ಕ್ರಿಕೆಟ್‌ನಲ್ಲಿ 2025ರ 5 ಚಮತ್ಕಾರ – RCBಗೂ ಕಪ್, RO -KO ಲಕ್
ಟೀಂ IND ಮಡಿಲಿಗೆ 2 ICC ಟ್ರೋಫಿ

ಕ್ರಿಕೆಟ್‌ನಲ್ಲಿ 2025ರ 5 ಚಮತ್ಕಾರ – RCBಗೂ ಕಪ್, RO -KO ಲಕ್ಟೀಂ IND ಮಡಿಲಿಗೆ 2 ICC ಟ್ರೋಫಿ

2025 ಕ್ರಿಕೆಟ್ ಜಗತ್ತಿಗೆ ಮರೆಯಲಾಗದ ವರ್ಷ.. ಈ ವರ್ಷ ಕ್ರಿಕೆಟ್ ಫ್ಯಾನ್ ನದು, ದುಖಃ, ಉತ್ಸಾಹ ಎಲ್ಲವನ್ನೂ ಒಟ್ಟಿಗೆ ನೋಡಿದ್ದಾರೆ. 2025 ರಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಕಪ್ ಗೆಲ್ಲದ ಟೀಂಗಳು 2025ರಲ್ಲಿ ಕಪ್ ಎತ್ತಿ ಹಿಡಿದಿವೆ. 2025 ರಲ್ಲಿ ಕಪ್ ಕನಸು ಕಾಣುತ್ತಿದ್ದ ತಂಡವನ್ನ ಚಾಂಪಿಯನ್ ಮಾಡಿದೆ, ರೋಮಾಂಚಕ ಫೈನಲ್ಗಳು ಕ್ರಿಕೆಟ್ ಅಭಿಮಾನಿಗಳಿಗ ಸತಕ್ ಕಿಕ್ ಕೊಟ್ಟಿದೆ.

12 ವರ್ಷಗಳ ನಂತ್ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

ಟೀಂ ಇಂಡಿಯಾ 2025ರಲ್ಲಿ  ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಈ ಮೂಲಕ 2013 ರ ನಂತರ ಮೊದಲ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ದುಬೈನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿ ಮತ್ತೊಮ್ಮೆ ಈ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದರು. ಟೀಮ್ ಇಂಡಿಯಾ ಸ್ಪಿನ್ನರ್ಸ್ ಬೌಲಿಂಗ್ ದಾಳಿ ಮತ್ತು ಬ್ಯಾಟರ್ಸ್ ಅಬ್ಬರದ ಮುಂದೆ ನ್ಯೂಜಿಲೆಂಡ್ ಮಂಡಿಯೂರಿತು.

ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್ ರಾಹುಲ್? – ಕ್ಯಾಪ್ಟನ್ ಪಟ್ಟದಿಂದ ಅಕ್ಷರ್ ಪಟೇಲ್ ಔಟ್

ಚೊಚ್ಚಲ ಟ್ರೋಫಿ ಗೆದ್ದ RCB

ಐಪಿಎಲ್‌ 17 ಸೀಸನ್‌ಗಳಲ್ಲಿ ಆರ್‌ಸಿಬಿ ಕಪ್ ಗೆದ್ದಿರಲಿಲ್ಲ.. ಆರ್‌ಸಿಬಿ ಕಪ್ ಗೆಲ್ಲೋದೇ ಇಲ್ಲ ಅಂತ ಸಾಕಷ್ಟು ಟ್ರೋಲ್ ಆಗಿತ್ತು. ಒಂದು ಕಪ್ಪು ಚುಕ್ಕೆ ಆಗಿತ್ತು. ಆದ್ರೆ 2025 ರಲ್ಲಿ 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. 2008 ರಿಂದ ಮೂರು ಫೈನಲ್‌ಗಳಲ್ಲಿ ಸೋತ ನಂತರ, ಆರ್ಸಿಬಿ ಅಂತಿಮವಾಗಿ 2025 ರಲ್ಲಿ ರಜತ್ ಪಟಿದಾರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗಿತ್ತು. ವಿರಾಟ್ ಕೊಹ್ಲಿಯ ಕಣ್ಣೀರು, ಫ್ಯಾನ್ಸ್  ಹುಚ್ಚೆದ್ರು ಕುಣಿದ್ರು. ಆದ್ರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆಚರಣೆಗಳು ಮತ್ತು ಅಭಿಮಾನಿಗಳ ಸಂಭ್ರಮಾಚರಣೆ ನಡೆದ ಕಹಿ ಘಟನೆ ಆರ್‌ಸಿಬಿಗೆ ಒಂದು ಕಪ್ಪು ಚುಕ್ಕೆಯಾಗಿ ಉಳಿದಿದೆ.

