ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ – ಮೊದಲ ಬಾರಿಗೆ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ – ಮೊದಲ ಬಾರಿಗೆ ಅಂಬಾರಿ ಹೊರಲಿದ್ದಾನೆ ಪ್ರಶಾಂತ

ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ನಾಡಿನ ಹೆಮ್ಮೆಯ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ  ಇಂದು ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಎಲ್ಲರ ಕಣ್ಣು 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಆನೆಯ ಮೇಲಿದೆ.

ವಿಶೇಷ ಏನಪ್ಪಾ ಅಂದ್ರೆ, ಈ ಬಾರಿ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ಪ್ರಶಾಂತ ಆನೆಗೆ ಸಿಕ್ಕಿದೆ. 54 ವರ್ಷದ ಪ್ರಶಾಂತ ಆನೆ ಕಳೆದ 18 ವರ್ಷಗಳಿಂದ ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದೆ. ಇಷ್ಟು ವರ್ಷ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರಶಾಂತನಿಗೆ ಈಗ ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತು ಸಾಗುವ ಭಾಗ್ಯ ಒಲಿದು ಬಂದಿದೆ.

ಇದನ್ನೂ ಓದಿ: IPLನಲ್ಲೂ ಕುಬೇರ ಕಿಂಗ್ ಕೊಹ್ಲಿ! ಸೂಪರ್ ಸ್ಟಾರ್ಸ್ ಸಾಲಿನಲ್ಲಿ KL

ಇಂದು ಮಧ್ಯಾಹ್ನ 1 ಗಂಟೆ 36 ನಿಮಿಷದಿಂದ 1 ಗಂಟೆ 56 ನಿಮಿಷದವರೆಗೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 4 ಗಂಟೆ 10 ನಿಮಿಷದಿಂದ 4 ಗಂಟೆ 35 ನಿಮಿಷದವರೆಗೆ ಚಿನ್ನದ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸಲಾಗುತ್ತದೆ. ಬಳಿಕ ಅರಮನೆಯ ಬಲರಾಮ ದ್ವಾರದಿಂದ ಜಂಬೂ ಸವಾರಿ ಆರಂಭವಾಗಿ ಬನ್ನಿಮಂಟಪದವರೆಗೆ ಸಾಗಲಿದೆ.

ಅಲಂಕೃತ ಆನೆಗಳು, ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳು ಮತ್ತು ರಾಜವಂಶದ ವೈಭವ ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ. ಸಂಜೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಕೂಡ ನಡೆಯಲಿದೆ.

ಒಟ್ಟಿನಲ್ಲಿ, ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಯ ಮೇಲೆ ಈ ಬಾರಿ ಇಡೀ ನಾಡಿನ ನಿರೀಕ್ಷೆ ನೆಟ್ಟಿದೆ. ಪ್ರಶಾಂತ ಆನೆಯ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಮೈಸೂರು ಸಜ್ಜಾಗಿದೆ

Kishor KV

Leave a Reply

Your email address will not be published. Required fields are marked *