ಕ್ಯಾಪ್ಟನ್ಸಿ ಕಿತ್ಕೊಂಡ ಗಂಭೀರ್ ಗೆ ಗುದ್ದು – ರೋಹಿತ್ ಫಿಟ್ & ಫೈನ್ ಸಂದೇಶವೇನು?
ದ್ರಾವಿಡ್ ಗುಣಗಾನವೇ ಹೇಳಿತಾ ಗುಟ್ಟು?

 ಕ್ಯಾಪ್ಟನ್ಸಿ ಕಿತ್ಕೊಂಡ ಗಂಭೀರ್ ಗೆ ಗುದ್ದು – ರೋಹಿತ್ ಫಿಟ್ & ಫೈನ್ ಸಂದೇಶವೇನು?ದ್ರಾವಿಡ್ ಗುಣಗಾನವೇ ಹೇಳಿತಾ ಗುಟ್ಟು?

ಕಳೆದೊಂದು ವರ್ಷದಿಂದ ಟೀಂ ಇಂಡಿಯಾದ ಚಿತ್ರಣವೇ ಬದಲಾಗಿದೆ. ಮೊದಲಿಗೆ ಟಿ-20ಐ ಆನಂತ್ರ ಟೆಸ್ಟ್ ಈಗ ಏಕದಿನ ಮಾದರಿ. ಆಸ್ಟ್ರೇಲಿಯಾ ಸರಣಿಗೂ ಮುನ್ನ ಭಾರತ ಏಕದಿನ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಿ ಶುಭ್​ಮನ್​ಗಿಲ್​ಗೆ ಬಿಸಿಸಿಐ ನಾಯಕತ್ವ ನೀಡಿದೆ. ಕ್ಯಾಪ್ಟನ್ಸಿ ಕಳ್ಕೊಂಡಿರೋ ರೋಹಿತ್ ಶರ್ಮಾಗೆ ಸಹಜವಾಗಿಯೇ ಹರ್ಟ್ ಆಗಿದೆ. ಈ ಬಗ್ಗೆ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದಾರೆ ಕೂಡ. ಮಾಜಿ ಕೋಚ್ ರಾಹುಲ್ ದ್ರಾವಿಡ್ ರನ್ನ ಗುಣಗಾನ ಮಾಡೋ ಮೂಲಕವೇ ಹಾಲಿ ಕೋಚ್ ಗೌತಮ್ ಗಂಭೀರ್ ಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ : ಬಿಸಿಸಿಐ ಅಧ್ಯಕ್ಷನ ಜೊತೆ ವೀರೇಂದ್ರ ಸೆಹ್ವಾಗ್ ಪತ್ನಿಗೆ ಆಫೇರ್? – ಗೆಳೆಯ ವೀರುಗೆ ಮಿಥುನ್ ನಂಬಿಕೆ ದ್ರೋಹ?

ಚಾಂಪಿಯನ್ಸ್ ಟ್ರೋಫಿ ಕ್ರೆಡಿಟ್ ದ್ರಾವಿಡ್ ಗೆ ಅರ್ಪಿಸಿದ ರೋಹಿತ್!

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀ ಇಂಡಿಯಾ ಎರಡು ಐಸಿಸಿ ಟ್ರೋಫಿಗಳನ್ನ ಗೆದ್ದಿದೆ. ಮೊದ್ಲಿಗೆ 2024ರಲ್ಲಿ ಟಿ-20 ವಿಶ್ವಕಪ್ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ. ನಾಯಕ ಒಬ್ರೇ ಆಗಿದ್ರೂ ಕೂಡ ಕೋಚ್​ಗಳು ಬೇರೆ ಬೇರೆ. 2024ರ ಟಿ-20 ವಿಶ್ವಕಪ್ ಟೈಮಲ್ಲಿ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ರು. 2025ರ ಚಾಂಪಿಯನ್ಸ್ ಟ್ರೋಫಿ ಟೈಮಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆಗಿದ್ರು. ಆದ್ರೆ  ಗಂಭೀರ್ ಕೋಚಿಂಗ್​​ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದರೂ, ಈ ಯಶಸ್ಸಿಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ಕಾರಣ ಅನ್ನೋ ಮೂಲಕ ರೋಹಿತ್ ಟ್ವಿಸ್ಟ್ ಕೊಟ್ಟಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಿಯೆಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್​ ಗೆ ಸೈಲೆಂಟಾಗೇ ಬಿಸಿ ಮುಟ್ಟಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆಲ್ಲೋದು ಒಂದು ಅಥವಾ ಎರಡು ವರ್ಷಗಳ ಕೆಲಸವಾಗಿರಲಿಲ್ಲ. ಟ್ರೋಫಿ ಗೆಲ್ಲಲು ನಾವು ವರ್ಷಗಳ ಕಾಲ ಯೋಜನೆ ರೂಪಿಸಿದ್ದೆವು. 2024ರ ಟಿ-20 ವಿಶ್ವಕಪ್ ಗೆದ್ದು ಇದೇ ಯೋಜನೆಗಳನ್ನು ನಾವು ಚಾಂಪಿಯನ್ಸ್ ಟ್ರೋಫಿಯಲ್ಲೂ ಅಳವಡಿಸಿದೆವು. ಚಾಂಪಿಯನ್ಸ್ ಟ್ರೋಫಿಗಾಗಿ ದ್ರಾವಿಡ್ ಅವರೇ ಅಡಿಪಾಯ ಹಾಕಿಕೊಟ್ಟಿದ್ದರು. ಹೀಗಾಗಿಯೇ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ದ್ರಾವಿಡ್ ಅವರ ಪಾತ್ರ ಕೂಡ ಇದೆ ಅನ್ನೋ ಮೂಲಕ ಗೌತಮ್ ಗಂಭೀರ್​ ಬಗ್ಗೆ ಖಡಕ್ ಕೌಂಟರ್ ಕೊಟ್ಟಿದ್ದಾರೆ. ಹಾಗೇ ರೋಹಿತ್ ಮತ್ತು ದ್ರಾವಿಡ್ ನಡುವಿನ ಬಾಂಡಿಂಗ್ ಎಂಥಾದ್ದು ಅನ್ನೋದನ್ನೂ ಬಿಚ್ಚಿಟ್ಟಿದ್ದಾರೆ.

