ಬಂಗ್ಲೆಗುಡ್ಡಕ್ಕೆ ಎಲ್ಲಿಂದ ಬಂತು ಬುರುಡೆ? – ಮಾಟದ ಮೂಳೆನಾ?, ಕೊ*ಲೆ ಆದವರಾ?
ಆಗ ಕಾಣದ್ದು ಈಗ ಕಂಡಿದ್ದೇಗೆ?

ಬಂಗ್ಲೆಗುಡ್ಡಕ್ಕೆ ಎಲ್ಲಿಂದ ಬಂತು ಬುರುಡೆ? – ಮಾಟದ ಮೂಳೆನಾ?, ಕೊ*ಲೆ ಆದವರಾ?ಆಗ ಕಾಣದ್ದು ಈಗ ಕಂಡಿದ್ದೇಗೆ?

ಧರ್ಮಸ್ಥಳ ತಲೆಬುರುಡೆ ಚಾಪ್ಟರ್ 2 ಶುರುವಾಗಿದೆ. ಚಾಪ್ಪರ್‌ 1ನಲ್ಲಿ ಮಾಸ್ಕ್‌ ಮ್ಯಾನ್ ತೋರಿಸಿದ ಜಾಗದಲ್ಲಿ ಏನೋ ಸಿಕ್ಕಿರಲಿಲ್ಲ. ಬಟ್ ಬುರುಡೆ ಕೇಸ್‌ಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟ ವಿಠಲ್ ಗೌಡ ಇಡೀ ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಬಂಗ್ಲೆಗುಡ್ಡದಲ್ಲಿ ವಿಠಲ್ ಗೌಡ ತೋರಿಸಿದ ಜಾಗದಲ್ಲಿ ಮೂಳೆಗಳು ಸಿಕ್ಕಿವೆ. ಚಿಕ್ಕ ಗುಡ್ಡದಲ್ಲಿ ಸ್ಮಶಾನದಂತೆ ಮೂಳೆಗಳು ಸಿಗ್ತಿವೆ.   ಇದುವರೆಗೂ ಮುಸುಕುಧಾರಿ ಚಿನ್ನಯ್ಯ ಹೇಳಿಕೆ ಆಧಾರದಲ್ಲಿ ತನಿಖೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು, ಇದೀಗ ಮತ್ತೊಂದು ಕೋನದಲ್ಲಿ ತನಿಖೆ ಆರಂಭಿಸುವ ಸಾಧ್ಯತೆಗಳಿವೆ. ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು 17 ಸ್ಥಳಗಳಲ್ಲಿ ಅಗೆದು, ಹೂತಿರುವ ಹೆಣಕ್ಕಾಗಿ ಶೋಧ ನಡೆಸಿದ್ದರು. ಆದರೆ, ಇಲ್ಲಿ ಯಾವುದೇ ತಲೆಬುರುಡೆಯಾಗಲಿ, ಕಳೆಬರ ಪತ್ತೆಯಾಗಿರಲಿಲ್ಲ. ಇದೀಗ ಚಿನ್ನಯ್ಯ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಶಿವಮೊಗ್ಗ ಜೈಲು ಸೇರಿದ್ದಾರೆ. ಇನ್ನೊಂದೆಡೆ ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟ ಸೌಜನ್ಯ ಮಾವ ವಿಠಲಗೌಡ ತೋರಿಸಿದ ಜಾಗದಲ್ಲಿ ರಾಶಿ ರಾಶಿ ತಲೆ ಬುರುಡೆಗಳು ಸಿಕ್ಕಿವೆ. ಇದು ಇಡೀ ಪ್ರಕರಣವನ್ನ ಮತ್ತೊಂದು ದಿಕ್ಕಿಗೆ ತೆಗೆದುಕೊಂಡು ಹೋಗ್ತಿದೆ.

ಬಂಗ್ಲೆಗುಡ್ಡದಲ್ಲಿ ಸಿಕ್ಕಿದು ಮಾಟ ಮಂತ್ರದ ಮೂಳೆನಾ?

