ಪ್ರದೀಪ್ ಈಶ್ವರ್ Vs ಪ್ರತಾಪ್ ಸಿಂಹ ಕಚ್ಚಾಟ – ಜನಪ್ರತಿನಿಧಿಗಳು ವಿರುದ್ದ ಜನರ ಆಕ್ರೋಶ

ನಮ್ಮ ರಾಜ್ಯದಲ್ಲಿ ಸಮಸ್ಯೆಗಳು ಹೊದ್ದು ಮಲಗಿವೆ. ಯುವಕರಿಗೆ ಕೆಲಸ ಇಲ್ಲ, ಗುಂಡಿಗಳನ್ನ ಮುಚ್ಚೋರಿಲ್ಲ. ಅಭಿವೃದ್ಧಿ ಅನ್ನೋದು ಕನಸಿನ ಮಾತು.. ಸಾವಿರಾರು ಸಮಸ್ಯೆಗಳು ಕರ್ನಾಟಕದ ಜನರನ್ನ ಬೆನ್ನು ಬಿಡದ ಬೇತಾಳದಂತೆ ಕಾಡ್ತಿದೆ. ಇದ್ರ ಬಗ್ಗೆ ಮಾತನಾಡಬೇಕಿದ್ದ ನಮ್ಮ ಜನಪ್ರತಿನಿಧಿಗಳು, ಅಸಹ್ಯವಾಗಿ, ಕೆಟ್ಟ ಕೆಟ್ಟದಾಗಿ ರಾಜಕೀಯ ಮಾಡುತ್ತಿದ್ದಾರೆ.. ಅವರ ಪದ ಬಳಕೆ ನಿಜಕ್ಕೂಅಸಹ್ಯ ತರುವಂತಿದೆ. ಒಬ್ಬ ಜನಪ್ರತಿನಿಧಿ ಆದವನು ಜನರಿಗೆ, ಯುವಕರಿಗೆ ಮಾದರಿ ಆಗಿರಬೇಕು.. ನಮ್ಗೆ ಇವರಿಂದ ಏನೋ ಒಳ್ಳೆಯದು ಆಗುತ್ತೆ ಅಂತ ಜನ ವೋಟ್ ಹಾಕಿ ಗೆಲ್ಲಿಸುತ್ತಾರೆ, ಅಧಿಕಾರದಲ್ಲಿ ಇಲ್ಲದಿದ್ರೂ ಸಪೋರ್ಟ್ ಮಾಡ್ತಾರೆ.. ಆದ್ರೆ ಇವರು ಕೆಟ್ಟ ಕೊಳಕು ಮಾತನಾಡಿ ತಮ್ಮ ಮರ್ಯಾದೆ ಜೊತೆ ಕರ್ನಾಟಕದ ಮರ್ಯಾದೆಯನ್ನ ಬೀದಿ ಬೀದಿಗಳಲ್ಲಿ ತೆಗೆಯುತ್ತಿದ್ದಾರೆ..
ಒಬ್ಬರು ಮಾಜಿ ಸಂಸದರು.. ಇನ್ನೊಬ್ಬರು ಹಾಲಿ ಶಾಸಕರು.. ಇವರೆಲ್ಲಾ ಜನರಿಗೆ ಮಾದರಿ ಆಗಿರಬೇಕಿತ್ತು.. ಆದ್ರೆ ಕೀಳು ಪದಗಳನ್ನ ಮಾರ್ಮಿಕವಾಗಿ ಬಳಸಿದ್ದಾರೆ.. ಇದ್ದನ್ನ ಅರ್ಥ ಮಾಡಿಕೊಂಡ್ರೆ ನಿಜಕ್ಕೂ ಇವರ ಬಗ್ಗೆ ಅಸಹ್ಯ ಹುಟ್ಟುತ್ತೆ.. ವೈಯಕ್ತಿಕ ನಿಂದನೆ ಮಾಡಿಕೊಳ್ಳುತ್ತಾ ಜನರ ಕೆಂಗಣ್ಣಿಗೆ ಇವರಿಬ್ಬರು ಗುರಿ ಆಗ್ತಿದ್ದಾರೆ. ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ನಡುವೆ ವೈಯಕ್ತಿ ಕಚ್ಚಾಟ ಸಾಕಷ್ಟು ದಿನಗಳಿಂದ ನಡೆಯುತ್ತಿದೆ. ಪ್ರತಾಪ್ ಸಿಎಂ ಪ್ರದೀಪ್ ಈಶ್ಲರ್ಗೆ ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅನ್ನೋ ಪದ ಬಳಸಿದ್ರು, ಇದ್ದಕ್ಕೆ ರಿಪ್ಲೈ ಕೊಟ್ಟ ಪ್ರದೀಪ್ ಈಶ್ವರ್ ನಮ್ಮ ಅಪ್ಪನ ಬಗ್ಗೆ ಕ್ಲಾರಿಟಿ ಉಂಟು.. ನನ್ನ ಆಸ್ತಿಯಲ್ಲಿ ನೀನು ಭಾಗ ಕೇಳಬೇಕು ಅಂತ ಇದ್ಯಾ ಅನ್ನೋ ಮಾತು ಆಡಿದ್ರು..