 ರೋಹಿತ್ ಗೆ ಕೆಲಸದ ಪತ್ನಿ ದ್ರಾವಿಡ್ ಎಂದಿದ್ದ ರಿತಿಕಾ!

ರೋಹಿತ್ ಶರ್ಮಾ ಫ್ಯಾಮಿಲಿ ಅತಿ ಹೆಚ್ಚು ಗೌರವಿಸೋ ವ್ಯಕ್ತಿ ಅಂದ್ರೆ ರಾಹುಲ್ ದ್ರಾವಿಡ್. 2024ರ ಟಿ-20 ವಿಶ್ವಕಪ್ ಗೆದ್ದ ಮೇಲೆ ದ್ರಾವಿಡ್ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ರು. ಈ ವೇಳೆ ರೋಹಿತ್ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆಯೋ ಮೂಲಕ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ರು. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ. ನಿಮ್ಮೊಂದಿಗಿನ ಪ್ರತಿಯೊಂದು ಕ್ಷಣವೂ ನೆನಪಿನಲ್ಲಿ ಉಳಿಯುತ್ತೆ. ನನ್ನ ಹೆಂಡತಿ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾಳೆ. ನಿಮ್ಮನ್ನು ಹಾಗೆ ಕರೆಯಲು ನಾನು ಅದೃಷ್ಟಶಾಲಿ ಎಂದು ಭಾವುಕ ಸಂದೇಶ ಬರೆದಿದ್ರು. ಯಾಕಂದ್ರೆ ದ್ರಾವಿಡ್ ಜೊತೆ ರೋಹಿತ್ ಆ ಮಟ್ಟಿಗೆ ಅಟ್ಯಾಚ್ ಆಗಿದ್ರು.  ಬಟ್ ಗಂಭೀರ್ ವಿಚಾರದಲ್ಲಿ ಹಾಗಾಗ್ತಿಲ್ಲ.

ಕ್ಯಾಪ್ಟನ್ಸಿ ಬದಲಿಸಿ ಹ್ಯಾಂಡಲ್ ಮಾಡಲು ಎಡವಿದ್ರಾ ಗಂಭೀರ್?

