ಕೊನೆಗೂ ಪಂದ್ಯ ಗೆದ್ದ ಸಿಎಸ್‌ಕೆ – 2 ವಿಕೆಟ್‌ಗಳಿಂದ ಸೋತ ಕೋಲ್ಕತ್ತಾ ನೈಟ್ ರೈಡರ್ಸ್

ಕೊನೆಗೂ ಪಂದ್ಯ ಗೆದ್ದ ಸಿಎಸ್‌ಕೆ –  2 ವಿಕೆಟ್‌ಗಳಿಂದ ಸೋತ ಕೋಲ್ಕತ್ತಾ ನೈಟ್ ರೈಡರ್ಸ್

ಚೆನ್ನೈ ಸೂಪರ್ ಕಿಂಗ್ಸ್  ಕೊನೆಗೂ ತನ್ನ ಸೋಲಿನ ಸರಣಿಯನ್ನು ಕೊನೆಗೊಳಿಸಿದ್ದು ಪಂದ್ಯಾವಳಿಯಲ್ಲಿ ತನ್ನ ಮೂರನೇ ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್   ತಂಡವನ್ನು 2 ವಿಕೆಟ್‌ಗಳಿಂದ ಸೋಲಿಸುವಲ್ಲಿ ಸಿಎಸ್​ಕೆ ಯಶಸ್ವಿಯಾಗಿದೆ. ಇದರೊಂದಿಗೆ, ಚೆನ್ನೈ ತಂಡವು ಹಾಲಿ ಚಾಂಪಿಯನ್ ಕೋಲ್ಕತಾ ತಂಡವನ್ನು ಪ್ಲೇಆಫ್ ರೇಸ್‌ನಿಂದ ಹೊರಗಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಗೆಲುವಿಗೆ 180 ರನ್ ಗಳ ಗುರಿಯನ್ನು ನೀಡಿತು. ಈ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಉಳಿಸಿಕೊಂಡು ಗೆದ್ದುಕೊಂಡಿತು.

 

ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್​ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಗುರ್ಬಾಜ್ ಕೇವಲ 11 ರನ್‌ಗಳಿಗೆ ಔಟಾದರು. ನಂತರ ಸುನಿಲ್ ನರೈನ್ 26 ರನ್ ಗಳಿಸಿ ಟೆಂಟ್ ಸೇರಿಕೊಂಡರು. ನಾಯಕ ಅಜಿಂಕ್ಯ ರಹಾನೆ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ 48 ರನ್ ಗಳಿಸಿದರೆ, ಆಂಗ್ಕ್ರಿಶ್ ರಘುವಂಶಿ ಕೇವಲ ಒಂದು ರನ್‌ಗೆ ತೃಪ್ತಿಪಡಬೇಕಾಯಿತು. ಮನೀಶ್ ಪಾಂಡೆನ್ ಅಜೇಯ 38 ರನ್ ಗಳಿಸಿದರೆ, ಆಂಡ್ರೆ ರಸೆಲ್ 21 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 38 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲೂ ರಿಂಕು ವಿಫಲರಾಗಿ ಕೇವಲ 9 ರನ್ ಗಳಿಸಿದರು. ರಮಣದೀಪ್ ಸಿಂಗ್ ಅಜೇಯ 4 ರನ್ ಗಳಿಸಿದರು.

 

ಈ ರನ್‌ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಳಪೆ ಆರಂಭವನ್ನು ಪಡೆಯಿತು. ಆರಂಭಿಕರಾದ ಆಯುಷ್ ಮ್ಹಾತ್ರೆ ಮತ್ತು ಡೆವೊನ್ ಕಾನ್ವೇ ಖಾತೆ ತೆರೆಯದೆ ಔಟಾದರು. ಆದರೆ ಚೊಚ್ಚಲ ಪಂದ್ಯವನ್ನಾಡಿದ ಉರ್ವಿಲ್ ಪಟೇಲ್11 ಎಸೆತಗಳಲ್ಲಿ ಆಕ್ರಮಣಕಾರಿಯಾಗಿ 31 ರನ್ ಗಳಿಸಿದರು. ರವಿಚಂದ್ರನ್ ಅಶ್ವಿನ್ 8 ರನ್ ಗಳಿಸಿ ಔಟಾದರೆ, ರವೀಂದ್ರ ಜಡೇಜ 19 ರನ್ ಗಳಿಸಿ ಔಟಾದರು. ಆದ್ದರಿಂದ, ಈ ಪಂದ್ಯವು ಕೋಲ್ಕತ್ತಾ ಪರವಾಗಿ ವಾಲಿತು. ಆದರೆ ಡೆವೋಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟವಾಡಿದರು. ಡೆವೋಲ್ಡ್ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 52 ರನ್ ಗಳಿಸಿದರೆ, ಶಿವಂ ದುಬೆ ತಾಳ್ಮೆಯ ಆಟವಾಡಿ 40 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 45 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಸಿಎಸ್​ಕೆ ತಂಡಕ್ಕೆ 8 ಎಸೆತಗಳಲ್ಲಿ 10 ರನ್‌ ಬೇಕಾಗಿತ್ತು.

 

Kishor KV

Leave a Reply

Your email address will not be published. Required fields are marked *