ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿದೆ – ಯಾರೂ ಭಯಪಡುವ ಅಗತ್ಯವಿಲ್ಲ – ಪಿಯೂಷ್ ಗೋಯಲ್

ಭಾರತೀಯ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕ ವಿಧಿಸುತ್ತಿರುವ ಕುರಿತು ಅಮೆರಿಕದೊಂದಿಗೆ ಮಾತುಕತೆಗಳು ನಡೆಯುತ್ತಿವೆ. ಹಾಗಾಗಿ, ಯಾರೂ ಸಹ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಉಭಯ ದೇಶಗಳ ವ್ಯಾಪಾರ ವಿಚಾರ ಪ್ರಸ್ತಾಪಿಸಿದ ಅವರು, ಭಾರತ ಮತ್ತು ಅಮೆರಿಕ ಸಮಾನ, ಸಮತೋಲಿತ ಮತ್ತು ನ್ಯಾಯಯುತ ಒಪ್ಪಂದಕ್ಕೆ ಬರುವುದು ಖಚಿತ. ಹಾಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.
ನಾವು ಮಾತುಕತೆಗೆ ಅವಕಾಶ ನೀಡಬೇಕು. ಅವಕಾಶ ನೀಡುವುದರಿಂದ ಉಭಯ ದೇಶಗಳ ನಡುವಿನ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ಸಮಾನ, ನ್ಯಾಯಯುತ ಮತ್ತು ಸಮತೋಲಿತ ಒಪ್ಪಂದಕ್ಕೆ ಬರಲು ಸಾಧ್ಯ. ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಮಾತುಕತೆಗೆ ಎಂದಿಗೂ ಇಂತಹದ್ದೇ ಸಮಯದ ಮಿತಿ ಅಂತ ಇರುವುದಿಲ್ಲ. ಭವಿಷ್ಯದ ದೃಷ್ಟಿಯಿಂದ ಅವುಗಳನ್ನು ತಾಳ್ಮೆಯಿಂದ ನೋಡಬೇಕು ಎಂದು ಗೋಯಲ್ ಹೇಳಿದ್ದಾರೆ. ಈ ಸುಧಾರಣೆಗಳು ರಾತ್ರೋರಾತ್ರಿ ಆಗಲು ಸಾಧ್ಯವಿಲ್ಲ. ಈ ಕೆಲಸ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದೆ. ಹಣಕಾಸು ಸಚಿವರು, ಕಾರ್ಯದರ್ಶಿಗಳು ಮತ್ತು ಸಚಿವರ ಗುಂಪು ಉಭಯ ದೇಶಗಳ ಸಂಬಂಧವನ್ನು ಸುಧಾರಣೆಗೆ ತರುವಲ್ಲಿ ಕೆಲಸ ಮಾಡುತ್ತಿದೆ. ಮುಂದಿನ ತ್ರೈಮಾಸಿಕದಲ್ಲಿ ಪರಿಹಾರ ಸೆಸ್ ಮುಗಿಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇವೆರಡೂ ದೇಶಗಳು ಹೊಂದಿಕೆಯಾಗಿರುವುದು ಕಾಕತಾಳೀಯ ಎಂದರು.
ಅಮೆರಿಕದಲ್ಲಿ ಬಳಕೆಗಾಗಿ ಪ್ರವೇಶಿಸುವ ಅಥವಾ ಬಳಕೆಗಾಗಿ ಗೋದಾಮುಗಳಿಂದ ಹಿಂತೆಗೆದುಕೊಳ್ಳುವ ಎಲ್ಲಾ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ಸುಂಕಗಳು ಅನ್ವಯಿಸುತ್ತವೆ. ಅಮೆರಿಕ ಹೇರಿರುವ ಈ ಸುಂಕಗಳ ಅನುಷ್ಠಾನದ ನಡುವೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ ಸುಧಾರಣೆಗಳನ್ನು ಘೋಷಿಸಲಾಗಿದ್ದರೂ, ತೆರಿಗೆ ಸುಧಾರಣೆಗಳ ಕುರಿತಾದ ಹತ್ತು ಹಲವು ಕೆಲಸಗಳು ಸುಮಾರು ತಿಂಗಳುಗಳಿಂದ ನಡೆಯುತ್ತಲೇ ಇವೆ. ಹಾಗಾಗಿ, ಅಮೆರಿಕದ ಹೆಚ್ಚುವರಿ ಸುಂಕ ಹಾಗೂ ಜಿಎಸ್ಟಿ ಎರಡೂ ಆಕಸ್ಮಿಕವಾಗಿ ಹೊಂದಿಕೆಯಾಗಿವೆ ಎಂದು ಪಿಯೂಷ್ ಗೋಯಲ್ ಹೇಳಿದ್ರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ವಿಧಿಸಿದ್ದರಿಂದ ಉಭಯ ರಾಷ್ಟ್ರಗಳ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಹಲವರು ಖಂಡಿಸಿದ್ದಾರೆ. ಮೋದಿ ಚೀನಾ ಜೊತೆ ಮಾತುಕತೆ ನಡೆಸಿರುವುದು ಕೂಡ ಟ್ರಂಪ್ ಸಿಟ್ಟು ನೆತ್ತಿಗೇರುವಂತೆ ಮಾಡಿದೆ.

ನೋಡಿರಿ

