ಒಂದು ಹೊತ್ತಿನ ಊಟಕ್ಕೂ ಪರದಾಟ – ಗಾಜಾದಲ್ಲಿ ಹಸಿವಿನ ರಣಕೇಕೆ
ಇಸ್ರೇಲ್ ದಾಳಿ..ಕ್ಷಣಕ್ಷಣ ನರಕ
ಯುದ್ಧ ಅನ್ನೋ ಪದ ಕೇಳಿದ್ರೆ ಭಯ ಆಗುತ್ತೆ.. ಯುದ್ಧ ಯಾರಿಗೂ ಲಾಭ ಇಲ್ಲದಿದ್ದರೂ ಆಗುವ ನಷ್ಟವೇ ಹೆಚ್ಚು..ಎರಡು ದೇಶಗಳ ಪ್ರತಿಷ್ಠೆಗೆ ಬಲಿಯಾಗೋದು ಅಲ್ಲಿನ ಅಮಾಯಕ ಜನ.. ಅದರಲ್ಲೂ ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದ ದಾಳಿಗೆ ವರ್ಷಗಳು ಕಳೆದಿವೆ..ಹೀಗಾಗಿ ದಿನ ನಿತ್ಯ ಗಾಜಾಪಟ್ಟಿ ಮತ್ತು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ. ಹಮಾಸ್ ಮತ್ತು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸುತ್ತಿದ್ದು, ಗಾಜಾಪಟ್ಟಿಯ ಬೀದಿ ಬೀದಿಗಳಲ್ಲಿ ಹೆಣಗಳು ಬೀಳುತ್ತಿವೆ.. ಕಟ್ಟಡಗಳು ಧ್ವಂಸವಾಗಿ ಗಾಜಾಪಟ್ಟಿ ಸ್ಮಶಾನದಂತೆ ಆಗಿದೆ. ಅದರಲ್ಲೂ ಜನ ಮನೆ ಮಠಗಳನ್ನ ಕಳೆದುಕೊಂಡು ಬೀದಿದೆ ಬಿಳುತ್ತಿದ್ದಾರೆ. ಒಂದೊಂದು ದೃಶ್ಯಗಳು ಕರಳು ಹಿಂಡುವಂತಿದೆ..
ಇದನ್ನೂ ಓದಿ:2 ಇನ್ನಿಂಗ್.. 11 ವಿಕೆಟ್.. SUPER MAN ವಾಷಿಂಗ್ಟನ್ – ಕಿವೀಸ್ ಕಿವಿ ಹಿಂಡಿದ್ದೇ ಸುಂದರ್
ಹೌದು.. ಸ್ಕ್ರೀನ್ ಮೇಲೆ ನೋಡಿ.. ಹೇಗಿದೆ ಗಾಜಾಪಟ್ಟಿಯಲ್ಲಿ ಜನರ ನರಳಾಟ ಅನ್ನೋದನ್ನ..ಒಂದೊಂದು ದೃಶ್ಯಗಳು ಅಲ್ಲಿನ ಭಯಾನಕತೆಯನ್ನ ಬಿಚ್ಚಿಡುತ್ತೆ.. ಇಲ್ಲಿನ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆಹಾರವಿಲ್ಲದೇ ನರಳಾಡುತ್ತಿದ್ದಾರೆ. ಇಸ್ರೇಲ್ ದಾಳಿಗೆ ಗಾಜಾಪಟ್ಟಿ ನರಕದಂತಾಗಿದೆ. ಮಕ್ಕಳು ಹಸಿವು ಹಸಿವು ಅಂತಾ ರೋಧನೆ ಪಡುತ್ತಿದ್ದಾರೆ.
ಹಸಿವಿನಿಂದ ಕಂಗೆಟ್ಟೆ ಗಾಜಾದ 90 % ಜನ..!
ಇಸ್ರೇಲ್ ನಿರಂತರ ದಾಳಿಗೆ ಗಾಜಾದಲ್ಲಿ ಹಸಿವು ನರ್ತನ ಮಾಡುತ್ತಿದೆ. ಒಂದು ತುತ್ತಿನ ಊಟಕ್ಕೂ ಇಲ್ಲಿನ ಜನ ಪರದಾಡುತ್ತಿದ್ದಾರೆ.. ಗಾಜಾದಲ್ಲಿರೋ 90 % ಜನ ಹಸಿವಿನಿಂದ ಕಂಗೆಟ್ಟು ಹೋಗಿದ್ದಾರೆ. ಕೆಲ NGO ಗಳು ಟೆಂಟ್ಗಳನ್ನ ಹಾಕಿ ನೀಡುತ್ತಿರುವ ಆಹಾರಕ್ಕೆ ಜನ ಮುಗಿ ಬೀಳುತ್ತಿದ್ದಾರೆ. ಪಾತ್ರೆಗಳನ್ನ ಬಡಿಯುತ್ತಾ ಊಟ ಊಟ ಅಂತಾ ಕೂಗುತ್ತಿದ್ದಾರೆ.. ಆಹಾರ, ಶುದ್ಧಗಾಳಿ, ಶೌಚಾಲಯಗಳು ಇಲ್ಲದೇ ಬೀದಿ ಬೀದಿಗಳಲ್ಲಿ ಜನ ನರಳಾಡುತ್ತಿದ್ದಾರೆ.. ಆ ಮಟ್ಟಿಗೆ ಗಾಜಾದೊಳಗೆ ಆಹಾರ ಹೋಗದಂತೆ ಇಸ್ರೇಲ್ ತಡೆಯುತ್ತಿದೆ. ಗಾಜಾದಲ್ಲಿ ಸುಮಾರು 1.8 ಮಿಲಿಯನ್ಗೂ ಹೆಚ್ಚು ಜನ ಹಸಿವಿನಿಂದ ನರಳಾಡುತ್ತಿದ್ದಾರೆ.. ಬ್ರೇಡ್ ಅಂಗಡಿಗಳು ಸಿಕ್ಕಿದ್ರೆ ಸಾಕು ಮುಗಿ ಬೀಳುತ್ತಿದ್ದಾರೆ. ಇಸ್ರೇಲ್ ನಡೆಸಿದ ದಾಳಿಯಲ್ಲಿ 70 % ರಷ್ಟು ಕೃಷಿ ಭೂಮಿ ನಾಶವಾಗಿ, ಜೀವನ ನಡೆಸೋಕೆ ಬೇಕಾದ ಎಲ್ಲಾ ವಸ್ತುಗಳು ಸರ್ವನಾಶವಾಗಿ ಹೋಗಿವೆ. ಹೀಗೆ ಗಾಜಾದಲ್ಲಿ ಕ್ಷಣ ಕ್ಷಣಕ್ಕೂ ಜನ ಬೆಚ್ಚಿ ಬೀಳುತ್ತಿದ್ದು, ಜನ ಹಸಿವಿನಿಂದ ಸಂಕಟ ಪಡುತ್ತಿದ್ದಾರೆ. ಹಾಗೇ ಇಸ್ರೇಲ್ ಬಾಂಬ್ ದಾಳಿಗೆ ಆಸ್ಪತ್ರೆಗಳು ಸಹ ಧ್ವಂಸ ಆಗುತ್ತಿದೆ. ಹಾಗೇ ಆಸ್ಪತ್ರೆಯೊಳಗೆ ನುಗ್ಗಿ ರೋಗಿಗಳಿಗೆ ಆಹಾರ, ಔಷಧಿಗಳು ಸಿಗದಂತೆ ಇಸ್ರೇಲ್ ಪಡೆಗಳು ತಡೆಯುತ್ತಿವೆ.