ತಿಮರೋಡಿ ಔಟ್.. ಸೌಜನ್ಯ ಕೇಸ್ ಸೈಲೆಂಟ್? – ಖೆಡ್ಡಾ ತೋಡಿದ್ದು ಯಾರು?

ಮಹೇಶ್ ಶೆಟ್ಟಿ ತಿಮರೋಡಿ.. ಸೌಜನ್ಯ ಕೇಸ್ ಮೂಲಕ ಇಡೀ ಕರಾವಳಿಯನ್ನ ಗಡಗಡ ನಡುಗಿಸಿ ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸೌಂಡ್ ಮಾಡಿದ ಹಿಂದೂ ಕಾರ್ಯಕರ್ತ. ಸಾಕಷ್ಟು ವರ್ಷಗಳಿಂದ ಸೌಜನ್ಯ ಪರ ಧ್ವನಿ ಎತ್ತುತ್ತಾ ಹೋರಾಟ ಮಾಡಿಕೊಂಡು ಬಂದಿರೋ ಈ ಮಹೇಶ್ ಶೆಟ್ಟಿ ತಲೆಬುರುಡೆ ಕೇಸ್ ನಂತ್ರ ಫುಲ್ ಆ್ಯಕ್ಟಿವ್ ಆಗಿ ಪವರ್ ಫುಲ್ ಆಗಿದ್ರು.. ಬಟ್ ತಮ್ಮ ಕಟು ಟೀಕೆ, ನಿಂದನೆಗಳ ಮೂಲಕ ಧರ್ಮಸ್ಥಳದ ಬಗ್ಗೆ, ರಾಜಕಾರಣಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದೇ ತಿಮರೋಡಿಯನ್ನ ಜಿಲ್ಲೆಯಿಂದ ಹೊರ ದಬ್ಬುವಂತೆ ಮಾಡಿದೆ.
ಅಂದಹಾಗೇ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ತಿಮರೋಡಿಗೆ ಬುರುಡೆ ಗ್ಯಾಂಗ್‌ನಿಂದಲೇ ಈ ಪರಿಸ್ಥಿತಿ ಬಂತು ಅನ್ಸುತ್ತೆ.. ಯಾಕಂದ್ರೆ ಚಿನ್ನಯ್ಯ ಸಿಗೋ ಮುಂಚೆ ಕೇವಲ ಸೌಜನ್ಯ ಪರ ಹೋರಾಟ ಮಾಡುತ್ತಿದ್ದರು ತಿಮರೋಡಿ. ಆದ್ರೆ ಯಾವಾಗ ಬರುಡೆ ಗ್ಯಾಂಗ್ ಜೊತೆ ಸೇರಿಕೊಂಡ್ರೋ ಮಹೇಶ್ ಶೆಟ್ಟಿ ತಿಮರೋಡಿಗೆ ಸಾಲು ಸಾಲು ವಿಘ್ನಗಳು ಎದುರಾಯ್ತು.. ಹಾಗೇ ಚಿನ್ನಯ್ಯ ಜೊತೆ ಎರುಡು ವರ್ಷದ್ದು ಎನ್ನಲಾದ ಹಳೆಯ ವಿಡಿಯೋ ಬಿಟ್ಟಿದ್ದು ಕೂಡ ಎಲ್ಲೋ ಎಫೆಕ್ಟ್ ಆಯ್ತು ಅನ್ಸುತ್ತೆ.. ಇನ್ನೊಂದು ವಿಷ್ಯ ಅಂದ್ರೆ ಚಿನ್ನಯ ಬಂದು ಎಸ್‌ಐಟಿ ರಚನೆ ಆದ್ರೂ ಮೇಲೆ ತಿಮರೋಡಿ ನಾಲಿಗೆ ಹರಿ ಬಿಡೋಕೆ ಶುರುಮಾಡಿದ್ರು. ಧರ್ಮಸ್ಥಳದ ಬಗ್ಗೆ ಪೊಲೀಸ್ ಬಗ್ಗೆ, ರಾಜಕಾರಣಿಗಳ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡೋಕೆ ಶುರುಮಾಡಿದ್ರು. ಇದು ಕೂಡ ತಿಮರೋಡಿಗೆ ಕಂಟಕ ಆಯ್ತು ಅಂತಾನೇ ಹೇಳಬಹುದು.
