ಗಣೇಶ ಹಬ್ಬಕ್ಕೆ ಮಾಡಿ ಸಿಹಿ ಕಡುಬು – ಈ ಸಿಂಪಲ್ ವಿಧಾನದಲ್ಲಿ ಫಟಾಫಟ್ ಅಂತ ರೆಡಿ

ಗಣೇಶ ಹಬ್ಬ ಅಂದ್ರೆ ಮೊದಲು ನೆನಪಾಗೋದು ಗಣಪತಿಗೆ ಇಷ್ಟವಾದ ಕಡುಬು. ಹಬ್ಬದ ದಿನ ಮನೆಯಲ್ಲಿ ಸಿಹಿ ಕಡುಬು ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಹೆಚ್ಚು ಕಷ್ಟಪಡಬೇಕಿಲ್ಲ. ಸರಳವಾದ ವಿಧಾನದಲ್ಲಿ ರುಚಿಯಾದ ಕಡುಬು ಮಾಡಬಹುದು.

ಇದಕ್ಕೆ ಬೇಕಾಗುವ ವಸ್ತುಗಳು

ಒಂದು ಕಪ್ ಅಕ್ಕಿ ಹಿಟ್ಟು

ಒಂದು ಕಪ್ ಬೆಲ್ಲ

ಒಂದು ಕಪ್ ತುರಿದ ತೆಂಗಿನಕಾಯಿ

ಎರಡು ಚಮಚ ತುಪ್ಪ

ಸ್ವಲ್ಪ ಏಲಕ್ಕಿ ಪುಡಿ

ಒಂದು ಚಿಟಿಕೆ ಉಪ್ಪು.

ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಕುದಿಯಲು ಇಡಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಒಂದು ಚಮಚ ತುಪ್ಪ ಹಾಕಿ. ನೀರು ಕುದಿಯಲು ಶುರುವಾದಾಗ ಅಕ್ಕಿ ಹಿಟ್ಟನ್ನು ನಿಧಾನವಾಗಿ ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಗಟ್ಟಿಯಾದ ಮೇಲೆ ಸ್ವಲ್ಪ ತಣ್ಣಗಾಗಲು ಬಿಡಿ.

ಇನ್ನೊಂದು ಬಾಣಲೆಯಲ್ಲಿ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ ಕರಗಿಸಿ. ಅದಕ್ಕೆ ತುರಿದ ತೆಂಗಿನಕಾಯಿ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಸಿಹಿ ಹೂರಣವನ್ನು ಸ್ವಲ್ಪ ಹೊತ್ತು ಬೇಯಿಸಿ ಇಳಿಸಿಕೊಳ್ಳಿ.

ಈಗ ಅಕ್ಕಿ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿಕೊಂಡು ಕೈಯಿಂದ ತೆಳುವಾಗಿ ಮಾಡಿ, ಮಧ್ಯದಲ್ಲಿ ಸಿಹಿ ಹೂರಣ ಹಾಕಿ ಕಡುಬಿನ ಆಕಾರದಲ್ಲಿ ಮುಚ್ಚಿ. ಕೊನೆಗೆ ಇವುಗಳನ್ನು ಆವಿಯಲ್ಲಿ ಸುಮಾರು 10–15 ನಿಮಿಷ ಬೇಯಿಸಿದರೆ ಸಾಕು ರೆಡಿಯಾಗುತ್ತೆ ಕಡುಬು.

ಬಿಸಿಬಿಸಿ ಸಿಹಿ ಕಡುಬು ರೆಡಿ! ಗಣೇಶನಿಗೆ ನೈವೇದ್ಯ ಅರ್ಪಿಸಿ, ಮನೆಯವರೆಲ್ಲರೂ ಪ್ರಸಾದವಾಗಿ ಸವಿಯಿರಿ. ಹಬ್ಬದ ಸಂಭ್ರಮಕ್ಕೆ ಈ ಸಿಂಪಲ್ ಕಡುಬು ಪರ್ಫೆಕ್ಟ್!

 

Kishor KV