ಹೌದು. ಬಂಗ್ಲೆಗುಡ್ಡದಲ್ಲಿ ಸಿಕ್ಕಿರೋ ಮಳೆಗಳ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಅದ್ರಲ್ಲಿ 1ನೇ ಅನುಮಾನ ಅಂದ್ರೆ ಮಾಟ ಮಂತ್ರಕ್ಕೆ ತಂದು ಇಲ್ಲೇ ಬಿಟ್ಟಿರೋ ಮೂಳೆನಾ ಅನ್ನೋದು. ಹೌದು ವಿಠಲ್ ಗೌಡ ಆರೋಪ ಮಾಡಿರುವಂತೆ ಅಲ್ಲಿ ವಾಮಾಚಾರ ನಡೆದಿದೆ ಅಂತ ಹೇಳಿದ್ರು.. ಈ ಜಾಗದಲ್ಲಿ ಮಾಟ ಮಂತ್ರಕ್ಕೆ ಮನುಷ್ಯನ ದೇಹವನ್ನ ಬಳಸಿರಬಹುದು ಅನ್ನೋ ಅನುಮಾನ ಇದೆ. ಯಾರೋ ಮಂತ್ರವಾದಿಗಳು ಯಾರಿಗೋ ಕೆಡುಕು ಮಾಡುವುದ್ದಕ್ಕೋ ಅಥವಾ ತಮ್ಮ ಶಕ್ತಿಯನ್ನ ಹೆಚ್ಚಿಸಿಕೊಳ್ಳುವುದ್ದಕ್ಕೆ ಮನುಷ್ಯನ ದೇಹ ಬಳಸಿ ಮಾಟ ಮಂತ್ರ ಪ್ರಯೋಗ ಮಾಡ್ತಾರೆ. ಒಂದು ವೇಳೆ ಮಂತ್ರವಾದಿಗಳೇ ಆ ಜಾಗದಲ್ಲಿ ಮನುಷ್ಯರ ದೇಹವನ್ನ ತಂದು ಮಾಟ ಮಂತ್ರ ನಡೆಸಿದ ನಂತ್ರ ಆ ದೇಹವನ್ನ ಅಲ್ಲೇ 2-3 ಅಡಿ ಜಾಗದಲ್ಲಿ ಹುಗಿದು ಹಾಕಿರಬಹುದು ಅಥವಾ  ಬೇರೆ ಕಡೆಯಿಂದ ಮೂಳೆಗಳನ್ನ ತಂದು ಅಲ್ಲಿ ಪ್ರಯೋಗ ಮಾಡಿ ಆ ಮೊಳೆಗಳನ್ನ ಅಲ್ಲೇ ಬಿಟ್ಟು ಹೋಗಿರಬಹುದು ಅನ್ನೋ ರೀತಿಯಲ್ಲೂ ಚರ್ಚೆ ಆಗ್ತಿದೆ. ಬಟ್ ಇಲ್ಲಿ ಒಂದೇ ಜಾಗದಲ್ಲಿ ಕಂಟಿನ್ಯೂ ಆಗಿ ಮಾಟ ಮಂತ್ರ ಮಾಡ್ತಾರೆ ಅಂದ್ರೆ ಗೊತ್ತಾಗಬೇಕಿತ್ತು.  ಊರಿನ ಜನ ಏನ್ ಮಾಡ್ತಿದ್ದರು? ಅವರ ಗಮನಕ್ಕೆ ಮಾಟ ಮಂತ್ರದ ಸುಳಿವು ಸಿಕ್ಕಿಲ್ವಾ? ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಡಿನ್ನ ನೋಡಿಕೊಳ್ಳುವ ಕೆಲಸ.. ಅವರು ಕಾಡಿನಲ್ಲಿ ಓಡಾಡುವಾಗ ಅವರಿಗೆ ಮಾಟ ಮಂತ್ರದ ಸುಳಿವು ಸಿಕ್ಕಿಲ್ವಾ ಅನ್ನೋ ಪ್ರಶ್ನೆ ಕೂಡ ಎಳುತ್ತೆ.

ಚಿನ್ನಯ್ಯ & ಗ್ಯಾಂಗ್‌ ಶವ ಹೂತಿದ್ದಾ?