ಇದನ್ನೂ ಓದಿ: ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಕಾಣಿಕೆಯಿಂದಲೇ 3 ಕೋಟಿ 68 ಲಕ್ಷ ಸಂಗ್ರಹ
ಈ ಮಾತನ್ನ ಆಳವಾಗಿ ಅರ್ಥ ಮಾಡಿಕೊಂಡ್ರ ಪ್ರತಾಪ್ ಸಿಂಹ ಅವರ ತಾಯಿಗೆ ಅವಹೇಳನ ಮಾಡಿದಂತೆ ಆಗುತ್ತೆ.. ಅದ್ದನ್ನ ನಾನು ಬಿಡಿಸಿ ಹೇಳುವುದ್ದಕ್ಕೆ ಹೋಗಲ್ಲ.. ಇದ್ದಕ್ಕೆ ರಿಪ್ಲೈ ಕೊಟ್ಟ ಸಿಂಹ.. ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮುಳ್ಳು ಹಂದಿ ಮುಖದ ಕಾಮಿಡಿ ಪೀಸ್ ಹುಟ್ಟೋದು ನಿಮ್ಮ ಅಪ್ಪನಿಗೆ ಮಾತ್ರ. ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ.. ನನ್ನ ತಂದೆ ವಯಸ್ಸಿನಲ್ಲಿದ್ದಾಗ ಚಿಕ್ಕಬಳ್ಳಾಪುರ ಕಡೆ ಬಂದಿದ್ದರೆ ನೀನು ಸುಂದರವಾಗಿಯೇ ಹುಟ್ಟುತ್ತಿದ್ದೆ. ಎಚ್ಚರಿಕೆ ಇರಬೇಕು ಮಗನೇ ನನ್ನ ಬಗ್ಗೆ ಮಾತಾಡುವಾಗ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇಲ್ಲೂ ಮಾಜಿ ಸಂಸದ ಮಾಡಿದ್ದು ಅದೇ ಕೆಲಸ.. ಪ್ರದೀಪ್ ಈಶ್ವರ್ ಅವರ ತಾಯಿಯನ್ನ ನಿಂದಿಸೋ ಕೆಲಸ.. ಇವರಿಬ್ಬರ ಜಗಳದಲ್ಲಿ ಇವರನ್ನ 9 ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಗೆ ಯಾಕೆ ಅವಮಾನ ಮಾಡ್ತಿದ್ದಾರೆ ಅನ್ನೋದೆ ಗೊತ್ತಾಗುತ್ತಿಲ್ಲ.. ಅದು ಯುವ ಜನಪ್ರತಿನಿಧಿಗಳಾಗಿ.. ಮೊದ್ಲೆ ನಮ್ಮ ಸಮಾಜದಲ್ಲಿ ಅಪರಾಧಗಳು ಹೆಚ್ಚುತ್ತಿದೆ. ಹೀಗಿರುವಾಗ ನಮ್ಮನ್ನ ಆಳುವವರು ಈ ತರ ಮಾತನಾಡೋದು ಎಷ್ಟು ಸರಿ ಹೇಳಿ.. ಇನ್ನೂ ಪ್ರತಾಪ್ ಸಿಂಹ ಮಾತಿಗೆ ಪ್ರದೀಪ್ ಈಶ್ವರ್ ಮತ್ತೆ ರಿಪ್ಲೈ ಕೊಟ್ಟಿದ್ದಾರೆ..
ಕತ್ಲಲ್ಲಿ ನಾನ್ ಕಾಣಲ್ಲ ಅಂತ ಅಂತಿಯಾ.. ಕತ್ತಲಲ್ಲಿ ನೀನ್ ನನ್ನ ಯಾಕೆ ಹುಡುಕುತ್ತಿದ್ಯಾ? ಏನ್ ಬರಗಾಲ ಬಂದಿದೆ ನಿನಗೆ ಅಂತ ಟಾಂಗ್ ಕೊಟ್ಟಿದ್ದಾರೆ. ನಾನ್ ಹಂಗಲ್ಲ ಅಂತ ಹೇಳಿದ್ದಾರೆ. ಅಂದ್ರೆ ಪ್ರತಾಪ್ ಸಿಂಹ ಗಂಡಸರನ್ನೂ ಬಿಡಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ನಿಜಕ್ಕೂ ಇವರು ತಮ್ಮ ಮರ್ಯಾದೆ ಜೊತೆ ರಾಜ್ಯದ ಮರ್ಯಾದೆಯನ್ನ ಕೂಡ ಹರಾಜು ಮಾಡ್ತಿದ್ದಾರೆ ಅನ್ನೋದೇ ಬೇಜಾರ್.. ಯಾರು ಕೂಡ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಾರದು ಅಂತ ಜನ ಮಾತನಾಡುತ್ತಿದ್ದಾರೆ.
ಇನ್ನೂ ಪ್ರತಾಪ್ ಸಿಂಹ ಮೇಲೆ ಕೇವಲ ಪ್ರದೀಪ್ ಈಶ್ವರ್ ಮಾತ್ರ ಅಲ್ಲ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಪೇಪರ್ ಸಿಂಹ, ನಿಮ್ಮ ಕತ್ತಲೆ ಜಗತ್ತಿನಲ್ಲಿ ಎಂತೆಂತಹ ಕರಾಳ ಕತೆಗಳ ರಹಸ್ಯ ಅಡಗಿವೆ? ಕತ್ತಲೆ ಜಗತ್ತಿನ ರಹಸ್ಯಗಳ ಪುಸ್ತಕಕ್ಕೆ ನೀವು ತಡೆಯಾಜ್ಞೆ ತಂದಿರುವುದೇಕೆ? ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ? ಅಂತ ಪ್ರಶ್ನೆಗಳನ್ನ ಕೇಳಿದ್ದಾರೆ.

ನೋಡಿರಿ

