ತೋತಾಪುರಿ ಮಾವಿಗೆ ಕೇಂದ್ರದ ಸಹಾಯಧನ – ಕರ್ನಾಟಕ ಮಾವು ಬೆಳೆಗಾರರ ಸಂಕಷ್ಟ ನೀಗುತ್ತಾ?

ತೋತಾಪುರಿ ಮಾವಿಗೆ ಕೇಂದ್ರದ ಸಹಾಯಧನ – ಕರ್ನಾಟಕ ಮಾವು  ಬೆಳೆಗಾರರ ಸಂಕಷ್ಟ ನೀಗುತ್ತಾ?

ಕರ್ನಾಟಕದ ತೋತಾಪುರಿ ಮಾವು ಬೆಳೆದ ಬೆಳೆಗಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ತೋತಾಪುರಿ ನೆರವಿಗೆ ಈಗ ಕೇಂದ್ರ ಸರ್ಕಾರ ಬಂದಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ 1.30 ಲಕ್ಷ ಮೆಟ್ರಿಕ್ ಟನ್ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂ. ಸಹಾಯಧನ ಘೋಷಿಸಿದೆ.

ಇದನ್ನೂ ಓದಿ: ಮಹೇಶ್‌ಬಾಬುಗೆ 100 ಟೇಕ್ ಹೇಳಿದ ರೌಜಮೌಳಿ – ಮರುದಿನವೂ ಅದೇ ಶಾಟ್.. ಅದೇ ರಿಪೀಟ್

ಒಂದೆಡೆ ಹವಾಮಾನ ವೈಪರೀತ್ಯ. ಮತ್ತೊಂದೆಡೆ ಬೆಲೆ ಕುಸಿತ. ಕರ್ನಾಟಕ ಮಾವು ಬೆಳೆಗಾರರಿಗೆ ಪ್ರತಿವರ್ಷ ಸಂಕಷ್ಟ ತಪ್ಪಿದ್ದಲ್ಲ. ಕೊನೆಗೂ ತೋತಾಪುರಿ ಮಾವು ಬೆಳಗಾರರ ಸಹಾಯಕ್ಕೆ ಕೇಂದ್ರ ಸರ್ಕಾರ ಧಾವಿಸಿದೆ. ಮಾರುಕಟ್ಟೆ ಹಸ್ತಕ್ಷೇಪ ಯೋಜನೆ  ಅಡಿಯಲ್ಲಿ 1,30,000 ಮೆಟ್ರಿಕ್ ಟನ್ ತೋತಾಪುರಿ ಮಾವಿಗೆ ಪ್ರತಿ ಕ್ವಿಂಟಾಲ್‌ಗೆ 1,750 ರೂಪಾಯಿ ಸಹಾಯಧನವನ್ನು ರೈತರಿಗೆ ನೀಡಲು ಅನುಮೋದನೆ ನೀಡಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಎಕ್ಸ್​​ ಪೋಸ್ಟ್​​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತೋತಾಪುರಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ಬೆಲೆ ಕೊರತೆ ಪಾವತಿ ಯೋಜನೆ (PDPS) ಅಡಿಯಲ್ಲಿ ಬೆಂಬಲ ನೀಡುವಂತೆ ತಾನು ಮನವಿ ಮಾಡಿದ್ದೆ. ಆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ) ಅಡಿಯಲ್ಲಿ ರೈತರಿಗೆ ಸಹಾಯಧನವನ್ನು ನೀಡಲು ಅನುಮೋದನೆ ನೀಡಿರೋದಾಗಿ ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ. ಇನ್ನು ರಾಜ್ಯದ ಮಾವು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಂಡಿರುವ ಕೇಂದ್ರ ಕೃಷಿ ಸಚಿವರಿಗೆ ಹೃತ್ಪೂರ್ವಕ ಧನ್ಯವಾದವನ್ನೂ ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ.

Sulekha

Leave a Reply

Your email address will not be published. Required fields are marked *