ಇದನ್ನೂ ಓದಿ: ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಗುಡ್‌ನ್ಯೂಸ್ – ಹುಬ್ಬಳ್ಳಿ-ಕೊಲ್ಲಂಗೆ ಸ್ಪೆಷಲ್ ಟ್ರೈನ್
ಇನ್ನು ತಿಮರೋಡಿ ಮೇಲೆ ಕೇಸ್ ಆಗಿರುವುದು ಇವತ್ತು ನಿನ್ನೆ ಅಲ್ಲ.. 1998ರಲ್ಲೇ ಇವ್ರ ಮೇಲೆ ರೌಡಿಶೀಟರ್ ಓಪನ್ ಮಾಡಲಾಗಿದೆ. ನಿಮ್ಗೆ ಗೊತ್ತಿರಲಿ ಸ್ನೇಹಿತರೇ ತಿಮರೋಡಿ ಮೇಲೆ 1992ರಿಂದ ಒಟ್ಟು 26 ಕೇಸ್ ದಾಖಲಾಗಿದೆ.ೆ ಇದ್ರಲ್ಲಿ 13 ಕೇಸ್ ಖುಲಾಸೆ ಆಗಿದ್ರೆ ಇನ್ನೂ 13 ಕೇಸ್ ಆ್ಯಕ್ಟಿವ್ ಆಗಿವೆ. ಅದ್ರಲ್ಲೂ ಮಾಸ್ಕ್ ಮ್ಯಾನ್ ಚಿನ್ನಯ್ಯನ ಕೇಸ್ ಶುರುವಾದ ಮೇಲೆ ತಿಮರೋಡಿ ಮೇಲೆ ಬೋನಸ್ ಮೇಲೆ ಬೋನಸ್ ಅಂತ ಕೇಸ್ ಮೇಲೆ ಕೇಸ್ ಹಾಕಲಾಯ್ತು. ಹೊಸದಾಗಿ 5 ಕೇಸ್ ಹಾಕಲಾಗಿದೆ. ಒಂದಿಷ್ಟು ಪ್ರಕರಣಗಳನ್ನು ಪೊಲೀಸರೇ ಹಾಕಿದ್ರೆ, ಮತ್ತಷ್ಟು ಕೇಸ್ ಬೇರೆಯವರು ಕೊಟ್ಟ ದೂರಿನ ಮೇಲೆ ಹಾಕಲಾಗಿದೆ. ಬಟ್ ಕೇಸ್ ಮೇಲೆ ಕೇಸ್ ಆಗಿದ್ರೂ ಗಡಿಪಾರು ಆಗ್ತಾ ಇರಲಿಲ್ಲ ಅನ್ಸುತ್ತೆ.. ಇದು ಗಡಿ ಪಾರು ಮಾಡೋ ಟೈಂ ಕೂಡ ಅಲ್ಲ.. ಎಲೆಕ್ಷನ್ ಬಂದಾಗ ಮಾತ್ರ ರೌಡಿಶೀಟರ್‌ಗಳನ್ನ ಗಡಿಪಾರು ಮಾಡ್ತಾರೆ. ಬಟ್ ಈಗ ತಿಮರೋಡಿಯನ್ನ ಇದ್ದಕ್ಕಿದಂತೆ ಒಂದು ವರ್ಷ ಗಡಿಪಾರು ಮಾಡೋದ್ರ ಹಿಂದೆ ರಾಜಕಾರಣಿಗಳ ಕೈವಾಡ ಇದ್ಯಾ ಅನ್ನೋ ಡೌಟ್ ಇದೆ. ಸಾಲು ಸಾಲು ಕೇಸ್ ಗಳ ಜೊತೆಗೆ ತಿಮರೋಡಿಗೆ ಮುಳುವಾಗಿದ್ದು, ಬಾಯಿಗೆ ಬಂದ ಹಾಗೇ ಬಳಸಿದ ಕೀಳು ಮಟ್ಟದ ಪದ ಬಳಕೆ ಎನ್ನಲಾಗ್ತಿದೆ. ರಾಜಕಾರಣಿಗಳ ಬಗ್ಗೆ, ಸಚಿವರ ಬಗ್ಗೆ, ಪೊಲೀಸ್ ಅಧಿಕಾರಿಗಳ ಬೇಕಾಬಿಟ್ಟಿ ಮಾತು, ಕೆಟ್ಟ ಪದ ಬಳಕೆ ತಿಮರೋಡಿಯನ್ನ ಈ ಸ್ಥಿತಿಗೆ ತಂದಿದೆ. ಹೀಗಾಗಿಯೇ ತಿಮರೋಡಿ ಕೇಸ್ ಹಿಸ್ಟರಿ ಮೇಲೆ ಟಫ್ ಆ್ಯಕ್ಟನ್ ತಗೊಂಡು ತಿಮರೋಡಿಯನ್ನ ಜಿಲ್ಲೆಯಿಂದ ಆಚೆ ಹಾಕಿ ಅಂತ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದರು ಅನ್ನೋ ಮಾತು ಕೇಳಿ ಬರ್ತಿದೆ. ಹಾಗೇ ಸೌಜನ್ಯ ಹೋರಾಟದಲ್ಲಿ ಧರ್ಮಸ್ಥಳದ ಬಗ್ಗೆ ನಿಂದನೆ ಮಾಡಿದ್ದು ಕೂಡ ಇಲ್ಲಿ ಎಫೆಕ್ಟ್ ಆಗಿದೆ ಅನ್ನೋದು ಕೂಡ ಸತ್ಯಕ್ಕೆ ದೂರವೇನು ಇಲ್ಲ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ನಲ್ಲಿ ಕೋರ್ಟ್ ತೀರ್ಪು ಹೊರಬಿದ್ದ ಬಳಿಕ ತಿಮರೋಡಿ ಧರ್ಮಸ್ಥಳದ ವಿರುದ್ಧ ಹೋರಾಟ ಮಾಡೋಕೆ ಶುರುಮಾಡಿದ್ರು. ಬೆಳ್ತಂಗಡಿಯಲ್ಲಿ ಮತ್ತು ಉಜಿರೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಕಾನೂನು ಬಾಹಿರ ಪ್ರತಿಭಟನಾ ನಡೆಸಿದ್ದಾರೆ. ಈ ಟೈಂನಲ್ಲಿ ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ತಂದೊಡ್ಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನ ತಿಮರೋಡಿ ಮಾಡಿದ್ದಾರೆ ಅನ್ನೋ ಕೇಸ್ ಹಾಕಲಾಗಿದೆ. ಹಾಗೇ ಸೌಜನ್ಯ ಹತ್ಯೆ ಪ್ರಕರಣ ಸಂಬಂಧ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಗಳಿಗೆ, ಪೊಲೀಸ್ ವ್ಯವಸ್ಥೆಗೆ, ಸಮಾಜದ ಗಣ್ಯರು ಮತ್ತು ಸರ್ಕಾರದ ಬಗ್ಗೆ ಕೆಟ್ಟಪದ ಬಳಕೆಮಾಡಿ, ಕಾನೂನು ಸುವ್ಯವಸ್ಥೆಗೆ ಭಂಗವಾಗುವ ರೀತಿ ವರ್ತಿಸಿರೋ ಬಗ್ಗೆ ಕೂಡ ಇವರ ಮೇಲೆ ಕೇಸ್ ಹಾಕಲಾಗಿದೆ… ಇನ್ನು ಇವರ 13 ಕೇಸ್ ಏನ್ ಖುಲಾಸೆ ಆಗಿವೆ ಅವೆಲ್ಲವನ್ನೂ ತಿಮರೋಡಿ ಗುಂಡಾ ವರ್ತನೆ ತೋರಿ ಖುಲಾಸೆ ಮಾಡಿಸಿಕೊಂಡಿರೋದು ಅನ್ನೋ ಆರೋಪ ಇದೆ. ಬುರುಡೆ ಕೇಸ್ ಶುರು ಆದ ಮೇಲೆ ಹೊಸದಾಗಿ ತಿಮರೋಡಿ ಮೇಲೆ 5 ಕೇಸ್‌ಗಳು ದಾಖಲಾಗಿವೆ.
