ಯು*ದ್ಧ ನಿಲ್ಲಲ್ಲ.. ಗ್ಯಾಸ್ ಸಿಗಲ್ಲ- ಹೋಟೆಲ್, PG, ಟೆಂಪಲ್ ಊಟ ಕ್ಲೋಸ್!
ಕೊರೊನಾದಂತೆ ಮತ್ತೆ ಲಾಕ್!

ಯು*ದ್ಧ ನಿಲ್ಲಲ್ಲ..  ಗ್ಯಾಸ್ ಸಿಗಲ್ಲ- ಹೋಟೆಲ್, PG, ಟೆಂಪಲ್ ಊಟ ಕ್ಲೋಸ್!ಕೊರೊನಾದಂತೆ ಮತ್ತೆ ಲಾಕ್!

ಎಲ್ಲೋ ಯುದ್ಧ ಆಗುತ್ತೆ ನಮ್ಗೆನು? ಯಾರ್ ಎಲ್ಲೋ ಹೆಡೆದಾಡ್ಕೊಂಡು ಏನೋ ಆದ್ರೆ ನಾವ್ ಯಾಕೆ ಟೆನ್ಷನ್ ತಗೋಬೇಕು..  ಬೇರೆ ಕೆಲ್ಸ್ ಇಲ್ಲ ಅಂತ ಬೈತಾ ಇದ್ದವರಿಗೆ ಇರಾನ್ ಇಸ್ರೇಲ್ ಯುದ್ಧದ ಎಫೆಕ್ಟ್ ಈಗ ತಟ್ಟುತ್ತಿದೆ. ಪ್ರಂಚದಲ್ಲಿ ಯಾವುದೋ ಮೂಲೆಯಲ್ಲಿ ಯುದ್ಧವಾದ್ರೆ ನಮ್ಗೆ ಹೇಗೆ ಬಿಸಿ ತಟ್ಟುತ್ತೆ ಅನ್ನೋದು ಈಗ ಗೊತ್ತಾಗುತ್ತಿದೆ. ಹೋಟೆಲ್, ದೇವಸ್ಥಾನ, ಕಲ್ಯಾಣ ಮಂಟಪಕ್ಕೆ ಯುದ್ಧದ ಎಫೆಕ್ಟ್ ತಟ್ಟಿದೆ.

ಇರಾನ್, ಅಮೆರಿಕಾ ನಡುವಿನ ಯುದ್ದದ ಕಾರ್ಮೋಡ ಭಾರತದ ಮೇಲೆ ನೇರವಾಗಿ ಬಿದ್ದಿದೆ. ಯುದ್ದದ ಆರಂಭವಾಗಿ ಇಂದಿಗೆ 11 ದಿನಗಳ ಸಂದಿವೆ. ಈ ಸಂದರ್ಭದಲ್ಲಿ ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ವಾಣಿಜ್ಯ ಮತ್ತು ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆಯಿಂದ ಗ್ರಾಹಕರ ಮತ್ತು ಮನೆಯಲ್ಲಿ ಬೆಲೆಏರಿಕೆ ಬಿಸಿ ತಟ್ಟಿದೆ.

 

ಇದನ್ನೂ ಓದಿ: ವಿಧಾನಸಭೆಯಲ್ಲೂ LPG ಸಮರ! – ಗ್ಯಾಸ್ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದ ಸಿಎಂ!

