ಟೀಂ ಇಂಡಿಯಾದಲ್ಲಿ ಚಾನ್ಸ್ ಮಿಸ್ – ಸಿಟ್ಟು , ಹತಾಶೆಯಿಂದ ಸಿಡಿದೆದ್ದ ಇಶನ್
ಕೌಂಟಿ ಕ್ರಿಕೆಟ್ನಲ್ಲಿ ಕಿಶನ್ ಅಬ್ಬರ

ಟೀಂ ಇಂಡಿಯಾದಲ್ಲಿ ಚಾನ್ಸ್ ಮಿಸ್  – ಸಿಟ್ಟು , ಹತಾಶೆಯಿಂದ ಸಿಡಿದೆದ್ದ ಇಶನ್ಕೌಂಟಿ ಕ್ರಿಕೆಟ್ನಲ್ಲಿ ಕಿಶನ್ ಅಬ್ಬರ

ಭಾರತದ ಸ್ಟಾರ್​ ​ಎಡಗೈ ಬ್ಯಾಟರ್​ ಇಶಾನ್​ ಕಿಶನ್​ ಟೀಮ್​ ಇಂಡಿಯಾ ದಿಂದ ದೂರವಾಗಿ 19 ತಿಂಗಳುಗಳೇ ಕಳೆದಿವೆ. ಸದ್ಯ ಐಪಿಎಲ್​ ಸೇರಿದಂತೆ ಡೊಮೆಸ್ಟಿಕ್​ ಲೀಗ್​ಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಇಶಾನ್. ಕಳೆದೊಂದು ವರ್ಷದಿಂದಲೂ ಕಿಶನ್​ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಅದರಲ್ಲೂ ದೇಶಿಲೀಗ್​ಗಳಲ್ಲೂ ಆಡದೆ ಇದ್ದ ಕಾರಣ ಬಿಸಿಸಿಐ ಸೆಂಟ್ರಲ್​ ಕಾಂಟ್ರ್ಯಾಕ್ಟ್​ನಿಂದಲೂ ಕೈಬಿಟ್ಟಿತ್ತು. ಇದಾದ ಬಳಿಕ ಕೇವಲ ಐಪಿಎಲ್​ನಲ್ಲಿ ಮಾತ್ರ ಕಿಶನ್​ ಕಾಣಿಸಿಕೊಳ್ಳುತ್ತಿದ್ದಾರೆ. 2021ರಲ್ಲಿ ಟಿ20ಗೆ ಪಾದರ್ಪಣೆ ಮಾಡುವ ಮೂಲಕ ಇಶಾನ್​ ಕಿಶನ್​ ಅಂತರಾಷ್ಟ್ರೀಯ ಪಂದ್ಯಕ್ಕೆ ಪಾದರ್ಪಣೆ ಮಾಡಿದ್ದರು. ಇದಾದ ಬೆನ್ನಲ್ಲೆ 2021ರಲ್ಲೇ ಏಕದಿನ ಸರಣಿಗೂ ಕಾಲಿಟ್ಟರು ನಂತರ 2023ರಲ್ಲಿ ವೆಸ್ಟ್​ ಇಂಡೀಸ್​ನೊಂದಿಗೆ ಟೆಸ್ಟ್​ಗೂ ಪಾದಾರ್ಪಣೆ ಮಾಡಿದರು. ಆದ್ರೆ ಈಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋಕೆ ಇಶಾನ್ ಸರ್ಕಸ್ ಮಾಡುತ್ತಿದ್ದಾರೆ..

ಇನ್ನು ಇಶಾನ್ ಕಿಶಾನ್​ ಟೆಸ್ಟ್​, ಏಕದಿನ ಮತ್ತು ಟಿ20 ಸ್ವರೂಪ ಸೇರಿ ಮೂರರಲ್ಲೂ 61 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಎರಡು ಟೆಸ್ಟ್​ ಪಂದ್ಯಗಳನ್ನು ಆಡಿದ್ದ ಕಿಶನ್​ 78 ರನ್​ ಬಾರಿಸಿದ್ದರು. ಏಕದಿನ ಸ್ವರೂಪದಲ್ಲಿ 27 ಪಂದ್ಯಗಳಲ್ಲಿ 1 ಶತಕ ಮತ್ತು 7 ಅರ್ಧಶತಕ ಸಹಾಯದಿಂದ 933 ರನ್​ ಕಲೆಹಾಕಿದ್ದಾರೆ. ಇದಲ್ಲದೇ 32 ಟಿ20 ಪಂದ್ಯಗಳನ್ನು ಆಡಿದ್ದು 6 ಅಧರ್ಶತಕ ಬಾರಿಸಿ 796 ರನ್​ಗಳನ್ನು ಗಳಿಸಿದ್ದಾರೆ. )  ಇದೀಗ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಬಯಸಿದರು ತಂಡದಲ್ಲಿ ಅವರಿಗೆ ಸ್ಥಾನ ಸಿಗುತ್ತಿಲ್ಲ.

ಕೌಂಟಿ ಕ್ರಿಕೆಟ್‌ನಲ್ಲಿ ಇಶಾನ್ ಹವಾಳಿ

ಐಪಿಎಲ್ ಮುಗಿದ ಮೇಲೆ ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗುತ್ತೆ ಅಂತ ಅಂದ್ಕೊಂಡಿದ್ರು ಆದ್ರೆ ಸಿಕ್ಕಿಲ್ಲ.  ಹೀಗಾಗಿ ಕೌಂಟಿ ಲೀಗ್​ನಲ್ಲಿ ಕಣಕ್ಕಿಳಿದಿದ್ದಾರೆ. ಇಂಗ್ಲೆಂಡ್‌ನ ನಾಟಿಂಗ್‌ ಹ್ಯಾಮ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದಾರೆ. ಇದೇ ತಂಡದಲ್ಲಿ ಪಾಕಿಸ್ತಾನಿ ಸೀಮರ್ ಮೊಹಮ್ಮದ್ ಅಬ್ಬಾಸ್ ಕೂಡ ಇದ್ದಾರೆ. ಕೆಲ ಸಮಯದಿಂದ ಟೀಮ್ ಇಂಡಿಯಾದಿಂದ ದೂರವಿದ್ದ ಇಶಾನ್ ಕಿಶನ್, ತಮ್ಮ ರೆಡ್-ಬಾಲ್ ಕ್ರಿಕೆಟ್ ಕೌಶಲ್ಯವನ್ನು ಸುಧಾರಿಸಲು ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ, ಅವರು ನಾಟಿಂಗ್‌ಹ್ಯಾಮ್‌ಶೈರ್ ಜೊತೆ ಎರಡು ಪಂದ್ಯಗಳಿಗೆ ಅಲ್ಪಾವಧಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಜೂನ್ 22, 2025 ರಂದು ಯಾರ್ಕ್‌ಷೈರ್ ವಿರುದ್ಧದ ಪಂದ್ಯದಲ್ಲಿ ಇಶಾನ್ ನಾಟಿಂಗ್‌ಹ್ಯಾಮ್‌ಶೈರ್ ಪರ ಪಾದಾರ್ಪಣೆ ಮಾಡಿದರು. ಅದರಂತೆ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಕಿಶನ್​ 87 ರನ್​ ಬಾರಿಸಿದ್ದಾರೆ.​ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಮೊಹಮ್ಮದ್ ಅಬ್ಬಾಸ್ ಒಟ್ಟಿಗೆ ಆಡುತ್ತಿರುವುದರಿಂದ, ಅಭಿಮಾನಿಗಳು ಮೈದಾನದಲ್ಲಿ ಅವರ ಇಬ್ಬರ ನಡುವಿನ ಸಂಭಾಷಣೆ ಮತ್ತು ವಿಕೆಟ್‌ಗಳು ಬಿದ್ದಾಗ ಇಬ್ಬರ ಸಂಭ್ರಮ ಹೇಗಿರುತ್ತದೆ ಎಂದು ನೋಡಲು ಕುತೂಹಲದಿಂದ ಎದುರ ನೋಡುತ್ತಿದ್ದಾರೆ.

Kishor KV