ಌಕ್ಚುಲಿ ಇಲ್ಲಿ ಶುಭ್​ಮನ್ ಗಿಲ್​ಗೆ ಏಕದಿನ ನಾಯಕತ್ವದ ಜವಾಬ್ದಾರಿ ನೀಡಿರೋದು ಮಹಾ ಅಪರಾಧ ಏನೂ ಅಲ್ಲ. ಭಾರತದ ಭವಿಷ್ಯದ ದೃಷ್ಟಿಯಿಂದ ಒಳ್ಳೆ ನಿರ್ಧಾರವೇ. ಆದ್ರೆ ಅದನ್ನ ಸರಿಯಾಗಿ ಕನ್ವೆ ಮಾಡುವಲ್ಲಿ ಎಡವುತ್ತಾ ಇರೋದು ಗೌತಮ್ ಗಂಭೀರ್. ರೋಹಿತ್ ಶರ್ಮಾ ತಲೆಯಲ್ಲಿ ಕ್ಯಾಪ್ಟನ್ಸಿಗಿಂತ 2027ರ ವಿಶ್ವಕಪ್ ಮೇಲೆಯೇ ಕಣ್ಣಿದೆ. ತಮ್ಮ ಲೈಫಲ್ಲಿ ಅದೊಂದು ಗೆಲ್ಲಲೇಬೇಕು ಅಂದಿದ್ರು. ಹೀಗಾಗೇ ಆಸ್ಟ್ರೇಲಿಯಾ ಸರಣಿಗೂ ಮುನ್ನ ಯಂಗ್​ಸ್ಟರ್ಸ್ ಕೂಡ ನಾಚುವಂತೆ ಫಿಟ್ ಌಂಡ್ ಫೈನ್ ಆಗಿ ಕಮ್ ಬ್ಯಾಕ್ ಮಾಡಿದ್ದಾತೆ. 10ರಿಂದ 15 ಕೆಜಿ ತೂಕ ಇಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನ ನಾನು ಎಂಜಾಯ್ ಮಾಡ್ತೇನೆ ಅಂದಿದ್ದಾರೆ. ಸೋ ಅಲ್ಲಿಗೆ ಮೈದಾನಕ್ಕಿಳಿದು ಬೆಸ್ಟ್ ಪರ್ಫಾಮೆನ್ಸ್ ಕೊಡೋ ಮೈಂಡ್​ಸೆಟ್​ನಲ್ಲೇ ಇದ್ದಾರೆ. ಆದ್ರೆ ಇಲ್ಲಿ ಎಡವುತ್ತಾ ಇರೋದು ಗಂಭೀರ್. ಒಬ್ಬ ಕೋಚ್ ಆಗಿ ಹಿರಿಯ ಆಟಗಾರರನ್ನ ಹೇಗೆ ನಡೆಸಿಕೊಳ್ಬೇಕು ಅನ್ನೋದ್ರಲ್ಲಿ ಸ್ವಲ್ಪ ಎಡವಿದ್ದಾರೆ. ವಿರಾಟ್ ಕೊಹ್ಲಿಯವ್ರನ್ನ ಕ್ಯಾಪ್ಟನ್ಸಿಯಿಂದ ತೆಗೆದಾಗ ಅವ್ರಿಗೂ ಹರ್ಟ್ ಆಗಿತ್ತು. ಬಟ್ ಆ ಟೈಮಲ್ಲಿ ರಾಹುಲ್ ದ್ರಾವಿಡ್ ಹ್ಯಾಂಡಲ್ ಮಾಡಿದ್ದ ರೀತಿ ನಿಜಕ್ಕೂ ಅತ್ಯದ್ಭುತ. ದ್ರಾವಿಡ್ ಕೊಹ್ಲಿಗೆ ಕಮ್ಯುನಿಕೇಟ್ ಮಾಡುವಲ್ಲಿ ಯಶಸ್ವಿಯಾಗಿದ್ರು. ಇನ್ನು ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದು ಕೊಹ್ಲಿ ಕ್ಯಾಪ್ಟನ್ ಆದಾಗ್ಲೂ ಸೇಮ್ ಸಿಚುಯೇಷನ್. ಕೊಹ್ಲಿ ಯಾವತ್ತೂ ಧೋನಿಯನ್ನ ಇಗ್ನೋರ್ ಮಾಡ್ತಾ ಇರ್ಲಿಲ್ಲ. ಯಾವುದೇ ಡಿಆರ್ ಎಸ್ ತಗೊಳ್ಳುವಾಗ ಧೋನಿ ಸಜೇಷನ್ ಕೇಳೇ ಕೇಳ್ತಿದ್ರು. ಅದೊಂಥರಾ ಸ್ಮೂತ್ ನೆಸ್ ಕಾಣ್ತಿತ್ತು. ಈಗ್ಲೂ ಅಷ್ಟೇ ರೋಹಿತ್ ತಂಡದಲ್ಲಿ ಇದ್ದಾಗ್ಲೇ ಗಿಲ್ ನಾಯಕನಾಗಿರೋದು ಅವ್ರ ಸಜೇಷನ್, ಎಕ್ಸ್​ಪಿರಿಯನ್ಸ್, ಟ್ರಿಕ್ಸ್ ತಿಳ್ಕೊಳ್ಳೋಕೆ ಒಂದೊಳ್ಳೆ ಅವಕಾಶವೇ. ಆದ್ರೆ ರೋಹಿತ್​ರನ್ನ ಹೇಗೆ ಹ್ಯಾಂಡಲ್ ಮಾಡ್ಬೇಕು ಅನ್ನೋದು ಗಂಭೀರ್​ಗೆ ಗೊತ್ತಾಗ್ತಿಲ್ಲ. ಅಥವಾ ಹೊರಜಗತ್ತಿಗೆ ಹಾಗೇ ಕಾಣ್ತಿದ್ಯೇನೋ. ಅಂದ್ರೆ ನೋಡೋರಿಗೆ ಒಂಥರಾ ಹಾರ್ಶ್ ಆಗಿ ಕಾಣ್ತಿದೆ. ರೋಹಿತ್​ರನ್ನ ಕೇವಲವಾಗಿ ನಡೆಸಿಕೊಳ್ತಿದ್ದಾರೇನೋ ಅನ್ನಿಸ್ತಿದೆ. ರೋಹಿತ್ ಶರ್ಮಾ ಅವ್ರ ಡೆಡಿಕೇಷನ್ ನೋಡ್ತಿದ್ರೆ 2027ರ ವಿಶ್ವಕಪ್​ನಲ್ಲಿ ಆಟಗಾರನಾಗಿಯಾದ್ರೂ ಆಡೋಕೆ ರೆಡಿ ಅನ್ನೋ ಥರನೇ ಇದೆ.

Shantha Kumari