ಡೆಲ್ಲಿ ಅಖಾಡದಲ್ಲಿ ಗ್ಯಾರಂಟಿ ಅಬ್ಬರ – APP, ಕಾಂಗ್ರೆಸ್, BJPಯ ಹಣದ ಹೊಳೆ!
ಸೋಲು ಗೆಲುವಿನ ಲೆಕ್ಕಾಚಾರವೇನು?

ಡೆಲ್ಲಿ ಅಖಾಡದಲ್ಲಿ ಗ್ಯಾರಂಟಿ ಅಬ್ಬರ – APP, ಕಾಂಗ್ರೆಸ್, BJPಯ ಹಣದ ಹೊಳೆ!ಸೋಲು ಗೆಲುವಿನ ಲೆಕ್ಕಾಚಾರವೇನು?

ಗ್ಯಾರಂಟಿಯಿಂದ ರಾಜ್ಯನೂ ಅಭಿವೃದ್ಧಿಯಾಗಲ್ಲ, ದೇಶವೂ ಅಭಿವೃದ್ಧಿ ಆಗಲ್ಲ ಅಂತ ಬಿಜೆಪಿ ಅದೇ ಗ್ಯಾರಂಟಿ ಯೋಜನೆಯನ್ನ ಘೋಷಣೆ ಮಾಡಿದೆ. ಹೇಗಾದ್ರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಬೇಕು ಅಂತ ಪ್ಲ್ಯಾನ್ ಮಾಡಿರೋ 3 ಪಕ್ಷಗಳು ಪೈಪೋಟಿಗೆ ಬಿದ್ದಂತೆ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿದೆ.