ಇರಾನ್ ಇಸ್ರೇಲ್ ಯುದ್ಧದಿಂದ ಗ್ಯಾಸ್ ಸಿಗದೆ ಒಂದಷ್ಟು ಹೋಟೆಲ್‌ಗಳು ಕ್ಲೋಸ್ ಆದ್ರೆ, ಇನ್ನೂ ಕೆಲ ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ಆಗಿದೆ. ದೋಸೆಗಳು ಸಿಗ್ತಿಲ್ಲ, ಬೋಡ ಬಜ್ಜೆ ಕೂಡ ಮಾರ್ತಿಲ್ಲ.. ಕಡಿಮೆ ಖರ್ಚಿನಲ್ಲಿ ಆಗೋ ತಿಂಡಿ, ತಿನಿಸುಗಳು ಮಾತ್ರ ಸಿಗ್ತಿವೆ. ಅದು ಎಷ್ಟು ದಿನ ಅಂತ ಹೇಳೋಕೆ ಆಗಲ್ಲ. ಇವತ್ತು ನಂಗೆ ಇದರ ಎಫೆಕ್ಟ್ ತಟ್ಟಿದೆ. ನಿನ್ನೆ ತನಕ ನಾನು ಎರಡು ಇಡ್ಲಿಗೆ 30 ರೂಪಾಯಿ ಕೊಡ್ತಾ ಇದ್ದೇ, ಇವತ್ತು ಹೋಗಿ ಇಡ್ಲಿ ಕೊಡಿ ಅಂತ ಕೇಳಿದ್ರೆ 5 ರೂಪಾಯಿ ಜಾಸ್ತಿ ಆಗಿದೆ ಅಂತ ಹೇಳಿದ್ರು. ಬಟ್ ಇದು ಅವರಿಗೂ ಅನಿವಾರ್ಯ..ಯಾಕಂದ್ರೆ ಎಲ್ಲೂ ಕೂಡ ಕಮರ್ಷಿಯಲ್ ಗ್ಯಾಸ್‌ ಅಂಡೆ ಸಿಗುತ್ತಿಲ್ಲ.. ಸಿಕ್ಕಿದ್ರೂ ಅದರ ರೇಟ್ 3 ಪಟ್ಟು ಹೆಚ್ಚಿದೆ. ಒಂದೂವರೆ ಸಾವಿರಕ್ಕೆ ಸಿಗುತ್ತಿದ್ದ ಗ್ಯಾಸ್ ಈಗ ನಾಲ್ಕೂವರೆ ಸಾವಿರ ಕೊಟ್ಟರು ಸಿಗದ ಪರಿಸ್ಥಿತಿ ಇದೆ. ಹೀಗಾಗಿ ಹೋಟೆಲ್‌ಗಳಲ್ಲಿ ರೇಟ್ ಹೆಚ್ಚಾಗಿದೆ. ಇನ್ನೂ ಕೆಲ ಹೋಟೆಲ್‌ಗಳು ಸೌದೆಯನ್ನ ಬಳಸಿ ಅಡುಗೆ ಮಾಡುತ್ತಿದ್ದಾರೆ. ಬಟ್ ಬೆಂಗಳೂರಿನಂತಹ ನಗರದ ಎಲ್ಲಾ ಕಡೆ ಕೂಡ ಸೌದೆ ಸಿಗಲ್ಲ.. ಗ್ಯಾಸ್ ಇದ್ದಷ್ಟು ದಿನ ವ್ಯಾಪಾರ ನಡೆಸುತ್ತೇವೆ, ಆಮೇಲೆ ಕ್ಲೋಸ್ ಮಾಡುತ್ತೇವೆ ಎಂದು ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನ ಹೋಟೆಲ್‌ ನಂಬಿ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಬೆಂಗಳೂರಿನಲ್ಲಿರೋ ಅರ್ಧಕ್ಕೆ ಅರ್ಧ ಹೋಟೆಲ್‌ ಕ್ಲೋಸ್ ಆದ್ರೆ ದೊಡ್ಡ ಸಂಕಷ್ಟ ಎದುರಾಗಲಿದೆ..

ದೇವಸ್ಥಾನದಲ್ಲೂ ಊಟ ಕ್ಲೋಸ್

ಇನ್ನೂ ಸಾಕಷ್ಟು ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇತ್ತು. ಮಧ್ಯಾಹ್ನ, ರಾತ್ರಿ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತಿತ್ತು. ಆದ್ರೆ ಅಲ್ಲೂ ಕೂಡ ಗ್ಯಾಸ್ ಎಫೆಕ್ಟ್ ತಟ್ಟಿದೆ. ಬೆಂಗಳೂರಿನ ಬನಶಂಕರಿ ಸೇರಿ ಹಲವು ದೇವಸ್ಥಾನಗಳಲ್ಲಿ ಊಟ ನೀಡುವುದ್ದಕ್ಕೆ ಬ್ರೇಕ್ ಹಾಕಿವೆ.

