ಪಾಂಡ್ಯ ಫಿಟ್ ಆಗಿಲ್ವಾ? – ಫಿಟ್‌ನೆಸ್ ಫೋಟೋ ಹಾಕಿದ್ಯಾಕೆ?
ಟೀಕೆಗೆ ಟಾಂಗ್ ಕೊಟ್ಟ ಹಾರ್ದಿಕ್

ಪಾಂಡ್ಯ ಫಿಟ್ ಆಗಿಲ್ವಾ? – ಫಿಟ್‌ನೆಸ್ ಫೋಟೋ ಹಾಕಿದ್ಯಾಕೆ?ಟೀಕೆಗೆ ಟಾಂಗ್ ಕೊಟ್ಟ ಹಾರ್ದಿಕ್

ಟಿ20 ವಿಶ್ವಕಪ್ ಹೀರೋ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಸುದ್ದಿಯಾಗ್ತಿದ್ದಾರೆ. ಶ್ರೀಲಂಕಾ ಸರಣಿಗೆ ಪಾಂಡ್ಯ ಕ್ಯಾಪ್ಟನ್ ಆಗ್ತಾರಾ ಇಲ್ವಾ ಅನ್ನೋದು ಇನ್ನೇನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಇದ್ರ ಮಧ್ಯೆ ಪಾಂಡ್ಯ ಫಿಟ್ನೆಸ್ ಪ್ರಾಬ್ಲಂ ಪೇಸ್ ಮಾಡ್ತಿದ್ದಾರೆ. ಇದಕ್ಕಾಗಿಯೇ ಕ್ಯಾಪ್ಟನ್ಸಿಯೆಲ್ಲಾ ಪಾಂಡ್ಯಾಗೆ ಫಿಟ್ ಆಗಲ್ಲ ಅನ್ನೋ ಮಾತು ಕೇಳಿಬರ್ತಿದೆ. ಇದ್ರ ಬೆನ್ನಲ್ಲೇ ಆಡಿಕೊಳ್ಳೋರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿದ್ದಾರೆ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಕೊಟ್ಟಿರೋ ಶಾಕಿಂಗ್ ನ್ಯೂಸ್ ಏನು?, ಪಾಂಡ್ಯಾ ತಾನಾಗಿಯೇ ತನ್ನ ತಾಕತ್ ಪ್ರದರ್ಶನ ಮಾಡಿದ್ಯಾಕೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಲಂಕಾ ಸರಣಿಗೆ ರೋಹಿತ್ ಕ್ಯಾಪ್ಟನ್? – ಕೊಹ್ಲಿ & ಬುಮ್ರಾಗೆ ಇನ್ನೆಷ್ಟು ವಿಶ್ರಾಂತಿ?

ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿರುವ ಕಾರಣಕ್ಕಾಗಿಯೇ ಹಾರ್ದಿಕ್​ ಪಾಂಡ್ಯಗೆ ಟಿ20 ತಂಡದ ನಾಯಕತ್ವ ನೀಡಲು ಬಿಸಿಸಿಐ ಹಿಂದೇಟು ಹಾಕಿದೆ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಚರ್ಚೆಯಲ್ಲಿದೆ. ಇದರ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ತಾನೆಷ್ಟು ಫಿಟ್ ಆಗಿದ್ದೀನೀ. ಕ್ಯಾಪ್ಟನ್ಸಿಗೂ ಫಿಟ್ನೆಸ್‌ಗೂ ಸಂಬಂಧ ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಯೆಸ್.. ಹಾರ್ದಿಕ್ ಪಾಂಡ್ಯ ಈಗ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ 2 ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಫಿಟ್​ನೆಸ್​ ಬಗ್ಗೆ ಪ್ರಶ್ನೆ ಮಾಡುವವರಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಹಾರ್ದಿಕ್​ ಪಾಂಡ್ಯ ಪೋಸ್ಟ್ ಮಾಡಿರುವ ಫೋಟೊಗಳ ಪೈಕಿ ಮೊದಲನೆಯದ್ದು 2023ರ ಏಕದಿನ ವಿಶ್ವಕಪ್ ನಂತರ ಗಾಯಗೊಂಡಾಗ ತೆಗಿದಿರೋ ಫೋಟೋ. ಎರಡನೇ ಫೋಟೋ ಪ್ರೆಸೆಂಟ್ ಸಿಚುವೇಶನ್ ನಲ್ಲಿ ಕ್ಲಿಕ್ ಮಾಡಿರೋದು. ಮೊದಲ ಫೋಟೊದಲ್ಲಿ ದಪ್ಪವಾಗಿ ಕಾಣುವ ಪಾಂಡ್ಯ 2ನೇ ಫೋಟೊದಲ್ಲಿ ಸಿಕ್ಸ್​ ಪ್ಯಾಕ್​ ಮೂಲಕ ಕಾಣಿಸಿಕೊಂಡಿದ್ದಾರೆ. ಈ ಫೋಟೊ ಶೇರ್ ಮಾಡಿಕೊಂಡಿದ್ದಲ್ಲದೇ, ಫೋಟೋ ಬಗ್ಗೆ ತಮ್ಮ ಒಪಿನಿಯನ್ ಕೂಡಾ ಹಂಚಿಕೊಂಡಿದ್ದಾರೆ ಪಾಂಡ್ಯ. “2023ರ ಏಕದಿನ ವಿಶ್ವಕಪ್ ವೇಳೆ ಅನುಭವಿಸಿದ್ದ ಗಾಯದ ಸಮಸ್ಯೆ ಬಳಿಕ ಚೇತರಿಕೆ ಬಹಳ ಕಷ್ಟವಾಯಿತು. ಈಗ ಟಿ20 ವಿಶ್ವಕಪ್‌ ಗೆಲ್ಲಲು ಬೇಕಿದ್ದ ಫಿಟ್ನೆಸ್‌ ಸಂಪಾದಿಸಲು ಬಹಳ ಕಷ್ಟ ಪಟ್ಟಿದ್ದೇನೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅಂದಹಾಗೆ ಎಲ್ಲರೂ ನಮ್ಮ ಫಿಟ್ನೆಸ್‌ ಸುಧಾರಿಸುವ ಕಡಗೆ ಶ್ರಮವಹಿಸೋಣ,” ಎಂದು ಹಾರ್ದಿಕ್ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

2023ರ ಸಾಲಿನ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 4 ಪಂದ್ಯಗಳನ್ನು ಮಾತ್ರವೇ ಆಡಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯದ ಸಮಸ್ಯೆ ಎದುರಿಸಿದ್ದರು. ಇದೇ ಕಾರಣಕ್ಕೆ 6 ತಿಂಗಳು ವಿಶ್ರಾಂತಿ ತೆಗೆದುಕೊಂಡಿದ್ರು. ನಂತರ ಪಾಂಡ್ಯ ಕಮ್‌ಬ್ಯಾಕ್ ಆಗಿದ್ದು  ಐಪಿಎಲ್‌ 2024ರ ಟೂರ್ನಿಯಲ್ಲಿ. ಮುಂಬೈ ಇಂಡಿಯನ್ಸ್ ಪರ ಆಡುವ ಮೂಲ ಕಮ್‌ಬ್ಯಾಕ್‌ ಮಾಡಿದ್ರೂ ಕೂಡಾ ಫಾರ್ಮ್‌ಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಕಳಪೆಯಾಟದಿಂದಾಗಿ ಪಾಂಡ್ಯ ಸಿಕ್ಕಾಪಟ್ಟೆ ಟ್ರೋಲ್ ಆದ್ರು. ಆದ್ರೆ, ಟಿ20 ವಿಶ್ವಕಪ್‌ನಲ್ಲಿ ಮತ್ತೆ ಭರ್ಜರಿ ಫಾರ್ಮ್‌ಗೆ ಮರಳುವಲ್ಲಿ ಪಾಂಡ್ಯ ಯಶಸ್ವಿಯಾದ್ರು. ಆದ್ರೂ ಕೂಡಾ ಪಾಂಡ್ಯಗೆ ಫಿಟ್‌ನೆಸ್ ಪ್ರಾಬ್ಲಂ ಇದೆ ಅನ್ನೋ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಇದಕ್ಕಾಗಿಯೇ ಟೀಮ್ ಇಂಡಿಯಾ ನಾಯಕತ್ವ ಪಾಂಡ್ಯಗೆ ಬೇಡ ಅನ್ನೋ ಮಾತು ಕೇಳಿಬಂದಿತ್ತು. ಇದಕ್ಕಾಗಿಯೇ ಪಾಂಡ್ಯ ಈಗ ತಾನು ಫಿಟ್ ಆಗಿದ್ದೇನೆ ಅನ್ನೋದನ್ನ ತೋರಿಸಿಕೊಳ್ಳಲು ಈ ರೀತಿ ಫೋಟೋ ಶೇರ್ ಮಾಡ್ಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *