ಪಂತ್ ಕೈಗೆ ‘ರೆಸ್ಟ್ ಆಫ್ ಇಂಡಿಯಾ’ -ಏಷ್ಯನ್ ಗೇಮ್ನಿಂದ ನಿತೀಶ್ OUT

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಈಗ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯಲ್ಲಿದೆ. ಮತ್ತೊಂದೆಡೆ, ಅಫ್ಘಾನಿಸ್ತಾನ ಕೊನೆಯ ಪಂದ್ಯ ಗೆದ್ದು ಸರಣಿಗೆ ವಿದಾಯ ಹೇಳಲು ಎದುರು ನೋಡುತ್ತಿದೆ.
ಇಂದಿನ ಭಾರತಅಫ್ಘಾನಿಸ್ತಾನ 3ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವ ಸಾಧ್ಯತೆ ಬಗ್ಗೆ ಚರ್ಚೆ ಜೋರಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಅವರಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ಸಿಕ್ಕಿರಲಿಲ್ಲ, ಆದ್ರೆ ಭಾರತ ಈಗಾಗಲೇ ಸರಣಿಯಲ್ಲಿ ಮುನ್ನಡೆ ಸಾಧಿಸಿರುವುದರಿಂದ, ಯುವ ಆಟಗಾರ ವೈಭವ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ನಿರಂತರವಾಗಿ ಕ್ರಿಕೆಟ್ ಆಡುತ್ತಾ ಬಂದಿರುವ ಅಭಿಷೇಕ್ ಶರ್ಮಾಗೆ ಇಂದಿನ ಪಂದ್ಯದ ಮಟ್ಟಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಸಂಜು ವೈಭವ್ ಇನ್ನಿಂಗ್ಸ್ ಶುರು ಮಾಡುವ ಸಾಧ್ಯತೆಯಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಮರಳಿದ್ದಾರೆ. ಶುಭಮನ್ ಗಿಲ್ ನಾಯಕನಾಗಿದ್ದು, ಕೆ.ಎಲ್. ರಾಹುಲ್ ಉಪನಾಯಕನಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಗೆ ರವೀಂದ್ರ ಜಡೇಜಾ ಮತ್ತೆ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ರಿಷಭ್ ಪಂತ್ ಬದಲಿಗೆ ಧ್ರುವ್ ಜುರೆಲ್ಗೆ ಅವಕಾಶ ಸಿಕ್ಕಿದೆ. ಮೂರು ಪಂದ್ಯಗಳ ODI ಸರಣಿ ಸೆಪ್ಟೆಂಬರ್ 27ರಿಂದ ಆರಂಭವಾಗಲಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ಗೆ ನಿತೀಶ್ ಔಟ್? – ವೆಸ್ಟ್ ಇಂಡೀಸ್ ಸರಣಿಗೆ ಹೊಸ ಪ್ಲ್ಯಾನ್!
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿನ ಉತ್ತಮ ಪ್ರದರ್ಶನದ ಬಳಿಕ ಅಭಿಷೇಕ್ ಶರ್ಮಾ ಐಸಿಸಿ ಟಿ20 ಶ್ರೇಯಾಂಕದಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ. ಪಾಕಿಸ್ತಾನದ ಸಾಹಿಬ್ಜಾದಾ ಫರ್ಹಾನ್ ಅವರನ್ನು ಹಿಂದಿಕ್ಕಿರುವ ಅಭಿಷೇಕ್, ಭಾರತದ ಟಿ20 ಬ್ಯಾಟಿಂಗ್ ವಿಭಾಗದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ 2027ರ ಆವೃತ್ತಿಯ ವೇಳಾಪಟ್ಟಿಯು ಅಂತಿಮವಾಗಿದೆ. ಈ ಪಂದ್ಯಾವಳಿಯು ಜನವರಿ 14 ರಿಂದ ಫೆಬ್ರವರಿ 27 ರವರೆಗೆ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ. ಐದು ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರ್ತಿಯರ ಪಟ್ಟಿಯನ್ನು ಪ್ರಕಟಿಸಲು ಸೆಪ್ಟೆಂಬರ್ 28 ಅನ್ನು ಅಂತಿಮ ದಿನಾಂಕವನ್ನಾಗಿ ನಿಗದಿಪಡಿಸಲಾಗಿದೆ
ರಿಷಭ್ ಪಂತ್ ಇರಾನಿ ಕಪ್ನಲ್ಲಿ ‘ರೆಸ್ಟ್ ಆಫ್ ಇಂಡಿಯಾ’ ತಂಡದ ನಾಯಕರಾಗಿ ಅವರು ಮತ್ತೆ ಅಖಾಡಕ್ಕಿಳಿಯಲಿದ್ದಾರೆ. ಸರ್ಫರಾಜ್ ಖಾನ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ.ಇರಾನಿ ಕಪ್ ಪಂದ್ಯವು ಅಕ್ಟೋಬರ್ 1 ರಿಂದ 5 ರವರೆಗೆ ಶ್ರೀನಗರದ ಶೇರ್-ಇ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನ ಏಷ್ಯನ್ ಗೇಮ್ಸ್ ನಿಂದ ಕೈ ಬಿಡಲಾಗಿದೆ. ಏಷ್ಯನ್ ಗೇಮ್ಸ್ 2026ಕ್ಕಾಗಿ ಭಾರತದ ಟಿ20 ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಭಾರತದ ತವರಿನ ಕ್ರಿಕೆಟ್ ಸೀಸನ್ನ ಮಹತ್ವ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿ ಹೊಸ ಯೋಜನೆ ರೂಪಿಸಿದೆ ಎನ್ನಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಸಿದ್ಧಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈ ಗೊಳ್ಳಲಾಗಿದೆ.
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ನಡುವೆಯೇ ಟೀಂ ಇಂಡಿಯಾಗೆ ಮತ್ತೊಂದು ಆತಂಕ ಎದುರಾಗಿದೆ. ಭಾರತದ ಸ್ಪಿನ್ನರ್ ವರ್ಣ್ ಚಕ್ರವರ್ತಿ ಸೈಡ್ ಸ್ಟ್ರೈನ್ ಗಾಯದ ಕಾರಣ ಏಷ್ಯನ್ ಗೇಮ್ಸ್ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಯುವ ಲೆಗ್ ಸ್ಪಿನ್ನರ್ ವಿಪ್ರಾಜ್ ನಿಗಮ್ ಅವರನ್ನು ಆಯ್ಕೆ ಮಾಡಲಾಗಿದೆ. ದೇಶೀಯ ಕ್ರಿಕೆಟ್ನಲ್ಲಿ ಗಮನ ಸೆಳೆದಿರುವ ವಿಪ್ರಾಜ್ಗೆ ಇದು ದೊಡ್ಡ ಅವಕಾಶವಾಗಲಿದೆ.
ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಗ್ಗೆ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15 ವರ್ಷದ ವೈಭವ್ ಅವರ ಪ್ರತಿಭೆ ವಿಶೇಷವಾಗಿದೆ ಎಂದು ರಶೀದ್ ಹೇಳಿದ್ದಾರೆ. ಏಷ್ಯನ್ ಗೇಮ್ಸ್ಗೂ ಮುನ್ನ ಯುವ ಆಟಗಾರರಿಗೆ ಅವಕಾಶ ನೀಡುವ ಭಾರತ ತಂಡದ ಯೋಜನೆಯಲ್ಲೂ ವೈಭವ್ ಗಮನ ಸೆಳೆಯುತ್ತಿದ್ದಾರೆ.
ಕೌಂಟಿ ಚಾಂಪಿಯನ್ಶಿಪ್ನಲ್ಲಿ ವಾರ್ವಿಕ್ಶೈರ್ ಪರ ಆಡುತ್ತಿರುವ ಭಾರತದ ಸ್ಪಿನ್ನರ್ ಮನುಷ್ ಸುಥಾರ್ ಎಸೆಕ್ಸ್ ವಿರುದ್ಧ 5 ವಿಕೆಟ್ ಪಡೆದಿದ್ದಾರೆ. ಅವರ ಬೌಲಿಂಗ್ ನೆರವಿನಿಂದ ವಾರ್ವಿಕ್ಶೈರ್ ಪಂದ್ಯವನ್ನು ಕೇವಲ ಎರಡು ದಿನಗಳಲ್ಲಿ 8 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಈ ಗೆಲುವಿನೊಂದಿಗೆ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ನೋಡಿರಿ