ವಿಠಲ್ ಗೌಡ ಎಸ್‌ಐಟಿಯನ್ನ ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿದ್ದು ಯಾಕೆ ಅಂದ್ರೆ ಆ ಜಾಗದಲ್ಲಿ ಚಿನ್ನಯ್ಯ ಮಾತ್ರ ಅಲ್ಲ ಅವರ ತಂಡದವರೂ ಶವವನ್ನ ಹುಳುತ್ತಿರುವುದ್ದನ್ನ ನೋಡಿದ್ದೇನೆ ಅಂತ. ಹೀಗಾಗಿ ಅಲ್ಲಿ ಹೂತಿರೋ ಮೂಳೆ ಇದೆ ಅಂತ ವಿಠಲ್ ಗೌಡ ಹೇಳಿದ್ದಾರೆ. ಅಲ್ಲೇ ಮೂಳೆಗಳು ಸಿಕ್ಕಿವೆ. ಒಂದು ವೇಳೆ ಹೀಗೆ ಆಗಿದ್ರೆ ಭೂಮಿ ಮೇಲೆ ಹೇಗೆ ಮೂಳೆಗಳು ಬಂದ್ವು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ.. ಚಿನ್ನಯ್ಯ ಹೇಳಿದ್ದು ನಾನು 15 -20 ವರ್ಷದ ಹಿಂದೆ ದೊಡ್ಡವರು ಹೇಳಿದ್ದಂತೆ ಶವ ಹೂತು ಹಾಕಿದ್ದೇ ಅನ್ನೋದ್ದನ್ನ. ಹಾಗೇ ಆಗಿದ್ರೆ 15 ವರ್ಷಅಂತಾನೇ ಇಟ್ಟುಕೊಳ್ಳೋಣ. ಆ ಹೂತಿರೋ ಶವದ ಮೂಳೆಗಳು ಈಗ ಹೊರಕ್ಕೆ ಬರೋಕೆ ಹೇಗೆ ಸಾಧ್ಯ?. ಒಂದು ವೇಳೆ ದೊಡ್ಡವರು ಹೇಳಿದಂತೆ ಅರ್ಜೆಂಟ್‌ನಲ್ಲಿ ಶವ  ಹೂತು ಹಾಕಿರಬಹುದು. 2-3 ಅಡಿ ಆಳ ತೆಗೆದು ಹೂತು ಹಾಕಿರಬಹುದು. ಹಾಗೇ ಹೂತು ಹಾಕಿರೋ ಶವಗಳನ್ನ ಅಲ್ಲಿ ಕಾಡು ಪ್ರಾಣಿಗಳು ಮೇಲೆಕ್ಕೆ ಎಳೆದು ತೆಗೆದಿರಬಹುದು, ಮಾಂಸ ತಿಂದು ಮೂಳೆ ಅಲ್ಲೇ ಬಿಟ್ಟು ಹೋಗಿದ್ರಿಂದ ಅಸ್ತಿಪಂಜರ ಮೇಲೆ ಸಿಕ್ಕಿವೇ ಅಂತನೇ ಇಟ್ಟುಕೊಳ್ಳೋಣ. ಆ ಶವ ಪ್ರಾಣಿಗಳು ಎಳೆದು ಮೇಲೆ ತಂದಾಗ ಅದ್ರ ವಾಸನೆ ಅಲ್ಲಿನ ಜನಕ್ಕೆ ಬಂದಿಲ್ವಾ? ನಾಯಿ ಸತ್ತು ಹೋದ್ರೆ ಇಲಿ ಸತ್ತು ಹೋದ್ರೆ ಆ ವಾಸನೆಯಲ್ಲಿ ಇರೋಕೆ ಆಗಲ್ಲ. ಹೀಗಿರುವಾಗ ಮನುಷ್ಯರ ವಾಸನೆ ಯಾರಗೂ ಬಂದಿಲ್ವಾ? ಇನ್ನೂ ಮೂಳೆ ಅಲ್ಲೇ ಇದ್ದು 15 ವರ್ಷ ಆಗಿದ್ರೆ ಆ ಜಾಗಕ್ಕೆ ಇಲ್ಲಿ ತನಕ ಯಾರು ಕೂಡ ಹೋಗಿಲ್ವಾ? ಹೋಗಿದ್ರು ಅವರ ಕಣ್ಣಿಗೆ ಯಾಕೆ ಈ ಅಸ್ತಿಪಂಜರ ಬಿದ್ದಿಲ್ಲ?, ಅರಣ್ಯ ಇಲಾಖೆ 15 ವರ್ಷದಲ್ಲಿ ಒಮ್ಮೆ ಕೂಡ ಆ ಜಾಗವನ್ನ ನೋಡಿಲ್ವಾ ಅನ್ನೋ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ಹಾಗೇ ಚಿನ್ನಯ್ಯನಂತಹ ಕೆಲಸ ಗಾರರು ಶವವನ್ನ ಮೇಲಕ್ಕೆ ಹಾಕಿ ಬಂದಿದ್ರ ಆ ವಾಸನೆ ಹುಡುಕಿಕೊಂಡು ಜನ ಅಲ್ಲಿಗೆ ಹೋಗಿಲ್ವಾ ಅನ್ನೋ ಡೌಟ್ ಕೂಡ ಶುರುವಾಗುತ್ತೆ. ರಸ್ತೆ ಬದಿ ಇರೋ ಜಾಗ ಸೋ ಈ ಡೌಟ್ ಶುರುವಾಗುತ್ತೆ.