ಅರವಿಂದ್ ಕೇಜ್ರವಾಲ್ ನೇತೃತ್ವದ ಆಮ್ ಆದ್ಮ ಪಾರ್ಟಿ ಮಹಿಳೆಯರಿಗೆ ಈಗಾಗಲೇ ಮಹಿಳಾ ಸಮ್ಮಾನ್ ಯೋಜನೆ ಜಾರಿ ಮಾಡಿದ್ದು, ಈಗ ನೀಡುತ್ತಿರುವ 1000 ರೂಪಾಯಿ ಹಣವನ್ನ 2,100 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದೆ.. ಪ್ಯಾರಿ ದೀದಿ ಯೋಜನೆ ಮೂಲಕ ಪ್ರತಿತಿಂಗಳು ಮಹಿಳೆಯರಿಗೆ 2,500 ರೂಪಾಯಿ ಕೊಡ್ತಿವಿ ಅಂತ ಕಾಂಗ್ರೆಸ್ ಪಕ್ಷ ಹೇಳಿದ್ರೆ, ಬಿಜೆಪಿ ಮಹಿಳಾ ಸಮೃದ್ಧಿ ಯೋಜನೆ ಮೂಲಕ ತಿಂಗಳಿಗೆ 2,500 ರೂಪಾಯಿ ಕೊಡುವ ಬಗ್ಗೆ ಘೋಷಿಸಿದೆ.  ಆಮ್ ಆದ್ಮ ಸರ್ಕಾರದಲ್ಲಿ ಈಗಾಗಲೇ 20 ಸಾವಿರ ಲೀಟರ್ ಉಚಿತ ನೀರು ಕೊಡಲಾಗ್ತಿದೆ. 300 ಯುನಿಟ್ವರೆಗೆ ಫ್ರೀ ಕರೆಂಟ್, 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡ‌ರ್ ಕೊಡ್ತಿವಿ ಎಂದು ಕಾಂಗ್ರೆಸ್ ಘೋಷಿಸಿದೆ.. LPG ಸಿಲಿಂಡರ್‌ಗೆ 500 ರೂಪಾಯಿ ಸಬ್ಸಿಡಿ ಕೊಡ್ತೀವಿ ಅಂತ ಬಿಜೆಪಿ ಪಕ್ಷವೂ ಘೋಷಿಸಿದೆ. ಕೇಜಿವಾಲ್ ಸರ್ಕಾರ ಅರ್ಚಕರಿಗೆ ಮಾಸಿಕ 18 ಸಾವಿರ ಗೌರವಧನ ಕೊಡುವ ಭರವಸೆ ನೀಡಿದೆ.. ನಿರುದ್ಯೋಗಿ ಯುವಕರಿಗೆ 8,500 ರುಪಾಯಿ ಕೊಡ್ತೀವಿ ಅಂತ ಕಾಂಗ್ರೆಸ್‌ ಘೋಷಿಸಿದೆ.. ಗರ್ಭಿಣಿಯರಿಗೆ 21,000 ಸಹಾಯಧನ ಘೋಷಿಸಿದೆ ಬಿಜೆಪಿ.ಆಮ್ ಆದ್ಮ ಪಕ್ಷ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಯಾವುದೇ ಮಿತಿ ಇಲ್ಲದೇ ಉಚಿತ ಚಿಕಿತ್ಸೆ ನೀಡುವ ಸಂಜೀವಿನಿ ಯೋಜನೆ ಘೋಷಿಸಿದ್ರೆ, ಕಾಂಗ್ರೆಸ್ ಪಕ್ಷ ಜೀವನ್ ರಕ್ಷಾ ಯೋಜನೆ ಘೋಷಿಸಿದ್ದು, 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಕೊಡ್ತೀವಿ ಅಂತ ಪ್ರಣಾಳಿಕೆಯಲ್ಲಿ ತಿಳಿಸಿದೆ. ಬಿಜೆಪಿ ‘ಆಯುಷ್ಮಾನ್‌ ಭಾರತ್’ ಯೋಜನೆಯಡಿ ಆರೋಗ್ಯ ರಕ್ಷಣೆಗೆ 50 ಸಾವಿರ ರೂಪಾಯಿ ಕೊಡ್ತೀವಿ ಅಂತ ಸಂಕಲ್ಪ ಮಾಡಿದೆ. ಜೊತೆಗೆ ಆಟೋ ಚಾಲಕರ ಕುಟುಂಬಕ್ಕೆ ವಾರ್ಷಿಕ ₹10 ಲಕ್ಷದ ಜೀವ ವಿಮೆ, 5 ಲಕ್ಷದ ಅಪಘಾತ ವಿಮೆ ಘೋಷಿಸಿದೆ AAP. ಅಂಗವಿಕಲರ ಸಹಾಯಧನ ಹೆಚ್ಚಳದ ಭರವಸೆಯನ್ನೂ ಕಾಂಗ್ರೆಸ್‌ ಘೋಷಿಸಿದೆ.. ಹಿರಿಯ ನಾಗರಿಕರಿಗೆ ಬಿಜೆಪಿ 3 ಸಾವಿರ ಪಿಂಚಣಿ ಘೋಷಿಸಿದೆ. 3 ಪಕ್ಷಗಳು ಪೈಪೋಟಿಗೆ ಬಿದ್ದಂತೆ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದು, ಯಾರಿಗೆ ವೋಟ್ ಹಾಕಬೇಕು ಅನ್ನೋ ಕನ್ಫೂಸ್ನಲ್ಲಿ ಡೆಲ್ಲಿ ಜನರಿದ್ದಾರೆ.

ಇದನ್ನೂ ಓದಿ: ಉಮಾಶ್ರೀ ಯಕ್ಷರಂಗ ಪ್ರವೇಶ.. ಮಂಥರೆ ಪಾತ್ರದಲ್ಲಿ ಪುಟ್ಟಕ್ಕ – ಚಿಟ್ಟಾಣಿಗೆ ಕೊಟ್ಟ ಮಾತು ಉಳಿಸಿಕೊಂಡ್ರಾ?

ಬಿಜೆಪಿ 1998ರ ನಂತರ ದೆಹಲಿಯಲ್ಲಿ ಅಧಿಕಾರ ಹಿಡಿಯಲಿಲ್ಲ. ಬದಲಾಗಿ ಇಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಅನ್ನು 2013 ಚುನಾವಣೆಯಲ್ಲಿ ಸೋಲಿಸಿದ ಎಎಪಿ ಕಳೆದ ಎರಡು ಭಾರಿ ಆಡಳಿತ ನೀಡಿದೆ. ಮಾಜಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಡಳಿತ ನಡೆಸಲಾಯಿತು. ಎಎಪಿ ಬದಲಿಸಲು ಕೇವಲ ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಸಹ ಪಣ ತೊಟ್ಟಿದೆ.