ಬೆಂಗಳೂರಿನ ಪಿಜಿಗಳಲ್ಲ ಒಂದು ಹೊತ್ತಿನ ಊಟ ಕಟ್

ಇನ್ನೂ ಬೆಂಗಳೂರಿನ ಕೆಲ ಪಿಜಿಗಳಲ್ಲಿ ಒಂದು ಹೊತ್ತಿನ ಊಟವನ್ನ ಕಟ್ ಮಡಲಾಗಿದೆ. ಇನ್ನೂ ಕೆಲ ಪಿಜಿಯಲ್ಲಿ ಊಟದ ಮೆನು ಚೇಂಜ್ ಮಾಡಲಾಗಿದೆ. ವೈರೈಟಿ ಅಡುಗೆ ಮಾಡದೇ ಕಡಿಮೆ ಖರ್ಚಿನಲ್ಲಿ ಆಗುವ ಅಗತ್ಯ ಇರೋ ಅಡುಗೆ ಮಾತ್ರ ಮಾಡಲಾಗ್ತಿದೆ. ಸಂದ್ಯ ಬೆಂಗಳೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಪಿಜಿಗಳಲ್ಲಿ ಈ ವಾರಂತ್ಯಕ್ಕೆ ಬೇಕಾಗುವಷ್ಟು ಎಲ್ಪಿಜಿಯಿದೆ, ಅಷ್ಟರೊಳಗೆ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ರಾಜಧಾನಿಯಲ್ಲಿ ಅಂದಾಜು ಸುಮಾರು ಒಂಬತ್ತು ಲಕ್ಷ ಜನ ಪಿಜಿಯಲ್ಲಿ ವಾಸವಾಗಿದ್ದಾರೆ. ಇವರಿಲ್ಲರಿಗೂ ಯುದ್ಧದ ಎಫೆಕ್ಟ್ ತಟ್ಟಲಿದೆ.

ಮದುವೆಗೂ ತಟ್ಟಿದೆ ಗ್ಯಾಸಿ ಬಸಿ

ಕಲ್ಯಾಣ ಮಂಟಪಗಳಿಗೆ ವಾಣಿಜ್ಯ ಗ್ಯಾಸ್‌ ಸಿಗುತ್ತಿಲ್ಲ. ಹೀಗಾಗಿ ಮದುವೆ ಬುಕ್ಕಿಂಗ್‌ ಮಾಡಿದ ವಧು/ ವರನ ಕಡೆಯವರಿಗೆ ಸಿಲಿಂಡರ್‌ ತರುವಂತೆ ಕಲ್ಯಾಣ ಮಂಟಪಗಳ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಶುಭ ಕಾರ್ಯಕ್ರಮಗಳಿಗೆ ಕಲ್ಯಾಣ ಮಂಟಪಗಳೇ ವಾಣಿಜ್ಯ ಸಿಲಿಂಡರ್‌ಗಳನ್ನು ನೀಡುತ್ತಿದ್ದವು. ಆದರೆ ಈಗ ಸಿಲಿಂಡರ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಮದುವೆ ಕಾರ್ಯಕ್ರಮಗಳಿಗೆ ಬುಕ್ಕಿಂಗ್‌ ಮಾಡಿದವರು ಪರದಾಟ ಅನುಭವಿಸುತ್ತಿದ್ದಾರೆ.