 ಎಲ್ಲಿಂದೋ ಬಂದು ಆತ್ಮಹತ್ಯೆ ಮಾಡಿಕೊಂಡು ಸತ್ರಾ?

ಇನ್ನೂ ಧರ್ಮಸ್ಥಳದಲ್ಲೇ ಹೇಳುವ ಪ್ರಕಾರ  ಈ ಜಾಗದಲ್ಲಿ ಎಲ್ಲೆಲ್ಲಿಂದಲೋ ಬಂದು ಆತ್ಮಹತ್ಯೆ ಮಾಡಿಕೊಂಡು ಸಾಯ್ತಾರೆ ಅನ್ನೋದು.. ನಾನ್ ಈಗಾಗಲೇ ಹೇಳಿದ್ದಂತೆ ಸೇಮ್ ಡೌಟ್ ಇಲ್ಲು ಬರುತ್ತೆ.. ಒಂದೇ ಜಾಗದಲ್ಲಿ ಬಂದು ಯಾಕೆ ಆತ್ಮಹತ್ಯೆ ಮಾಡಿಕೊಳ್ತಾರೆ? ಇದು ಸೂಸೈಡ್ ಸ್ಫಾಟಾ? ಇಲ್ಲಿ ಬಂದು ಸೂಸೈಡ್ ಮಾಡಿಕೊಂಡು ಸತ್ತಾಗ ಅಲ್ಲಿನ ಜನಕ್ಕೆ ವಾಸನ ಬಂದಿಲ್ವಾ? ನಾಯಿಗಳು ಮೂಳೆಗಳನ್ನ ಜನ ಇರೋ ಪ್ರೇಶಕ್ಕೆ ತೆಗೆದುಕೊಂಡು ಹೋಗಿಲ್ವಾ? ದಿನ ನಿತ್ಯಾ ಅಲ್ಲೇ ಓಡಾಡೋ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಅಲ್ಲಿ ಸೂಸೈಡ್ ಆಗ್ತಾ ಇರೋದು ಗೊತ್ತೇ ಆಗಿಲ್ವಾ? ಒಂದು ನಾಯಿ ಸತ್ತರೇ 1 ಕಿಲೋ ಮೀಟರ್ ತನಕ ವಾಸನೆ ಬರುತ್ತೆ.. ಅಂತ್ರದಲ್ಲಿ ಮನುಷ್ಯರು ಸತ್ತಾಗ ವಾಸನೆ ಬಂದಿಲ್ವಾ ಅನ್ನೋ ಪ್ರಶ್ನೆ ಕೂಡ ಇಲ್ಲಿ ಹುಟ್ಟಿಕೊಳ್ಳುತ್ತೆ..

 ಗ್ರಾಮ ಪಂಚಾಯತ್‌ನಿಂದ ಶವ ಹೂತು ಹಾಕಿದ್ರಾ?

ಮತ್ತೊಂದೆಡೆ, ಧರ್ಮಸ್ಥಳ ಗ್ರಾಮ ಪಂಚಾಯತ್‌ನ ಶವ ದಫನ ದಾಖಲೆಗಳ ಬಗ್ಗೆ ಎಸ್​ಐಟಿ ಈಗಾಗಲೇ ಮಾಹಿತಿ ಕಲೆ ಹಾಕಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ದಫನದಲ್ಲೇ ಅಕ್ರಮ ಎಸಗಲಾಗಿದೆ ಎಂಬ ಆರೋಪ ಸಂಬಂಧವೂ ತನಿಖೆ ನಡೆಸುತ್ತಿದೆ. ಒಂದು ವೇಳೆ ಈ ಜಾಗದಲ್ಲಿ ಗ್ರಾಮ ಪಂಚಾಯ್ತಿ ಇಂದಲೇ ಶವ ಹೂತು ಹಾಕಿದ್ರೆ ಮೇಲಕ್ಕೆ ಯಾಕೆ ಹೂತು ಹಾಕಿದ್ರು? ಅರಣ್ಯ ಪ್ರದೇಶದಲ್ಲಿ ಯಾಕೆ ದಫನ್ ಮಾಡಿದ್ರು? ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳುಯಾಕೆ ಕಣ್ಮುಚ್ಚಿ ಕುಳಿತ್ರು ಅನ್ನೋ ಪ್ರಶ್ನೆ ಕೂಡ ಇದೆ.