ತಿಮರೋಡಿ ಮೇಲೆ ಹೊಸ 5 ಕೇಸ್
1.ಎಸ್‌ಐಟಿ ಶೋಧದ ವೇಳೆ ವರದಿಗಾರರ ಮೇಲೆ ಹಲ್ಲೆ ಕೇಸ್
- 100ಕ್ಕೂ ಅಧಿಕ ಜನರು ಸೇರಿ ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ದೊಂಬಿ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರ ಸ್ವಯಂ ಪ್ರೇರಿತ ಕೇಸ್
- ಯೂಟ್ಯೂಬ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆ ಚರಣ್ ಎಂಬವರ ದೂರಿನಡಿ ಎಫ್ಐಆರ್
- ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಿಕ್ಕಿದ ಹಿನ್ನೆಲೆ ಎಸ್ಐಟಿ ಎಸ್ಪಿ ಸೈಮನ್ ದೂರಿನಡಿ ದಾಖಲಾದ ಎಫ್ಐಆರ್
- ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ದಸ್ತಗಿರಿ ಮಾಡಲು ಬಂದಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸ್
ಹೀಗೆ ತಿಮರೋಡಿ ಮೇಲೆ ಕೇಸ್ ಮೇಲೆ ಕೇಸ್ ಬಿದ್ದಿರೋದು ರಾಯಚೂರಿಗೆ ಗಡಿಪಾರು ಮಾಡುವಂತೆ ಆಗಿದೆ. ಇನ್ನೂ ಗಡಿಪಾರು ಆಗಿರೋ ತಿಮರೋಡಿ ವಾರಕ್ಕೆ ಒಂದು ಬಾರಿ ಮಾನ್ವಿ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರಬೇಕು.. ಎಲ್ಲಾದ್ರೂ ದಕ್ಷಿಣಕನ್ನಡದಲ್ಲಿ ಕೋರ್ಟ್ ವಿಚಾರಣೆ ಇದ್ರೆ ತಿಮರೋಡಿ ಹೋಗಬೇಕು. ಆಗ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ 62ರ ಅಡಿಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು. ಅನುಮತಿ ಸಿಕ್ಕಿದ್ರೆ ಕೊಟ್ಟ ಟೈಂಗೆ ಹೋಗಿ ಫಟ್ ಅಂತ ಬರಬೇಕು. ಒಂದು ವೇಳೆ ಏನು ಆಗಲ್ಲ ಅಂತ ಅಕ್ರಮವಾಗಿ ದಕ್ಷಿಣಕನ್ನಡ ಜಿಲ್ಲೆಗೆ ಹೋದ್ರೆ ತಿಮರೋಡಿಯನ್ನ ಪೊಲೀಸರು ಅರೆಸ್ಟ್ ಮಾಡಿ ದಂಡ ಕೂಡ ಹಾಕಬಹುದು.
ಸೌಜನ್ಯ ಕೇಸ್ ಸೈಲೆಂಟ್ ಆಗುತ್ತಾ?
ಇನ್ನು ಸೌಜನ್ಯ ಪರ ಧ್ವನಿ ಎತ್ತುತ್ತಿದ್ದ ತಿಮರೋಡಿ ಗಡಿ ಪಾರು ಆಗಿದ್ದಾರೆ. ಇನ್ನೂ ಸೌಜನ್ಯ ಕೇಸ್ ಸೈಲೆಂಟ್ ಕೂಡ ಆಗಬಹುದು ಅನ್ನೋ ಮಾತು ಕೇಳಿ ಬರ್ತಿದೆ. ಬಟ್ ಗಡಿಪಾರು ಆದ ಮಾತ್ರಕ್ಕೆ ತಿಮರೋಡಿ ಸುಮ್ಮನೆ ಇರಲ್ಲ.. ಸೋಷಿಯಲ್ ಮೀಡಿಯಾವನ್ನ ಮತ್ತೆ ಚೆನ್ನಾಗಿ ಬಳಸಿಕೊಳ್ಳಬಹುದು. ಯಾಂಕದ್ರೆ ತಿಮರೋಡಿ ಇಲ್ಲಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಆಗಿರೋದು..ಇವರ ಏನೂ ಮಾತನಾಡಬಾರದು ಅನ್ನೋ ನಿರ್ಬಂಧ ಹೇರಿಲ್ಲ.. ಹೀಗಾಗಿ ತಿಮರೋಡಿ ಮಾನ್ವಿಯಿಂದ ಅಥವಾ ಬೇರೆ ಯಾವುದೇ ಜಿಲ್ಲೆಯಿಂದ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವಿಡಿಯೋ ಮಾಡಬಹುದು. ಸೌಜನ್ಯ ಪರ ಕೂಡ ಧ್ವನಿ ಎತ್ತ ಬಹುದು. ಹಾಗಂತ ತಿಮರೋಡಿ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದರೆ, ಅವರ ವಿರುದ್ಧ ಹೊಸ ಕೇಸ್ ದಾಖಲಾಗುತ್ತೆ. ಇನ್ನು ಮಹೇಶ್ ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ಬೇರೆಡೆ ಸಾರ್ವಜನಿಕ ಸಭೆಗಳಲ್ಲಿಯೂ ಭಾಗವಹಿಸಬಹುದು.

ನೋಡಿರಿ