ಅಟೋ ರಿಕ್ಷಾ ಮೀಟರ್ ದರ ಏರಿಕೆ

ಇದರ ನಡುವೆಯೇ ಅಟೋ ಎಲ್ ಪಿಜಿ ಲೀಟರ್ ವೊಂದಕ್ಕೆ 10 ರಿಂದ 20 ರೂಪಾಯಿ ಏರಿಕೆ ಕಂಡಿದೆ. ಈ ದರ ಏರಿಕೆ ಕುರಿತು ಅಟೋ ಮಾಲೀಕರು ತಮ್ಮ ಆಕ್ರೋಶ ಹೊರಹಾಕಿದ್ದು, ತಕ್ಷಣವೇ ಅಟೋ ಮೀಟರ್ ದರ ಏರಿಕೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಯುದ್ದ ಹೀಗೆಯೇ ಮುಂದುವರೆದರೆ ಎಲ್ ಪಿಜಿ ದರ ಇನ್ನಷ್ಟು ದುಬಾರಿಯಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಇದರಿಂದ ಭಾರತ ದೇಶದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಕಾರಣ ಅದರ ಮೂಲಕ ಭಾರತಕ್ಕೆ ಬರುವ ಸರಕುಗಳ ಸಾಗಾಟಕ್ಕೆ ಅಡ್ಡಿಯಾಗಿದೆ. ಯುದ್ದದ ಕಾರಣದಿಂದಾಗಿ ಸದ್ಯ ಗುಡ್ ಹೋಪ್ ಶಿಖರದ ಕಡೆಯಿಂದ ಹಡಗುಗಳು ಬರಬೇಕಾಗಿರುವುದರಿಂದ ವೆಚ್ಚ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಗ್ಯಾಸ್ ಉಳಿಸುವ ಉದ್ದೇಶದಿಂದ, ಹೆಚ್ಚಿನ ಸಮಯ ತೆಗೆದುಕೊಳ್ಳುವ ತಿಂಡಿಗಳನ್ನು, ಹಲವು ಹೋಟೆಲ್’ನವರು ಮೆನು ಲಿಸ್ಟ್’ನಿಂದ ಕೈಬಿಟ್ಟಿದ್ದಾರೆ. ಹಾಗೇ ವಾಣಿಜ್ಯ ಹಿತಾಶಕ್ತಿಗಳಿಗಿಂತ ಹೆಚ್ಚಾಗಿ ಗೃಹ ಬಳಕೆಯ ಪೂರೈಕೆಗೆ ಆದ್ಯತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಹಿನ್ನಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಎದುರಾಗಿದೆ. ಬುಕ್ಕಿಂಗ್ ಅವಧಿಯನ್ನು ಸರ್ಕಾರ ಹೆಚ್ಚಿಸಿದ ಬೆನ್ನಲ್ಲೇ, ಹಲವು ಕಡೆ ಕೃತಕ ಅಭಾವವನ್ನು ಸೃಷ್ಟಿಸಲಾಗುತ್ತಿದೆ. ಖಾಸಗಿ ಗ್ಯಾಸ್ ವಿತರಕರೂ, ಪರಿಸ್ಥಿತಿಯ ಲಾಭವನ್ನು ಭರಪೂರ ಪಡೆದುಕೊಳ್ಳುತ್ತಿದ್ದಾರೆ.  ಪಿಜೆಿಯಲ್ಲಿ ಊಟ ಕಟ್ ಮಾಡೋ ಸಾಧ್ಯತೆಯಿದೆ.

ಕೊರೊನಾದಂತೆ ಮತ್ತೆ ಬೆಂಗಳೂರು ಬಿಡ್ತಾರಾ ಜನ? 

ಇನ್ನೂ ಹಳ್ಳಿಗಳಿಂದ ದುಡಿಮೆಗಾಗಿ ಬೆಂಗಳೂರಿಗೆ ಬಂದು  ನೆಲೆಸಿರೋ ಜನ ಸಿಲಿಕಾನ್ ಸಿಟಿಯನ್ನ  ಬಿಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಹೋಟೆಲ್, ಪಿಜಿಗಳಲ್ಲಿ ಊಟ ಸಿಕ್ಕಿಲ್ಲ ಅಂದ್ರೆ ಹಳ್ಳಿ ಕಡೆ ಹೋಗುವುದು ಅನಿವಾರ್ಯ.. ಹಾಗೇ ಹೋಟೆಲ್‌ಗಳು ಕ್ಲೋಸ್ ಆದ್ರೆ ಅಲ್ಲಿರೋ ಕೆಲಸಗಾರರು ಕೂಡು ತಮ್ಮ ತಮ್ಮ ಊರಿಗೆ ಹೋಗಬೇಕಾಗುತ್ತೆ.. ಮಾಲೀಕರು ವ್ಯಾಪಾರ ಇಲ್ಲದೇ ಸಂಬಳ ಕೂಡುವುದು ದೊಡ್ಡ ಹೊರೆ ಆಗುತ್ತೆ. ಹೀಗಾಗಿ ಕೊರೊನಾದಲ್ಲಿ ಆದಂತಹ ಬೆಳವಣಿಗೆಗಳು ಈಗ ಇರಾನ್ ಇಸ್ರೇಲ್ ಯುದ್ಧದಿಂದ ಆಗುತ್ತಿದ್ದು. ಯುದ್ಧ ನಿಂತ್ರೆ ಎಲ್ಲವೂ ಸರಿ ಆಗುತ್ತೆ. ಆದ್ರೆ ಹೀಗೆ ಯುದ್ಧ ಮುಂದುವರಿದ್ರೆ ಜನ ಪರದಾಡಬೇಕಾಗುತ್ತೆ..

Kishor KV

Leave a Reply

Your email address will not be published. Required fields are marked *