ದೆಹಲಿ ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಎಎಪಿ ಪಕ್ಷಗಳು ಎದುರಾಗಲಿವೆ. ತೀವ್ರ ಪೈಪೋಟಿ ಉಂಟಾಗುವ ಸಾಧ್ಯತೆ ಇದೆ. ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯು ಇದೆ. ಒಂದೇ ಹಂತದಲ್ಲಿ ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಮುಂದಿನ ತಿಂಗಳ ಫೆಬ್ರವರಿ 5 ರಂದು ಮತದಾನ ನಡೆಯಲಿದೆ.  ಫೆಬ್ರವರಿ 8  ಫಲಿತಾಂಶ ಬಿಡುಗಡೆ ಆಗಲಿದೆ.  ಕಳೆದ ಚುನಾವಣೆಯಲ್ಲಿ ಒಟ್ಟು 70 ಸ್ಥಾನಗಳಲ್ಲಿ ಎಎಪಿ ಬರೋಬ್ಬರಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಭಾರಿ ಹಿಡಿತ ಸಾಧಿಸಿತು. ಬಿಜೆಪಿ ಕೇವಲ ಎಂಟು ಸ್ಥಾನ ಪಡೆದು ರಾಜ್ಯ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡಿದೆ. ಆದ್ರೆ ಕಾಂಗ್ರೆಸ್ ಕಳೆದ ಭಾರಿ ಖಾತೆಯನ್ನೇ ತೆರೆದಿಲ್ಲ.
ಬಿಜೆಪಿ ಕಡೆ ಡೆಲ್ಲಿ ಜನರ ಒಲವು

2020ರ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಗಳ ಗೆಲುವಿನ ಅಂತರ 2015ರ ಚುನಾವಣೆಗೆ ಹೋಲಿಸಿದರೆ ಬಹಳ ಕಮ್ಮಿ ಇದ್ದದ್ದು ಒಂದು ಕಡೆ. ಇನ್ನೊಂದು ಕಡೆ, ಆಮ್ ಆದ್ಮಿ ಪಾರ್ಟಿಗೆ ಬಿದ್ದ ಮತಗಳ ಪ್ರಮಾಣದಲ್ಲಿ ಶೇ. 0.73ರಷ್ಟು ಇಳಿಕೆಯಾಗಿದ್ದದ್ದು. ಮತ್ತೊಂದು ಕಡೆ, ಬಿಜೆಪಿಯ ಮತ ಪ್ರಮಾಣ ಶೇ. 6.21ರಷ್ಟು ಏರಿಕೆಯಾಗಿದೆ. ಕಳೆದ ಚುನಾವಣೆಯಲ್ಲೂ, ಆಮ್ ಆದ್ಮಿ – ಬಿಜೆಪಿ – ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ, ಬಿಜೆಪಿ ಶೇ. 38.51 ಒಟ್ಟಾರೆಯಾಗಿ ಮತವನ್ನು ಪಡೆದಿತ್ತು. ಇನ್ನೊಂದು ಕಡೆ, ಆಮ್ ಆದ್ಮಿಗೆ ಶೇ.53.57 ಮತಗಳು ಬಿದ್ದಿದ್ದವು. ಈ ಎರಡು ಪಕ್ಷಗಳ ಪೈಪೋಟಿಯ ನಡುವೆ ಕಾಂಗ್ರೆಸ್ಸಿಗೆ ಬಿದ್ದದ್ದು ಕೇವಲ ಶೇ. 4.26ರಷ್ಟು.  ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಹತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್, 2015 ಮತ್ತು 2020ರ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇನ್ನೊಂದು ಕಡೆ, ಬಿಜೆಪಿಯು ಎರಡು ಚುನಾವಣೆಗೆ ಹೋಲಿಸಿದರೆ, 3 ರಿಂದ 8 ಸ್ಥಾನವನ್ನು ಗೆದ್ದದ್ದು ಮತ್ತು ಮತ ಪ್ರಮಾಣವನ್ನೂ ಹೆಚ್ಚಿಸಿಕೊಂಡಿದೆ.

