ಒಟ್ಟಗೆ ಶತಕ ಸಿಡಿಸಿ ಮಿಂಚಿದ ರುತುರಾಜ್ ಗಾಯಕ್ವಾಡ್ & ವಿರಾಟ್ ಕೊಹ್ಲಿ

ಒಟ್ಟಗೆ ಶತಕ ಸಿಡಿಸಿ ಮಿಂಚಿದ ರುತುರಾಜ್  ಗಾಯಕ್ವಾಡ್ & ವಿರಾಟ್ ಕೊಹ್ಲಿ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್  ಮತ್ತು ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿ ಬಾರಿಸಿದ್ದಾರೆ.  ರುತುರಾಜ್  77 ಬಾಲ್‌ನಲ್ಲಿ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಇದು ಇವರ ಏಕದಿನ ಪಂದ್ಯದಲ್ಲಿ ಮೊದಲ ಸೆಂಚುರಿಯಾಗಿದೆ.  ಇನ್ನೂ ವಿರಾಟ್ ಕೊಹ್ಲಿ 90 ಬಾಲ್‌ ನಲ್ಲಿ  7 ಫೋರ್ , 2 ಸಿಕ್ಸ್‌ಗಳೊಂದಿಗೆ ಶತಕ ಸಿಡಿಸಿದ್ದಾರೆ.  ಈ ಶತಕದೊಂದಿಗೆ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 53ನೇ ಶತಕ ಬಾರಿಸಿದರು.

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 2ನೇ ಏಕದಿನ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮತ್ತೊಮ್ಮೆ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದ ಪರ ರುತುರಾಜ್  ಮತ್ತು ವಿರಾಟ್ ಇಬ್ಬರು ಸೆಂಚುರಿ ಸಿಡಿಸಿ ತಂಡ ಸ್ಕೋರ್  250 ರನ್​ಗಳ ಗಡಿ ದಾಟಿಸಿದ್ರು. ಆದ್ರೆ ಸೆಂಚುರಿ ಸಿಡಿಸುತ್ತಿದ್ದಂತೆ ಇಬ್ಬರು ಕೂಡ ಔಟ್ ಆದ್ರು. 83 ಬಾಲ್‌ನಲ್ಲಿ 105 ರನ್‌ಗಳಿಸಿ  ರುತುರಾಜ್ ಔಟ್ ಆದ್ರೆ, 93 ಬಾಲ್‌ನಲ್ಲಿ 102 ರನ್‌ ಗಳಿಸಿ ಕೊಹ್ಲಿ ಓಟ್ ಆದ್ರು.

ರೋಹಿತ್‌ ಶರ್ಮಾ (14) ಹಾಗೂ ಯಶಸ್ವಿ ಜೈಸ್ವಾಲ್‌ (22) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಭಾರತ 62 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ರುತುರಾಜ್‌ ಗಾಯಕ್ವಾಡ್‌ ಹಾಗೂ ವಿರಾಟ್‌ ಕೊಹ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಿದರು. ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ಮನ ಬಂದಂತೆ ಕಾಡಿದ ಜೋಡಿ ಅಬ್ಬರಿಸಿತು. ವಿರಾಟ್‌, ರುತುರಾಜ್‌ ಗಾಯಕ್ವಾಡ್‌ ಜೋಡಿ 156 ಎಸೆತಗಳಲ್ಲಿ 195 ರನ್‌ಗಳ ಜತೆಯಾಟವನ್ನು 3ನೇ ವಿಕೆಟ್‌ಗೆ ನೀಡಿತು.

Kishor KV