೋಶ್‌ ಹ್ಯಾಜಲ್‌ವುಡ್‌ ವಿಂಡೀಸ್ ಆಟಕ್ಕೆ ಬಿಗ್ ಬ್ರೇಕ್ ಹಾಕಿದ್ರು. ಜೋಶ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನ ತಗೆದು ಆಸೀಸ್‌ಗೆ ದೊಡ್ಡ ಗೆಲುವನ್ನ ತಂದುಕೊಟ್ರು. ಆಸ್ಟ್ರೇಲಿಯಾ ತಂಡದ ಪರ   ಹ್ಯಾಜಲ್‌ವುಡ್‌ 12 ಓವರ್ ಬೌಲ್ ಮಾಡಿ 43 ರನ್‌ ನೀಡಿ 5 ವಿಕೆಟ್‌  ಕಬಳಿಸಿದರು. ಅಂತಿಮವಾಗಿ ವೆಸ್ಟ್ ಇಂಡಿಸ್ಸ್ 141 ರನ್‌ಗೆ ಆಲೌಟ್ ಆದ್ರೆ, ಆಸೀಸ್ 149 ರನ್‌ಗಳ ಬರ್ಜರಿಯಾಗಿ ಗೆಲುವು ದಾಖಲಿಸಿತು. ಪರಿಣಾಮ ಪ್ರವಾಸಿ ಆಸ್ಟ್ರೇಲಿಯಾ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಐಪಿಎಲ್‌ನಲ್ಲಿ ಆರ್‌ಸಿಬಿಯನ್ನ ಎದುರಾಳಿಗಳಿಂದ ಕಾಪಾಡಿದಂತೆ ಟೆಸ್ಟ್‌ನಲ್ಲಿ ಆಸೀಸ್‌ ಅನ್ನ ಜೋಶ್ ಹೇಜಲವುಡ್ ಕಾಪಾಡಿ ಮತ್ತೆ ಫ್ಯಾನ್ಸ್‌ ಮನಸ್ಸು ಗೆದ್ದಿದ್ದಾರೆ.

Kishor KV