 ಮಣ್ಣು ಸವೆದು ಮೂಳೆಗಳು ಮೇಲೆ ಬಂದ್ವಾ?

ಇನ್ನೂ ಈ ಹಿಂದೆ ಶವಗಳನ್ನ ಜಾಸ್ತಿ ಅಡಿ ಹೂತು ಹಾಕಿರಲಿಲ್ಲ.. ಹೀಗಾಗಿ ಧರ್ಮಸ್ಥಳದಲ್ಲಿ ಹೆಚ್ಚು ಮಳೆ ಆಗತ್ತೆ.. ಮಳೆ ನೀರುಬಿದ್ದು ಬಿದ್ದು ಮಣ್ಣು ಕೊಚ್ಚಿಕೊಂಡು ಹೋಗಿ ಆಗ ಹೂತು ಹಾಕಿರೋ ಮೂಳೆಗಳು ಮೇಲೆ ಬಂದ್ವಾ ಅನ್ನೋ ಅನುಮಾನ ಕೂಡ ಶುರುವಾಗುತ್ತೆ.ಕರ್ನಾಟಕದ ಯಾವುದೇ ಪ್ರದೇಶದಲ್ಲಿ ಇಷ್ಟೋಂದು ಪ್ರಮಾಣದ ಮೂಳೆ ಸಿಗಲ್ಲ. ಆದ್ರೆ ಬಂಗ್ಲೆಗುಡ್ಡದಲ್ಲಿ ಮಾತ್ರಯಾಕೆ ಸಿಗ್ತಾ ಇದೆ.. ಅದು ಅರಣ್ಯದ ಜಾಗದಲ್ಲಿ.. ಕೇವಲ 6 ರಿಂದ 12 ಎಕರೆ ಜಾಗದಲ್ಲಿ ಯಾಕೆ ಇಷ್ಟು ಮೂಳೆಗಳು ಸಿಗ್ತಿವೆ.. ಅದು ಒಂದೇ ದಿನ 5 ಅಸ್ತಿಪಂಜರ ಅಂದ್ರೆ ಇದ್ರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ಅಂದ್ರೆ ಈ ಗುಡ್ಡದಲ್ಲಿ ಅಡಗಿರೋ ರಹಸ್ಯ ಏನು? ಪುಣ್ಯ ಕ್ಷೇತ್ರ ಅಂತ ಬಂದು ಆತ್ಮಹತ್ಯೆ ಮಾಡಿಕೊಳ್ತಾರಾ? ಹಾಗೇ ಮಾಡಿಕೊಳ್ಳುವವರು ಬಂಗ್ಲೆಗುಡ್ಡವನ್ನೇ ಯಾಕೆ ಆಯ್ಕೆ ಮಾಡಿಕೊಳ್ತಿದ್ದಾರೆ? ಅಥವಾ ಇದು ಸಹಜ ಸಾವುಗಳ ಶವಗಳಾ? ಅಥವಾ ನೇತ್ರಾವತಿ ನದಿಯಲ್ಲಿ  ತೇಲಿ ಬಂದ ಅನಾಥ ಶವಗಳನ್ನ ಇಲ್ಲಿ ಹೂತು ಹಾಕಲಾಯ್ತಾ? ಮಂತ್ರವಾದಿಗಳೇ ಮೂಳೆಗಳನ್ನ ತಂದು ಹಾಕಿದ್ರಾ? ಅಥವಾ ಕೊಲೆ ಮಾಡಿ ವಿಠಲ್ ಗೌಡ ಹೇಳಿದ್ದಂತೆ ಇಲ್ಲಿ ಹೂತ ಹಾಕಲಾಯ್ತಾ? ಅಥವಾ ಆರೋಪ ಮಾಡುವುದ್ದಕ್ಕೆ ಬೇರೆ ಕಡೆಯಿಂದ ಅಸ್ತಿಪಂಜರ ತಂದು ಇಲ್ಲಿ ಹಾಕಿದ್ರಾ ಅನ್ನೋದ್ದನ್ನ ಎಸ್‌ಐಟಿ ಅಧಿಕಾರಿಗಳೇ ತಿಳಿಸಬೇಕಿದೆ.

Kishor KV