 ಬಿಜೆಪಿ – APPಗೆ ಬಿಗ್‌ ಫೈಟ್‌

ಮೇಲ್ನೋಟಕ್ಕೆ ಮೂರು ಪಕ್ಷಗಳ ನಡುವೆ ಪೈಪೋಟಿಯಿದ್ದರೂ, ಆಮ್ ಆದ್ಮಿ ಮತ್ತು ಬಿಜೆಪಿ ನಡುವೆಯೇ ಫೈಟ್ ಹೆಚ್ಚಿದೆ. ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷವಾಗಿರುವ ಆಮ್ ಆದ್ಮಿ ಮತ್ತು ಕಾಂಗ್ರೆಸ್, ದೆಹಲಿ ಚುನಾವಣೆಯಲ್ಲಿ ಒಬ್ಬರೊನ್ನೊಬ್ಬರು ದೂಷಿಸಿಕೊಂಡು ಪ್ರಚಾರ ಮಾಡುತ್ತಿವೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ಬಗ್ಗೆ ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ವೋಟ್ ಬಿಜೆಪಿ ಅಥವಾ ಆಪ್‌ಗೆ ಹಾಕೋ ಸಾಧ್ಯತೆ ತುಂಬಾ ಹೆಚ್ಚು..

ಕೇಜ್ರಿವಾಲ್‌ಗೆ ಸಿಗುತ್ತಾ ಅನುಕಂಪದ ವೋಟ್‌?

ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಅಬಕಾರಿ ಭ್ರಷ್ಟಾಚಾರದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲು ಪಾಲಾಗಿ ಹೊರಗೆ ಬಂದಿದ್ದು, ಅನುಕಂಪದ ಆಧಾರದ ಮೇಲೆ ಆಮ್ ಆದ್ಮಿ ಪಾರ್ಟಿಗೆ ಯಾವುದೇ ಲಾಭವಾಗುವ ಸಾಧ್ಯತೆ ಕಮ್ಮಿ. ಜೊತೆಗೆ, ಲೋಕಸಭಾ ಚುನಾವಣಾ ಫಲಿತಾಂಶದ ಪರಿಣಾಮ ಅಸೆಂಬ್ಲಿ ಚುನಾವಣೆಯಲ್ಲಿ ಬೀರುವ ಸಾಧ್ಯತೆಯಿದೆ ಎಂದೂ ಸರ್ವೇಯಲ್ಲಿ ಉಲ್ಲೇಖವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶೇಷ ಬಲ ಬಿಜೆಪಿಗೆ

ರಾಷ್ಟ್ರ ರಾಜಧಾನಿಯ ಆಡಳಿತದ ಚುಕ್ಕಾಣಿಯನ್ನು ಹಿಡಿಯಲೇಬೇಕೆಂದು, ಬಿಜೆಪಿಯು ಮಹಾರಾಷ್ಟ್ರ ಮತ್ತು ಹರ್ಯಾಣದ ಗೆಲುವಿನ ತಂತ್ರಗಾರಿಕೆಗೆ ಮೊರೆಹೋಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶೇಷ ಬಲ ಬಿಜೆಪಿಗೆ ಸಿಕ್ಕಿದೆ. ಈ ಕಾರಣಕ್ಕಾಗಿ, ಆಮ್ ಆದ್ಮಿ ಮತ್ತು ಕಾಂಗ್ರೆಸ್, ಬಿಜೆಪಿ ಜೊತೆ RSS ಜೊತೆ ಮೋಹನ್ ಭಾಗವತರ್ ವಿರುದ್ದವೂ ಹರಿಹಾಯುತ್ತಿದೆ.

 ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೇಜ್ರೀವಾಲ್ ರೀತಿ ಉಚಿತ ಭಾಗ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಒಪ್ಪಿಗೆ ನೀಡುತ್ತಾರೆಯೇ ಅಥವಾ ಈ ಹಿಂದೆ ಮೋದಿ ತಾನು ಹೇಳಿದ್ದು ತಪ್ಪು ಎಂದು ಅವರು ಹೇಳಬೇಕು.. ಇದನ್ನು ಸಾರ್ವಜನಿಕವಾಗಿ ಘೋಷಿಸಬೇಕು” ಎಂದು   ಕೇಜ್ರಿವಾಲ್  ಕಿಡಿಕಾರಿದ್ದಾರೆ. ಫ್ರೀ ಯೋಜನೆಯಿಂದ ದೇಶ ಹಾಳಾಗುತ್ತೆ ಎಂದು ಮೋದಿ ಹೇಳಿದ್ರು, ಈಗ ನಮ್ಮ ಯೋಜನೆಯನ್ನ ಅವರೇ ಕಾಪಿ ಮಾಡಿದ್ದಾರೆೆಂದು ಕೇಜ್ರಿವಾಲ್ ಕಿಡಿ ಕಾರಿದ್ದಾರೆ.

ಡೆಲ್ಲಿ ಗ್ಯಾರಂಟಿ  ಕಾಂಗ್ರೆಸ್ ಕೈ ಹಿಡಿಯುತ್ತಾ?

ಗ್ಯಾರಂಟಿ ಸ್ಕೀಂಗಳಿಂದ, ಕಾಂಗ್ರೆಸ್ಸಿನ ವೋಟ್ ಶೇರ್ ಪ್ರಮಾಣ ಹೆಚ್ಚಾದರೂ, ಅದು ಸೀಟಾಗಿ ಪರಿವರ್ತನೆಯಾಗುವುದಿಲ್ಲ. ಬದಲಿಗೆ, ತನ್ನ ಗ್ಯಾರಂಟಿಯ ಲಾಭ, ಬಿಜೆಪಿಗೆ ಆಗಲಿದೆ ಎನ್ನುವುದು ಸಮೀಕ್ಷೆಯೊಂದರಲ್ಲಿ ಬಹಿರಂಗಗೊಂಡಿದೆ. ಒಂದು ವೇಳೆ, ಆಮ್ ಆದ್ಮಿ ಪಾರ್ಟಿಯ ಗ್ಯಾರಂಟಿಗಳಿಗೆ ಮತದಾರ ಒಪ್ಪಿಕೊಂಡರೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಮತ್ತೆ ಹೀನಾಯ ಸೋಲಾಗಲಿದೆ. ಹಾಗಿದ್ರೆ ಗ್ಯಾರಂಟಿ ಬಗ್ಗೆ ಯಾರಿಗೆ ಹೆಚ್ಚು ಲಾಭ ಆಗಬಹುದು ಅನ್ನೋದನ್ನ ನೋಡೋದಾದ್ರೆ..

ಗ್ಯಾರಂಟಿಯಿಂದ ಆಮ್ ಆದ್ಮಿ ಪಾರ್ಟಿಗೆ ಲಾಭ

ಶೇ. 51.2 ಲಾಭ  – 56 ರಿಂದ 60 ಸ್ಥಾನಗಳು

ಗ್ಯಾರಂಟಿಯಿಂದ ಬಿಜೆಪಿ ಪಾರ್ಟಿಗೆ ಲಾಭ

ಶೇ 44.9 ಲಾಭ – 33 ರಿಂದ 36 ಸ್ಥಾನಗಳು

ಗ್ಯಾರಂಟಿಯಿಂದ ಕಾಂಗ್ರೆಸ್  ಪಾರ್ಟಿಗೆ ಲಾಭ

ಶೇ 9 ಲಾಭ –- 2 ರಿಂದ 5ಸ್ಥಾನ ಬರಬಹುದು

ಇದು ಒಂದು ಅಂದಾಜಿನ ಪ್ರಕಾರ ಇಷ್ಟು ಲಾಭ ಆಗಬಹುದು ಎನ್ನಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಫೈಟ್ ಕೊಡಬಹುದೇ ಹೊರತು, ಬಿಜೆಪಿ ಮತ್ತು ಆಪ್‌ಗಿಂತ ಹೆಚ್ಚು ಸ್ಥಾನವನ್ನ ಪಡೆಯೋಕೆ ಸಾಧ್ಯವಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ.

 

Kishor KV

Leave a Reply

Your email address will not be published. Required fields are marked *