ಪಾಕ್ ವಿರುದ್ಧ ಏಷ್ಯಾಕಪ್‌ ಗೆದ್ದ ಟೀಂ IND   

ಏಷ್ಯಾಕಪ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿತ್ತು. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಒಂಬತ್ತನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಿಲಕ್ ವರ್ಮಾ ಅವರ ಅಜೇಯ ಇನ್ನಿಂಗ್ಸ್ ಭಾರತದ ಗೆಲುವನ್ನು ಸ್ಮರಣೀಯವಾಗಿಸಿತು. ಭಾರತವು ಟೂರ್ನಿಯಲ್ಲಿ ಮೂರು ಬಾರಿ ಪಾಕಿಸ್ತಾನವನ್ನು ಸೋಲಿಸಿತು. ಈ ವರ್ಷ ಭಾರತ ಪಾಕಿಸ್ತಾನ ನಡುವಿನ ಕಿರಿಕ್ ನಡುವೆ ಈ ಪಂದ್ಯ ಎರಡು ದೇಶಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ವು.

ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಭಾರತ   

ಇನ್ನೂ 2025ರಲ್ಲಿ ಮೊದಲ ಬಾರಿಗೆ ಭಾರತ ತಂಡ ಮಹಿಳಾ ವಿಶ್ವಕಪ್ ಗೆದ್ದಿದೆ. ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 52 ರನ್‌ಗಳಿಂದ ಸ್ಮರಣೀಯ ಜಯ ಸಾಧಿಸಿತು. ಈ ಗೆಲುವು ಭಾರತದ ಮೊದಲ ಮಹಿಳಾ ವಿಶ್ವಕಪ್ ಪ್ರಶಸ್ತಿಯಾಗಿದ್ದು, ದೇಶಾದ್ಯಂತ ಹೊಸ ಹುರುಪು ತಂದಿದೆ.

ಹರಿಣಗಳ ಮಡಿಲಿಗೆ ಐಸಿಸಿ ಟ್ರೋಫಿ

ದಕ್ಷಿಣ ಆಫ್ರಿಕಾ ತಂಡ 27 ವರ್ಷಗಳ ಬಳಿಕ ಐಸಿಸಿ  ಪ್ರಶಸ್ತಿಯನ್ನು  ಗೆದ್ದು ಕೊಳ್ತು. ಇದು ಕ್ರಿಕೆಟ್ ಲೋಕದ ಐತಿಹಾಸಿಕ ಕ್ಷಣಗಳಲ್ಲಿ ಒಂದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವಿರುದ್ಧ ದಕ್ಷಿಣ ಆಫ್ರಿಕಾ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಮೂಲಕ 27 ವರ್ಷಗಳ ನಂತರ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ದಕ್ಷಿಣ ಆಫ್ರಿಕಾ ಯಶಸ್ವಿಯಾಗಿತ್ತು. ದಕ್ಷಿಣ ಆಫ್ರಿಕಾ ಕೊನೆಯ ಬಾರಿಗೆ ಐಸಿಸಿ ಪ್ರಶಸ್ತಿಯನ್ನು ಗೆದ್ದದ್ದು 1998 ರ ಚಾಂಪಿಯನ್ಸ್ ಟ್ರೋಫಿಯಾಗಿತ್ತು.ಅಂದಿನಿಂದ, ಹರಿಣಗಳ ಪಡೆ ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ಸೋಲನುಭವಿಸುತ್ತಿತ್ತು. ಆದ್ರೆ 2025ರಲ್ಲಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತು.

  WBBL ಹೊಸ ಚಾಂಪಿಯನ್

ಮಹಿಳಾ ಬಿಗ್ ಬ್ಯಾಷ್ 11ನೇ ಸೀಸನ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು ಮೊದಲ ಪ್ರಶಸ್ತಿಯನ್ನು ಗೆದ್ದಿತು. ಪರ್ತ್ ಸ್ಕಾರ್ಚರ್ಸ್ ವಿರುದ್ಧದ ಫೈನಲ್ ನಲ್ಲಿ ಲಿಜೆಲ್ಲೆ ಲೀ ಅವರ ಅಜೇಯ 77 ರನ್‌ಗಳು ತಂಡವನ್ನು ಚಾಂಪಿಯನ್ ಮಾಡಿತ್ತು. 11ನೇ ಸೀಸನ್‌ಗಳ ನಂತರ ಹೋಬಾರ್ಟ್ ಹರಿಕೇನ್ಸ್ ಚಾಂಪಿಯನ್ ಆಗಿದ್ದನ್ನು ನೋಡಿ ಅಭಿಮಾನಿಗಳು ಕಣ್ಣೀರು ಹಾಕಿದರು.  ಇದು 2025ರಲ್ಲಿ ಕ್ರಿಕೆಟ್ ಲೋಕ ಗೆದ್ದ ಪ್ರಮುಖ ಟ್ರೋಫಿಗಳು.

Kishor KV